ಮಾರುತಿ ಸುಜೂಕಿ ನೆಕ್ಸ್ಟ್ ಜೆನ್ ಎರ್ಟಿಗಾ ಮುಂಗಡ ಬುಕ್ಕಿಂಗ್ ಪ್ರಾರಂಭ

ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜೂಕಿ ತನ್ನ ಜನಪ್ರಿಯ ಕಾರು ಮಾದರಿ ಎರ್ಟಿಗಾದ ಮುಂದುವರೆದ ಆವೃತ್ತಿ ನೆಕ್ಸ್ಟ್ ಜೆನ್ ಎರ್ಟಿಗಾಗೆ ಪ್ರೀ-ಬುಕ್ಕಿಂಗ್ ಪ್ರಾರಂಭ ಮಾಡಿದೆ.

Published: 14th November 2018 12:00 PM  |   Last Updated: 14th November 2018 10:21 AM   |  A+A-

Maruti Suzuki next Gen Ertiga pre-bookings open

ಮಾರುತಿ ಸುಜೂಕಿ ನೆಕ್ಸ್ಟ್ ಜೆನ್ ಎರ್ಟಿಗಾ ಮುಂಗಡ ಬುಕ್ಕಿಂಗ್ ಪ್ರಾರಂಭ

Posted By : SBV
Source : Online Desk
ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜೂಕಿ ತನ್ನ ಜನಪ್ರಿಯ ಕಾರು ಮಾದರಿ ಎರ್ಟಿಗಾದ ಮುಂದುವರೆದ ಆವೃತ್ತಿ ನೆಕ್ಸ್ಟ್ ಜೆನ್ ಎರ್ಟಿಗಾಗೆ ಪ್ರೀ-ಬುಕ್ಕಿಂಗ್ ಪ್ರಾರಂಭ ಮಾಡಿದೆ. 
 
ನ.21 ರಂದು ಎರ್ಟಿಗಾದ ಹೊಸ ಆವೃತ್ತಿ ಬಿಡಿಗಡೆಯಾಗಲಿದ್ದು, ಇಂದಿನಿಂದಲೇ ಗ್ರಾಹಕರು ಹೊಸ ಕಾರಿಗಾಗಿ ಪ್ರಾರಂಭಿಕ ಮೊತ್ತ 11,000 ಪಾವತಿ ಮಾಡುವ ಮೂಲಕ ಬುಕ್ ಮಾಡಬಹುದಾಗಿದೆ.  ಸಂಪರ್ಕ ವಿವರಗಳನ್ನು ನೀಡುವುದಕ್ಕಾಗಿ ಗ್ರಾಹಕರು 18001021800 ಗೆ ಗ್ರಾಹಕರು ಕರೆ ಮಾಡಬಹುದಾಗಿದೆ ಎಂದು ಮಾರುತಿ ಸುಜೂಕಿ ಹೇಳಿದೆ. 

3ಡಿ ಎಲ್ ಇಡಿ ಟೇಲ್ ಲ್ಯಾಂಪ್, ಡ್ಯುಯಲ್ ಟೋನ್ ಇಂಟೀರಿಯರ್ ಗಳು ಸೇರಿದಂತೆ ಆಕರ್ಷಕ ವಿನ್ಯಾಸದಲ್ಲಿ ಹೊಸ ಮಾರುತಿ ಸುಜೂಕಿ ಮಾರುಕಟ್ಟೆ ಪ್ರವೇಶಿಸಲಿದೆ.  2012 ರಿಂದ ಈ ವರೆಗೆ ಒಟ್ಟು 4.18 ಲಕ್ಷ ಯುನಿಟ್ ನಷ್ಟು ಎರ್ಟಿಗಾ ಮಾರಾಟವಾಗಿದೆ ಎಂದು ಸಂಸ್ಥೆ ತಿಳಿಸಿದೆ. 
Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp