ವಿದೇಶ ಪ್ರವಾಸದ ವೇಳೆ ಹೆಚ್ಚು ಖರ್ಚು ಮಾಡುವುದರಲ್ಲಿ ಭಾರತೀಯರೇ ಮುಂದು!

ವಿದೇಶಕ್ಕೆ ಪ್ರಯಾಣ ಮಾಡುವವರಲ್ಲಿ ಭಾರತೀಯರ ಸಂಖ್ಯೆ ಅಧಿಕ ಎಂದು ಗಲ್ಫ್ ಸಹಕಾರ ಮಂಡಳಿ(ಜಿಸಿಸಿ)...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದುಬೈ: ವಿದೇಶಕ್ಕೆ ಪ್ರಯಾಣ ಮಾಡುವವರಲ್ಲಿ ಭಾರತೀಯರ ಸಂಖ್ಯೆ ಅಧಿಕ ಎಂದು ಗಲ್ಫ್ ಸಹಕಾರ ಮಂಡಳಿ(ಜಿಸಿಸಿ) ಹೇಳಿದೆ. ಕಳೆದ 5 ವರ್ಷಗಳಲ್ಲಿ 10.8 ಮಿಲಿಯನ್ ಭಾರತೀಯರು ದುಬೈಗೆ ಭೇಟಿ ನೀಡಿದ್ದಾರೆ ಎಂದು ಹೊಸ ಅಂಕಿಅಂಶವೊಂದು ತಿಳಿಸಿದೆ.

ಕೊಲ್ಲಿಯರ್ಸ್ ಇಂಟರ್ ನ್ಯಾಷನಲ್ ಪ್ರಕಟಿಸಿರುವಂತೆ ಗಲ್ಫ್ ಸಹಕಾರ ಮಂಡಳಿಗೆ ಸುಮಾರು 9 ಮಿಲಿಯನ್ ಭಾರತೀಯರು ಭೇಟಿ ನೀಡಿದ್ದು 2022ರ ವೇಳೆಗೆ ಶೇಕಡಾ 37ರಷ್ಟು ಭಾರತೀಯರು ಉದ್ಯಮ, ಕೆಲಸ ಮತ್ತು ವಿಶ್ರಾಂತಿ ಮನರಂಜನೆಗೆಂದು ಗಲ್ಫ್ ಗೆ ಭೇಟಿ ಕೊಟ್ಟಿದ್ದಾರೆ.

ಈ ವರ್ಷ ವಿಶ್ವಾದ್ಯಂತ 22.5 ಮಿಲಿಯನ್ ಭಾರತೀಯ ಪ್ರವಾಸಿಗರು ಪ್ರಯಾಣಿಸಿದ್ದಾರೆ ಎಂದು ವಿಶ್ವ ಪ್ರವಾಸೋದ್ಯಮ ಸಂಘಟನೆ ಅಂದಾಜು ಮಾಡಿದ್ದು ಅದು 2022ಕ್ಕೆ ಶೇಕಡಾ 122ಕ್ಕೆ ಏರಿಕೆಯಾಗಿ 50 ಮಿಲಿಯನ್ ನಷ್ಟಾಗಲಿದೆ. ಅರೇಬಿಯನ್ ಟ್ರಾವಲ್ ಮಾರ್ಕೆಟ್ 2018 ಕಾರ್ಯಕ್ರಮ ಏಪ್ರಿಲ್ 28ರಿಂದ ಮೇ 1ರವರೆಗೆ ನಡೆಯಲಿದೆ.

ವಿದೇಶಕ್ಕೆ ಪ್ರಯಾಣ ಮಾಡುವವರಲ್ಲಿ ಭಾರತೀಯರೇ ಅಧಿಕ ವೆಚ್ಚ ಮಾಡುವುದು ಎಂದು ಕೂಡ ತಿಳಿದುಬಂದಿದ್ದು, 2022ರ ಹೊತ್ತಿಗೆ ಅದು 23 ಶತಕೋಟಿ ಡಾಲರ್ ನಿಂದ 45 ಶತಕೋಟಿ ಡಾಲರ್ ಗೆ ಏರಿಕೆಯಾಗಲಿದೆ.

ಇತ್ತೀಚೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾದರೂ ಕೂಡ ಭಾರತೀಯ ವಿದೇಶಿ ಮಾರುಕಟ್ಟೆ ಕಳೆದ ಏಳು ವರ್ಷಗಳಲ್ಲಿ ಶೇಕಡಾ 10ರಿಂದ 12ರಷ್ಟು ಏರಿಕೆಯಾಗುತ್ತಿದೆ ಎಂದು ಅರೇಬಿಯನ್ ಟ್ರಾವಲ್ ಮಾರ್ಕೆಟ್ ನ ಪ್ರದರ್ಶನಾ ನಿರ್ದೇಶಕ ಡೇನಿಯಲ್ಲೆ ಕುರ್ಟಿಸ್ ತಿಳಿಸಿದ್ದಾರೆ.

ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ 2.3 ಮಿಲಿಯನ್ ಭಾರತೀಯ ಪ್ರವಾಸಿಗರು ಹೋಗಿದ್ದಾರೆ. ಅದು 2022ಕ್ಕೆ ಶೇಕಡಾ 7ರಷ್ಟು ಜಾಸ್ತಿಯಾಗುವ ನಿರೀಕ್ಷೆಯಿದೆ ಎಂದು ಅಂಕಿಅಂಶ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com