ಆ್ಯಕ್ಸೆಸ್ 125 ಬೈಕ್ ಮೂಲಕ ಬಿಎಸ್ 6 ಇನ್ನಿಂಗ್ಸ್ ಆರಂಭಿಸಿದ ಸುಜುಕಿ

ಜಪಾನ್ ಮೂಲದ ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಸುಜುಕಿ ತನ್ನ ಬಿಎಸ್ 6 ಸರಣಿಗಳ ಇನ್ನಿಂಗ್ಸ್ ಆರಂಭಿಸಿದ್ದು, ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸುಜುಕಿ ಆ್ಯಕ್ಸೆಸ್ 125 ಸರಣಿಯ ಬೈಕ್ ಗಳ ಮೂಲಕ ಬಿಎಸ್ 6 ಇನ್ನಿಂಗ್ಸ್ ಆರಂಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಪಾನ್ ಮೂಲದ ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಸುಜುಕಿ ತನ್ನ ಬಿಎಸ್ 6 ಸರಣಿಗಳ ಇನ್ನಿಂಗ್ಸ್ ಆರಂಭಿಸಿದ್ದು, ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸುಜುಕಿ ಆ್ಯಕ್ಸೆಸ್ 125 ಸರಣಿಯ ಬೈಕ್ ಗಳ ಮೂಲಕ ಬಿಎಸ್ 6 ಇನ್ನಿಂಗ್ಸ್ ಆರಂಭಿಸಿದೆ.

ಮಧ್ಯಮ ಶ್ರೇಣಿಯ ಕುಟುಂಬಗಳ ಹಾಟ್ ಫೇವರಿಟ್ ಆಗಿರುವ ಆ್ಯಕ್ಸೆಸ್ 125 ಬೈಕ್ ಗಳ ಮೂಲಕ ಸುಜುಕಿ ಸಂಸ್ಥೆ ಭಾರತದಲ್ಲಿ ತನ್ನ ಬಿಎಸ್ 6 ಇನ್ನಿಂಗ್ಸ್ ಆರಂಭಿಸಿದೆ. 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಇದೇ ಕಾರಣಕ್ಕೆ ಎಲ್ಲ ವಾಹನ ತಯಾರಿಕಾ ಸಂಸ್ಥೆಗಳು ಬಿಎಸ್ 4 ಸರಣಿಯ ವಾಹನಗಳ ತಯಾರಿಕೆಯನ್ನು ಸ್ಥಗಿತಗೊಳಿಸಿವೆ. ಅಂತೆಯೇ ಸುಜುಕಿ ಸಂಸ್ಥೆ ಕೂಡ ಬಿಎಸ್ 6 ಶ್ರೇಣಿಯ ನಿಯಮಗಳನ್ವಯ ಹೊಸ ಸರಣಿಯ ಆ್ಯಕ್ಸೆಸ್ 125 ದ್ವಿಚಕ್ರ ವಾಹನಗಳನ್ನು ತಯಾರಿಸಿತ್ತಿದ್ದು, ಈಗಾಗಲೇ ಬಿಎಸ್ 6 ಸರಣಿಯ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಆರಭವಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಮ್ಯಾನೇಜರ್ ಕೊಯಿಚಿರೊ ಹಿರಾವ್ ಅವರು, ಆ್ಯಕ್ಸೆಸ್ 125 ಮೂಲಕ ನಮ್ಮ ಬಿಎಸ್ 6 ಶ್ರೇಣಿಯ ಇನ್ನಿಂಗ್ಸ್ ಆರಂಭಿಸುತ್ತಿರುವುದಕ್ಕೆ ಖುಷಿ ಇದೆ. 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಕಡ್ಡಾಯವಾಗಿದ್ದು, ನಾವು ಅದಕ್ಕಿಂತಲೂ ಮೊದಲೇ ಈ ನಿಯಮವನ್ನು ಅಳವಡಿಸಿಕೊಂಡಿದ್ದೇವೆ. ದಶಕದಿಂದಲೂ ಆಕ್ಸೆಸ್ 125 ವಾಹನಗಳು ಗ್ರಾಹಕರ ಮನಗೆದ್ದಿದೆ. ಬಿಎಸ್ 6 ಸರಣಿಯ ಬೈಕ್ ಗಳೂ ಕೂಡ ಗ್ರಾಹಕರಿಗೆ ಇಷ್ಟವಾಗಲಿದೆ. ಹೊಸ ಅವತರಣಿಕೆಯ ಬೈಕ್ ಗಳಲ್ಲಿ ಕೆಲ ಹೊಸ ಫೀಚರ್ ಗಳನ್ನು ನೀಡಲಾಗಿದ್ದು, ಅವುಗಳೇನು ಎಂಬುದು ಶೀಘ್ರದಲ್ಲೇ ಗ್ರಾಹಕರಿಗೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಇನ್ನು ಹೊಸ ಬಿಎಸ್ 6 ಸರಣಿಯ ಆ್ಯಕ್ಸೆಸ್ 125 ಬೈಕ್ ಗಳ ಬೆಲೆ ಕುರಿತು ಸಂಸ್ಥೆ ಈ ವರೆಗೂ ಮಾಹಿತಿ ನೀಡಿಲ್ಲ. 

ಈ ಹಿಂದೆ ಸುಜುಕಿ ಮೋಟಾರ್‌ಸೈಕಲ್‌ ಇಂಡಿಯಾ ಪ್ರೈ ಲಿ., ಒಟ್ಟು 69,755 ವಾಹನಗಳ ಮಾರಾಟ ಮಾಡುವ ಮೂಲಕ ಶೇ 23.39ರಷ್ಟು ಹೆಚ್ಚಳ ಕಂಡಿತ್ತು. ಕಳೆದ ವರ್ಷ 56,531 ವಾಹನಗಳ ಮಾರಾಟ ಮಾಡಿತ್ತು. ಈ ಪೈಕಿ ಆಕ್ಸೆಸ್ 125 ವಾಹನಗಳ ಪಾಲು ಹೆಚ್ಚಾಗಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com