ಹೊಸವರ್ಷಕ್ಕೆ ಹೊಸ ಬೈಕ್! ಹೀರೊ ಮೋಟೋ ಕಾರ್ಪ್ ನಿಂದ 100 ಸಿಸಿ, ಬಿಎಸ್-4 ಬೈಕ್ ಮಾರುಕಟ್ಟೆಗೆ

ವಿಶ್ವದ ಅತಿದೊಡ್ಡ ದ್ವಿಚಕ್ರವಾಹನ ತಯಾರಕ ಕಂಪೆನಿಯಾದ ಹೀರೋ ಮೋಟೊ ಕಾರ್ಪ್ ಬಿಎಸ್-4 ಮಾನದಂಡಗಳ ಮೊದಲ ಮೋಟರ್ ಬೈಕ್ ಆದ ಎಚ್ ಎಫ್ ಡಿಲಕ್ಸ್ ಬಿಎಸ್-4ನ್ನು  ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

Published: 31st December 2019 04:02 PM  |   Last Updated: 31st December 2019 04:02 PM   |  A+A-


ಹೀರೋ ಎಚ್‌ಎಫ್ ಡಿಲಕ್ಸ್

Posted By : Raghavendra Adiga
Source : UNI

ನವದೆಹಲಿ:: ವಿಶ್ವದ ಅತಿದೊಡ್ಡ ದ್ವಿಚಕ್ರವಾಹನ ತಯಾರಕ ಕಂಪೆನಿಯಾದ ಹೀರೋ ಮೋಟೊ ಕಾರ್ಪ್ ಬಿಎಸ್-4 ಮಾನದಂಡಗಳ ಮೊದಲ ಮೋಟರ್ ಬೈಕ್ ಆದ ಎಚ್ ಎಫ್ ಡಿಲಕ್ಸ್ ಬಿಎಸ್-4ನ್ನು  ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಭಾರತ್ ಸ್ಟಾಂಡರ್ಡ್ -4 ನಿಯಮಗಳಿಗೆ ಬದ್ಧವಾಗುವ ಎಚ್ ಎಫ್ ಡಿಲಕ್ಸ್ ಬಿಎಸ್-4 ಬೈಕ್‍ನ ಬೆಲೆ 55,925 ರೂ. ಇರಲಿದೆ ಎಂದು ಹೀರೋ ಮೋಟೊ ಕಾರ್ಪ್‍ನ ಕಾರ್ಯನಿರ್ವಾಹಕ ನಿರ್ದೇಶಕ(ಕಾರ್ಯಾಚರಣೆ) ವಿಕ್ರಮ್ ಕಸ್‍ಬೆಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹೊಸ ಉತ್ಪನ್ನ ಬಿಡುಗಡೆಯೊಂದಿಗೆ ಹೀರೋ ಮೋಟೊ ಕಾರ್ಪ್ ಕಂಪೆನಿ ಬಿಎಸ್-4 ವಲಯಕ್ಕೆ ವೇಗವಾಗಿ ಲಗ್ಗೆ ಇಡುತ್ತಿದ್ದು, ಮುಂದಿನ ದಿನಗಳಲ್ಲಿ ಇಡೀ ವಾಹನ ಶ್ರೇಣಿಯನ್ನು ಬಿಎಸ್-4ಕ್ಕೆ ಪರಿವರ್ತಿಸಲಾಗುವುದು ಎಂದು ಅವರು ಹೇಳಿದ್ದಾರೆ. 

ಹೊಸ ಎಚ್‍ಎಫ್ ಡಿಲಕ್ಸ್ ಬೈಕ್ ಅನ್ನು ಸಂಪೂರ್ಣವಾಗಿಯೇ ದೇಶೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ಇದನ್ನು ರಾಜಸ್ಥಾನದ ಜೈಪುರದಲ್ಲಿನ ಕಂಪೆನಿಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Stay up to date on all the latest ಪ್ರವಾಸ-ವಾಹನ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp