ಮಾರುತಿ ಸುಜುಕಿ ವಾಹನಗಳ ಬೆಲೆ ರೂ. 10 ಸಾವಿರ ವರಗೆ ಹೆಚ್ಚಳ!

ಮಾರುತಿ ಸುಜುಕಿ ವಾಹನಗಳ ಬೆಲೆ ರೂ. 10 ಸಾವಿರ ವರೆಗೆ ಹೆಚ್ಚಳವಾಗಿದೆ.ಆಯ್ದ ಮಾದರಿಗಳ ವಾಹನಗಳ ಬೆಲೆಯಲ್ಲಿ 10 ಸಾವಿರ ರೂ.ವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ತಿಳಿಸಿದೆ.

Published: 11th January 2019 12:00 PM  |   Last Updated: 11th January 2019 02:41 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : The New Indian Express
ನವದೆಹಲಿ: ಮಾರುತಿ ಸುಜುಕಿ ವಾಹನಗಳ ಬೆಲೆ ರೂ. 10  ಸಾವಿರ ವರೆಗೆ ಹೆಚ್ಚಳವಾಗಿದೆ. ವಿದೇಶಿ ವಿನಿಮಯ ದರ ಹಾಗೂ ಸರಕುಗಳ ಬೆಲೆಯಲ್ಲಿ ಹೆಚ್ಚಳದ ಹಿನ್ನೆಲೆಯಲ್ಲಿ ಆಯ್ದ ಮಾದರಿಗಳ ವಾಹನಗಳ ಬೆಲೆಯಲ್ಲಿ  10 ಸಾವಿರ ರೂ.ವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ತಿಳಿಸಿದೆ.

ಪ್ರಮುಖ ಮಾದರಿಗಳ ವಾಹನಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಎಕ್ಸ್ ಶೋ ರೂಂ ಬೆಲೆಯಲ್ಲಿ 10 ಸಾವಿರ ರೂವರೆಗೂ ಹೆಚ್ಚಳವಾಗಿದೆ ಎಂದು ಎಂಎಸ್ ಐ ಹೇಳಿಕೆ ನೀಡಿದೆ.

ಇತ್ತೀಚಿಗೆ ಪರಿಚಯಿಸಲಾದ ಎರ್ಟಿಗಾ ಹೊಸ ಆವೃತ್ತಿ ಹೊರತುಪಡಿಸಿದರೆ  ಉಳಿದ ಬಹುತೇಕ ಕಂಪನಿಗಳ ವಾಹನಗಳ ಬೆಲೆಯಲ್ಲಿ ಹೆಚ್ಚಳಗೊಂಡಿರುವುದನ್ನು ಕಾಣಬಹುದಾಗಿದೆ.

 ದರ ಹೆಚ್ಚಳಕ್ಕೂ ಮುನ್ನ ದೆಹಲಿಯಲ್ಲಿ ಮಾರುತಿ ಆಲ್ಟೋ 800 ಹಾಗೂ  ಎಸ್- ಕ್ರಾಸ್  (ಎಕ್ಸ್ ಶೋ ರೂಂ )ಬೆಲೆ  ಕ್ರಮವಾಗಿ 2.53 ಲಕ್ಷ ಹಾಗೂ 11.45 ಲಕ್ಷ ಇತ್ತು. ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಮಾಡುವುದಾಗಿ ಡಿಸೆಂಬರ್ ತಿಂಗಳಿನಲ್ಲಿಯೇ ಕಂಪನಿ ತಿಳಿಸಿತ್ತು. ಆದರೆ, ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಪಪಡಿಸಿರಲಿಲ್ಲ.

ಮಾರುತಿ ಸುಜುಕಿ ಇಂಡಿಯಾ ಹೊರತುಪಡಿಸಿದರೆ  ಟೊಯೊಟೊ ಕಿರ್ಲೋಸ್ಕರ್ ಮೋಟಾರ್, ಇಸುಜು ಮೊಟಾರ್ಸ್ ಇಂಡಿಯಾ ಕಂಪನಿಗಳು ಕೂಡಾ ಈ ವರ್ಷದ ಜನವರಿ ತಿಂಗಳಿನಿಂದ ಪ್ರಮುಖ ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದವು.

ಕಾರುಗಳ ಬೆಲೆ ಹೆಚ್ಚಳದಿಂದಾಗಿ ದೇಶಿಯ ಷೇರು ಮಾರುಕಟ್ಟೆಯಲ್ಲಿ  ಮಾರುತಿ ಷೇರು 7.457.95 ರಷ್ಟು ಕುಸಿದಿದ್ದು, ಶೇ.0.11 ರಷ್ಟಿದೆ.
Stay up to date on all the latest ಪ್ರವಾಸ-ವಾಹನ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp