ವಾಹನ ಉದ್ಯಮದಲ್ಲಿ ಕಳಪೆ ಸಾಧನೆಗೆ ಕೇಂದ್ರ ಸರ್ಕಾರವೇ ಕಾರಣ: ಕಾಂಗ್ರೆಸ್‌ ಆರೋಪ

ವಾಹನಗಳ ಮಾರಾಟ ಕುಸಿತ ಮತ್ತು ಉದ್ಯಮದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಗುರುವಾರ ಕಾಂಗ್ರೆಸ್‌ ಆರೋಪಿಸಿದೆ.

Published: 11th July 2019 12:00 PM  |   Last Updated: 11th July 2019 07:55 AM   |  A+A-


Modi government reason for automobile industry's poor performance, alleges Congress

ರಣದೀಪ್ ಸುರ್ಜೆವಾಲಾ

Posted By : LSB LSB
Source : UNI
ನವದೆಹಲಿ: ವಾಹನಗಳ ಮಾರಾಟ ಕುಸಿತ ಮತ್ತು ಉದ್ಯಮದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಗುರುವಾರ ಕಾಂಗ್ರೆಸ್‌ ಆರೋಪಿಸಿದೆ.

10 ವರ್ಷಗಳಲ್ಲಿ ವಾಹನ ಮಾರಾಟ ಅತ್ಯಂತ ಕಳಪೆ ಮಟ್ಟ ತಲುಪಿದ್ದು, ಪ್ರಯಾಣಿಕ ಕಾರುಗಳು ಮತ್ತು ವಾಣಿಜ್ಯ ವಾಹನಗಳ ಉತ್ಪಾದನಾ ಪ್ರಮಾಣವು ಕಳೆದ 6 ವರ್ಷಗಳಲ್ಲಿ ಕಡಿಮೆಯಾಗಿದೆ. ಮಾರಾಟವು ಶೇ.25ರಷ್ಟು ಕುಸಿದಿದೆ ಎಂದು ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ವರದಿಗಾರರಿಗೆ ತಿಳಿಸಿದ್ದಾರೆ.
  
ಆಟೋ ಕಂಪೆನಿಗಳು ಕಾರ್ಮಿಕರಿಗೆ ಕೆಲಸಕ್ಕೆ ಬರದಂತೆ ಒತ್ತಾಯಿಸುವ ಸ್ಥಿತಿ ಬಂದಿದೆ ಎಂದು ಆಟೋಮೊಬೈಲ್ ಉತ್ಪಾದಕರ ಒಕ್ಕೂಟ(ಎಸ್‌ಐಎಮ್) ಹೇಳಿದೆ.

2008-09 ಮತ್ತು 2011-12ಕ್ಕಿಂತ ಇಂದಿನ ವಾಹನ ಮಾರುಕಟ್ಟೆ ಸ್ಥಿತಿ ಶೋಚನೀಯವಾಗಿದೆ ಎಂದು ಎಸ್‌ಐಎಎಂ ತಿಳಿಸಿದೆ.
Stay up to date on all the latest ಪ್ರವಾಸ-ವಾಹನ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp