ದೇಶದಲ್ಲೇ ಮೊದಲು: ಟಿವಿಎಸ್ ನಿಂದ ಎಥನಾಲ್ ಆಧಾರಿತ ಬೈಕ್ ಬಿಡುಗಡೆ: ಬೆಲೆ, ವಿನ್ಯಾಸದ ಬಗ್ಗೆ ಇಲ್ಲಿದೆ ವಿವರ

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ಶುಕ್ರವಾರ ದೇಶದ ಮೊದಲ ಎಥನಾಲ್ ಆಧಾರಿತ 'ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100' ಮೋಟಾರ್ ಸೈಕಲ್ ಅನ್ನು

Published: 12th July 2019 12:00 PM  |   Last Updated: 12th July 2019 09:06 AM   |  A+A-


TVS launches India's first ethanol-based motorcycle Apache RTR 200 Fi E100 at Rs 1.2 lakh

ದೇಶದಲ್ಲೇ ಮೊದಲು: ಟಿವಿಎಸ್ ನಿಂದ ಎಥನಾಲ್ ಆಧಾರಿತ ಬೈಕ್ ಬಿಡುಗಡೆ: ಬೆಲೆ, ವಿನ್ಯಾಸದ ಬಗ್ಗೆ ಇಲ್ಲಿದೆ ವಿವರ

Posted By : SBV SBV
Source : UNI
ನವದೆಹಲಿ: ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ  ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ಶುಕ್ರವಾರ ದೇಶದ ಮೊದಲ ಎಥನಾಲ್ ಆಧಾರಿತ  'ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100'  ಮೋಟಾರ್ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. 

ಈ ವಾಹನವನ್ನು ಶುಕ್ರವಾರ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ಹಾಗೂ ಟಿವಿಎಸ್ ಮೋಟಾರ್ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಬಿಡುಗಡೆಗೊಳಿಸಿದರು. ಈ ವಾಹನದ ದರ 1.20 ಲಕ್ಷ ರೂ.ಗಳು. 

ಟಿವಿಎಸ್ ಮೋಟಾರ್ ಕಂಪನಿ 2018ರಲ್ಲಿ ದೆಹಲಿಯಲ್ಲಿ ನಡೆದ ಆಟೋಮೊಬೈಲ್ ಎಕ್ಸ್ಪೋದಲ್ಲಿ ಮೊದಲ ಟಿವಿಎಸ್ ಅಪಾಚಿ 200 4ವಿ ಎಥನಾಲ್ ವಾಹನವನ್ನು ಪ್ರದರ್ಶಿಸಿತ್ತು. ಟಿವಿಎಸ್ ಅಪಾಚಿ, ಟಿವಿಎಸ್; ಮೋಟಾರ್ ಕಂಪನಿಯ ಭಾಗವಾಗಿದ್ದು, ದೇಶಾದ್ಯಂತ 3.5 ದಶಲಕ್ಷ ಗ್ರಾಹಕರನ್ನು ಒಳಗೊಂಡಿದೆ. 

ಹೊಸ ಉತ್ಪನ್ನದ ಕುರಿತು ಮಾತನಾಡಿದ ಶ್ರೀನಿವಾಸನ್, ದೇಶದ ಭವಿಷ್ಯದ ಸಂಚಾರ ವ್ಯವಸ್ಥೆಗೆ ರೂಪುರೇಷೆ ತಯಾರಿಸಿರುವ ಸಚಿವ ಗಡ್ಕರಿ ಅವರ ಉಪಸ್ಥಿತಿಯಲ್ಲಿ ಟಿವಿಎಸ್ ಅಪಾಚಿ ಆರ್ ಟಿ ಆರ್ ಎಫ್ ಐ ಇ100 ವಾಹನ ಬಿಡುಗಡೆಯಾಗಿರುವುದು ಸಂತಸ ತಂದಿದೆ ಎಂದರು. 

ಇಂದು ದ್ವಿಚಕ್ರ ವಾಹನಗಳ ಉದ್ಯಮ ಭವಿಷ್ಯದ ಸಂಚಾರವನ್ನು ವಿದ್ಯುತ್ ಚಾಲಿತ, ಹೈಬ್ರಿಡ್ ಹಾಗೂ ಪರ್ಯಾಯ ಇಂಧನದ ಬಳಕೆಯಿಂದ ಸುಗಮಗೊಳಿಸುವ ಉದ್ದೇಶ ಹೊಂದಿದೆ. ಟಿವಿಎಸ್ ಮೋಟಾರ್ ಕಂಪನಿ, ಗ್ರಾಹಕರಿಗೆ ಎಥನಾಲ್ ಆಧಾರಿತ ವಾಹನಗಳು ಅತ್ಯುತ್ತಮ ಸೇವೆ ಒದಗಿಸಲಿದೆ ಎಂದು ನಂಬಿದೆ. ಎಥನಾಲ್ ಇಂಧನದ ವಾಹನಗಳು ಚಾಲನೆಯ ಅನುಭವ, ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಪರಿಸರದ ಮೇಲೆ ಸಕಾರಾತ್ಮಕ ಸುಸ್ಥಿರ ಪರಿಣಾಮ ಬೀರುತ್ತದೆ.  ಭಾರತದ ಹಸಿರು ಭವಿಷ್ಯಕ್ಕೆ ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ 100 ಒಂದು ಮಹತ್ವದ ಕೊಡುಗೆಯಾಗಿದೆ ಎಂದರು. 

ಎಥನಾಲ್ ಅನ್ನು ನವೀಕರಿಸಬಹುದಾದ ಸಸ್ಯ ಮೂಲಗಳಿಂದ ದೇಶೀಯವಾಗಿ ತಯಾರಿಸಲಾಗುತ್ತದೆ. ಇದು ವಿಷಕಾರಿಯಲ್ಲದ, ಜೈವಿಕವಾಗಿ ಸಂಸ್ಕರಿಸಬಹುದಾದಂಥ ಸುರಕ್ಷಿತ ನಿರ್ವಹಣೆ, ಸಂಗ್ರಹ ಹಾಗೂ ಸಾರಿಗೆ ಒದಗಿಸುವ ಇಂಧನವಾಗಿದೆ. ಇದರಲ್ಲಿ ಶೇ. 35ರಷ್ಟು ಆಮ್ಲಜನಕವಿದ್ದು, ನೈಟ್ರೋಜನ್ ಆಕ್ಸೈಡ್ ಹೊರಸೂಸುವುದನ್ನು ಕಡಿತಗೊಳಿಸುತ್ತದೆ. 

ಎಥನಾಲ್ ಬಳಕೆಯಿಂದ ಪೆಟ್ರೋಲಿಯಂ ಆಮದಿನ ಮೇಲೆ ಅವಲಂಬನೆಯನ್ನು ತಪ್ಪಿಸಬಹುದು ಹಾಗೂ ಇಂಧನದ ಭದ್ರತೆಯನ್ನು ಹೆಚ್ಚಿಸಬಹುದು. 

ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100 ಹಸಿರು ಬಣ್ಣದ್ದಾಗಿದ್ದು, ಎಥನಾಲ್ ಲೋಗೋವನ್ನು ಒಳಗೊಂಡಿದೆ. ಇದರಲ್ಲಿ ಟ್ವಿನ್ ಸ್ಪ್ರೇ ಟ್ವಿನ್ ಪೋರ್ಟ್ ಇಎಫ್ ಐ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು 21 ಸೆಕೆಂಡುಗಳನ್ನು 8500 ಆರ್ ಪಿಎಂ (ಪ್ರತಿ ನಿಮಿಷದ ವೇಗ ) ವೇಗ ಹೊಂದಿದ್ದು, 18.1 ನ್ಯೂಟನ್ ಮೀಟರ್ ಗೆ 7000 ಆರ್ ಪಿಎಂ ಹೊಂದಿದ್ದು, ಗಂಟೆಗೆ 129 ಕಿ.ಮೀ ಕನಿಷ್ಠ ವೇಗ ಹೊಂದಿದೆ. ಇದರ ವಿಶೇಷ ಆವೃತ್ತಿ ಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕದಲ್ಲಿ ಲಭ್ಯವಿವೆ.
Stay up to date on all the latest ಪ್ರವಾಸ-ವಾಹನ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp