ಮುಂಗಾರು ಮಳೆಗೆ ಮೈದುಂಬಿಕೊಂಡ ಅಂಬೋಲಿ ಜಲಪಾತ!

ಮಾನ್ಸೂನ್ ಋತುವಿನಲ್ಲಿ ಪ್ರವಾಸ, ಟ್ರಕ್ಕಿಂಗ್ ಹೋಗುವುದೆಂದರೆ ಹಲವರಿಗೆ ಖುಷಿ, ಹೊರಗೆ ಮಳೆಯ ...
ಅಂಬೋಲಿ ಜಲಪಾತ
ಅಂಬೋಲಿ ಜಲಪಾತ
ಬೆಳಗಾವಿ: ಮಾನ್ಸೂನ್ ಋತುವಿನಲ್ಲಿ ಪ್ರವಾಸ, ಟ್ರಕ್ಕಿಂಗ್ ಹೋಗುವುದೆಂದರೆ ಹಲವರಿಗೆ ಖುಷಿ, ಹೊರಗೆ ಮಳೆಯ ಧಾರೆ, ಚಳಿಯ ವಾತಾವರಣ ಆಹ್ಲಾದಕರ ಅನುಭವ ಕೊಡುತ್ತವೆ. 
ಮಳೆಗಾಲದಲ್ಲಿ ಹೋಗಬೇಕಾದ ಕೆಲವು ವಿಶೇಷ ತಾಣಗಳಿರುತ್ತವೆ. ಅಂತವುಗಳಲ್ಲಿ ಒಂದು ಅಂಬೋಲಿ ಜಲಪಾತ. ಬೆಳಗಾವಿ ಜಿಲ್ಲೆಯ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಅಂಬೋಲಿ ಜಲಪಾತ ಪ್ರವಾಸಿಗರ ಪಾಲಿಗೆ ಸ್ವರ್ಗಸುಖ. 
ಪಶ್ಚಿಮ ಘಟ್ಟದ ಎತ್ತರವಾದ ತಪ್ಪಲಿನಿಂದ ನೀರು ಚಿಮ್ಮಿ ಕೆಳಗೆ ಹರಿಯುವ ಅಂಬೋಲಿ ಜಲಪಾತದ ಸೌಂದರ್ಯ ಬಣ್ಣಿಸಲಸದಳ, ಈ ಜಲಪಾತದಲ್ಲಿ ಮೇಲಿನಿಂದ ನೀರು ಧುಮ್ಮಿಕ್ಕಿ ಹರಿದು ಬರುವುದನ್ನು ನೋಡಲು, ಪ್ರಕೃತಿ ಸೌಂದರ್ಯವನ್ನು ಸವಿಯಲು ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶಗಳಿಂದಲೂ ಜನರು ಬರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com