ಬಸವಣ್ಣನ ಐಕ್ಯಮಂಟಪದ ಕಂಬಗಳಲ್ಲಿ ಬಿರುಕು, ಭಕ್ತರ ಪ್ರವೇಶಕ್ಕೆ ನಿಷೇಧ

ಕ್ರಾಂತಿಯೋಗಿ ಬಸವಣ್ಣನವರ ಐಕ್ಯಮಂಟಪಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಮಂಟಪದ ಗೋಡೆ ಹಾಗೂ ಕಂಬಗಳಲ್ಲಿ ಬಿರುಕು ಮೂಡಿರುವ ಕಾರಣ ಭಕ್ತರ ಪ್ರವೇಶ ನಿಷೇಧಿಸಿ....

Published: 04th June 2019 12:00 PM  |   Last Updated: 04th June 2019 01:54 AM   |  A+A-


Basavanna memorial

ಕೂಡಲಸಂಗಮ

Posted By : RHN RHN
Source : The New Indian Express
ಕೂಡಲಸಂಗಮ: ಕ್ರಾಂತಿಯೋಗಿ ಬಸವಣ್ಣನವರ ಐಕ್ಯಮಂಟಪಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಮಂಟಪದ ಗೋಡೆ ಹಾಗೂ ಕಂಬಗಳಲ್ಲಿ ಬಿರುಕು ಮೂಡಿರುವ ಕಾರಣ ಭಕ್ತರ ಪ್ರವೇಶ ನಿಷೇಧಿಸಿ ಕೂಡಲಸಂಗಮೇಶ್ವರ ದೇವಲಯ ಆಡಳಿತ ಮಂಡಳಿ ನಿರ್ದೇಶನ ಹೊರಡಿಸಿದೆ. ಇದರಿಂದಾಗಿ ಪ್ರವಾಸಿಗರು, ಬಸವಣ್ಣನ ಭಕ್ತರಿಗೆ ತೀವ್ರ ನಿರಾಶೆಯಾಗಿದೆ.

ಕೆಲ ವಾರದಲ್ಲಿ ಮಂಟಪದೊಲಗಿನ ಆರು ಕಂಬಗಳ ಪೈಕಿ ಒಂದರಲ್ಲಿ ಬಿರುಕುಗಳು ಪತ್ತೆಯಾಗಿತ್ತು. ಆದರೆ 9 ಶತಮಾನಗಳಷ್ಟು ಹಳೆಯದಾದ ಸ್ಮಾರಕಕ್ಕೆ ಪ್ರವಾಸಿಗರ ಭೇಟಿಗೆ ಅನುಮತಿ ನೀಡಲಾಗಿತ್ತು. 

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಪ್ರತಿದಿನ ನೂರಾರು ಸಂದರ್ಶಕರು ಭೇಟಿ ಕೊಡುತ್ತಾರೆ. ದೇವಸ್ಥಾನದ ಐಕ್ಯ ಮಂಟಪ ಮತ್ತು 13 ನೇ ಶತಮಾನದ ಸಂಗಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಶಾಂತಿಯುತ ಪ್ರಶಾಂತ ವಾತಾವರಣಕ್ಕೆ ಮನಸೋಲುತ್ತಾರೆ.

"ಐಕ್ಯ ಮಂಟಪದಲ್ಲಿ ಕೆಲವು ಕಂಬಗಳು, ಇಷ್ಟಲಿಂಗವು ಬಿರುಕು ಬಿಟ್ಟಿದೆ.ಕಳೆದ ಹದಿನೈದು ದಿನಗಳ ಹಿಂದೆ ಮಂಟಪಕ್ಕೆ ತೆರಳಲು ಸಾರ್ವಜನಿಕರಿಗೆ ಅನುಮತಿ ಇತ್ತು, ಆದರೆ ಕಳೆದೊಂದು ವಾರದಿಂದ ಪ್ರವೇಶವ್ನ್ನು ನಿಷೇಧಿಸಲಾಗಿದೆ.ಬಿರುಕು ಬಿಟ್ಟ ಮಂಟಪವನ್ನು ಶೀಘ್ರ ದುರಸ್ತಿಗೊಳಿಸಿ ಮತ್ತೆ ಪ್ರವಾಸಿಗರಿಗೆ ತೆರೆಯಲಾಗುತ್ತದೆ ಎಂದು ನಾನು ಭಾವಿಸಿದ್ದೇನೆ" ಗದಗ ನಿವಾಸಿ, ಶಿಕ್ಷಕ ಮಲ್ಲನಗೌಡ ಹೇಳಿದ್ದಾರೆ.

ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಮತ್ತು ಕೀಸ್ಡಿಬಿವಿಶೇಷ ಅಧಿಕಾರಿ ಪಿ. ಎ. ಮೇಘಣ್ಣನವರ್ ಮಾತನಾಡಿ " "ನಾವು ತಾಂತ್ರಿಕ ತಜ್ಞರನ್ನು ಸಂಪರ್ಕಿಸುತ್ತಿದ್ದೇವೆ ಮತ್ತು ಐಕ್ಯ ಮಂಟಪ ಪುನಶ್ಚೇತನಕ್ಕಾಗಿ ಡಿಪಿಆರ್ ತಯಾರಿಸಲು ಕೆಎಸ್ಡಿಬಿ ಕಮಿಷನರ್  ಗೆ ಹೇಳಿದ್ದೇವೆ. ಮುಂದಿನ ವರ್ಷ ಈ ಕಾರ್ಯ ಸಂಪೂರ್ಣವಾಗಲಿದೆ" ಎಂದರು.

ಹನ್ನೆರಡನೇ ಶತಮಾನದ ಶರಣ ಚಳವಳಿಯ ನಾಯಕ ಬಸವಣ್ಣ ಕೂಡಲಸಂಗಮ ಕ್ಷೇತ್ರದಲ್ಲಿ ಐಕ್ಯರಾಗಿದ್ದರು. ಇಂದಿಗೂ ಅಲ್ಲಿನ ಐಕ್ಯ ಮಂಟಪ ಹಾಗೂ ಸಂಗಮೇಶ್ವರ ದೇವಾಲಯ ಭಕ್ತರ ಪಾಲಿಗೆ ಬಸವಣ್ಣನ ಸಾಕ್ಷಾತ್ ಅವತಾರಕ್ಕೆ ಸಾಕ್ಷಿ ಹೇಳುತ್ತಿದೆ.
Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp