ರೈಲ್ವೇ ಇತಿಹಾಸದಲ್ಲೇ ಮೊದಲು! ಚಲಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ಮಸಾಜ್ ಸೇವಾ ಸೌಲಭ್ಯಕ್ಕೆ ಚಾಲನೆ

: ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ಪ್ರಯಾಣಿಕರಿಗೆ ಮಸಾಜ್ ಸೇವೆಯನ್ನು ಪ್ರಾರಂಭಿಸಿದೆ.ರೈಲಿನಲ್ಲಿ ಪ್ರಯಾಣಿಸುವಾಗಲೇ ಅಗತ್ಯವಿರುವ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ಪ್ರಯಾಣಿಕರಿಗೆ ಮಸಾಜ್ ಸೇವೆಯನ್ನು ಪ್ರಾರಂಭಿಸಿದೆ.ರೈಲಿನಲ್ಲಿ ಪ್ರಯಾಣಿಸುವಾಗಲೇ ಅಗತ್ಯವಿರುವ ಪ್ರಯಾಣಿಕರು ಈ ಮಸಾಜ್ ಸೌಲಭ್ಯ ಪಡೆದುಕೊಳ್ಳಬಹುದು.
ಪ್ರಾಥಮಿಕ ಹಂತದಲ್ಲಿ ಈ ಸೌಲಭ್ಯವನ್ನು ಇಂದೋರ್ ನಿಂದ ಹೊರಡುವ 39 ರೈಲುಗಳಲ್ಲಿ ಕಲ್ಪಿಸಲಾಗಿದೆ ಎಂದು  ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ರೈಲ್ವೆ ವಲಯದ ರತ್ಲಾಮ್ ವಿಭಾಗದಿಂದ ರೈಲಿನಲ್ಲಿ ಮಸಾಜ್ ಸೌಲಭ್ಯ ಕಲ್ಪಿಸಬೇಕೆಂಬ ಪ್ರಸ್ತಾವನೆ ಬಂದಿತ್ತು. "ರೈಲ್ವೆ ಇತಿಹಾಸದಲ್ಲಿ ಇದೇ  ಮೊದಲ ಬಾರಿಗೆ ಪ್ರಯಾಣಿಕರಿಗೆ ಮಸಾಜ್ ಸೇವೆ ಒದಗಿಸಲಾಗುತ್ತಿದೆ.ಚಲಿಸುತ್ತಿರುವ ರೈಲುಗಳಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ ನಾವು ಮಸಾಜ್ ಸೇವೆ ಒದಗಿಸುತ್ತೇವೆ ಅದು ಆದಾಯವನ್ನು ಮಾತ್ರ ಹೆಚ್ಚಿಸುವುದಲ್ಲ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನೂ ಸೆಳೆಯಲಿದೆ.
"ಈ ಸೇವೆಯಿಂದ ರೈಲ್ವೆಗೆ ವಾರ್ಷಿಕವಾಗಿ ರೂ 20 ಲಕ್ಷ ಹೆಚ್ಚುವರಿ ಆದಾಯ ಲಭ್ಯವಾಗಲಿದೆ. ಅಲ್ಲದೆ 20,000 ಮಸಾಜ್ ಸೇವಾಕರ್ತರು ರೈಲ್ವೆ ಟಿಕೆಟ್ ಪಡೆದುಕೊಳ್ಲುವುದರಿಂದ ವಾರ್ಷಿಕ  90 ಲಕ್ಷ ರೂ. ಹೆಚ್ಚುವರಿ ಟಿಕೆಟ್ ಮಾರಾಟವಾಗುವ ನಿರೀಕ್ಷೆ ಇದೆ.  ಇಂತಹಾ ಒಪ್ಪಂದವೊಂದಕ್ಕೆ ಇದೇ ಮೊದಲ ಬಾರಿಗೆ ಸಹಿ ಹಾಕಲಾಗಿದೆ" ರೈಲ್ವೆ ಮಂಡಳಿ  ಮಾಧ್ಯಮ ಮತ್ತು ಸಂವಹನ ನಿರ್ದೇಶಕ ರಾಜೇಶ್ ಬಾಜ್ ಪೇಯ್ ಹೇಳಿದ್ದಾರೆ.
ಪಾದಗಳ ಮಸಾಜ್ ಹಾಗೂ ತಲೆ ಮಸಾಜ್ ಗಳ ಸೇವೆಗೆ  100 ರೂ.ದರವನ್ನು ನಿಗದಿಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com