ಮಹೀಂದ್ರದಿಂದ ಹೊಸ ಟಿಯುವಿ 300 ವಾಹನ ಮಾರುಕಟ್ಟೆಗೆ

ಎಸ್‍ಯುವಿ ವಿಭಾಗದಲ್ಲಿ ಹೊಸ ಟಿಯುವಿ 300 ವಾಹನವನ್ನು ಮಹೀಂದ್ರ ಆಂಡ್ ಮಹೀಂದ್ರ ಸಮೂಹ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Published: 03rd May 2019 12:00 PM  |   Last Updated: 03rd May 2019 07:00 AM   |  A+A-


2019 Mahindra TUV 300 launched

ಸಾಂದರ್ಭಿಕ ಚಿತ್ರ

Posted By : LSB LSB
Source : UNI
ಕೊಲ್ಕತಾ: ಎಸ್‍ಯುವಿ ವಿಭಾಗದಲ್ಲಿ ಹೊಸ ಟಿಯುವಿ 300 ವಾಹನವನ್ನು ಮಹೀಂದ್ರ ಆಂಡ್ ಮಹೀಂದ್ರ ಸಮೂಹ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನೂತನ ಆಶೋತ್ತರ ವೈಶಿಷ್ಟ್ಯತೆಗಳು ಹಾಗೂ ಆಕರ್ಷಕ ವಿನ್ಯಾಸದ ಟಿಯುವಿ 300 ವಾಹನದ ಬೆಲೆ 8.38 ಲಕ್ಷ ರೂ. (ಎಕ್ಸ್ ಷೋ ರೂಂ, ಮುಂಬೈ) ನಿಗದಿ ಪಡಿಸಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‍ಯುವಿ ವಿಭಾಗದಲ್ಲಿ ಮತ್ತಷ್ಟು ಆಕರ್ಷಕ ಮತ್ತು ಸದೃಢತೆಯನ್ನು ಟಿಯುವಿ 300 ವಾಹನ ಹೊಂದಿದೆ. ಹೆಡ್‍ ಲ್ಯಾಂಪ್‍ ಸಹ ಆಕರ್ಷಕ ವಿನ್ಯಾಸ ಹೊಂದಿದ್ದು, ಸ್ಪೇರ್ ವೀಲ್‍ಗೆ ಎಕ್ಸ್ ಆಕಾರದ ಲೋಹದ ಕವರ್ ಅಳವಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಾಹನದ ಒಳ ಭಾಗ ಇಟಾಲಿಯನ್‍ ಶೈಲಿ ಮನೆಯ ವಿನ್ಯಾಸ ಹೊಂದಿದೆ. ನೂತನ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಜಿಪಿಎಸ್‍ ನೊಂದಿಗೆ 17.8 ಸೆಂ.ಮೀ ಇನ್‍ಫೋಟೈನ್‍ಮೆಂಟ್‍ ಕ್ಯಾಮೆರಾ, ಬಗ್ಗಿಸಬಹುದಾದ ಹೆಡ್‍ ಲ್ಯಾಂಪ್‍ಗಳು ಹಾಗೂ ಮೈಕ್ರೋ ಹೈಬ್ರಿಡ್‍ ತಂತ್ರಜ್ಞಾನದಿಂದ ವಾಹನ ಮಾಲೀಕರಿಗೆ ಆರಾಮದಾಯ ಪ್ರಯಾಣವನ್ನು ಈ ವಾಹನ ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp