ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರವಾಸಿಗರಿಗೆ ಮುಕ್ತ: ರಾಜನಾಥ್ ಸಿಂಗ್ ಘೋಷಣೆ

ಕಳೆದ ಮೂರು ದಶಕಗಳಿಂದ ಭಾರತ ಮತ್ತು ಪಾಕಿಸ್ತಾನಿ ಸೇನೆಗಳು ಹೆಚ್ಚು ಪ್ರಾಮುಖ್ಯತೆ ನೀಡಿ ಅಷ್ಟೇ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿರುವ ವಿಶ್ವದ ಅತಿ ಎತ್ತರದ  ಯುದ್ಧಭೂಮಿಯಾದ ಸಿಯಾಚಿನ್ ನೀರ್ಗಲ್ಲು ಪ್ರದೇಶ ಪ್ರವಾಸಿಗರಿಗೆ ಸೋಮವಾರದಿಂದ ಮುಕ್ತವಾಗಿದೆ. 
ಸಿಯಾಚಿನ್
ಸಿಯಾಚಿನ್

ಲಡಾಖ್: ಕಳೆದ ಮೂರು ದಶಕಗಳಿಂದ ಭಾರತ ಮತ್ತು ಪಾಕಿಸ್ತಾನಿ ಸೇನೆಗಳು ಹೆಚ್ಚು ಪ್ರಾಮುಖ್ಯತೆ ನೀಡಿ ಅಷ್ಟೇ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿರುವ ವಿಶ್ವದ ಅತಿ ಎತ್ತರದ  ಯುದ್ಧಭೂಮಿಯಾದ ಸಿಯಾಚಿನ್ ನೀರ್ಗಲ್ಲು ಪ್ರದೇಶ ಪ್ರವಾಸಿಗರಿಗೆ ಸೋಮವಾರದಿಂದ ಮುಕ್ತವಾಗಿದೆ. 

ಲಡಾಖ್‌ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರವಾಸಿಗರಿಗಾಗಿ ಆಯಕಟ್ಟಿನ ಮಹತ್ವದ ಸಿಯಾಚಿನ್‌ನ ಬೇಸ್ ಕ್ಯಾಂಪ್ ತೆರೆಯುವುದಾಗಿ ಘೋಷಿಸಿದರು.
   
"ಲಡಾಖ್ ಪ್ರವಾಸೋದ್ಯಮದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಲಡಾಖ್‌ನಲ್ಲಿ ಉತ್ತಮ ಸಂಪರ್ಕವು ಖಂಡಿತವಾಗಿಯೂ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತರುತ್ತದೆ. ಸಿಯಾಚಿನ್ ಪ್ರದೇಶವು ಈಗ ಪ್ರವಾಸಿಗರಿಗೆ ಮತ್ತು ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಸಿಯಾಚಿನ್‍ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್ ವರೆಗೆ ಇಡೀ ಪ್ರದೇಶವನ್ನು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ತೆರೆಯಲಾಗಿದೆ ”ಎಂದು ಸಿಂಗ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
   
ಕುಮಾರ್ ಪೋಸ್ಟ್ 18,875 ಅಡಿ ಎತ್ತರದಲ್ಲಿದೆ. ಪ್ರವಾಸಿಗರು ಪಾರ್ಟಾಪುರದ ಮೂಲ ಶಿಬಿರದಿಂದ 11,000 ಅಡಿ ಎತ್ತರದಲ್ಲಿ ಕುಮಾರ್ ಪೋಸ್ಟ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ.
   
ಅಂದರೆ, ಬೇಸ್ ಕ್ಯಾಂಪ್‌ನಿಂದ ಕುಮಾರ್ ಪೋಸ್ಟ್‌ಗೆ ಆಯೋಜಿಸಿರುವ ವಾರ್ಷಿಕ ಸಾಹಸ ಯಾತ್ರೆ ಹೊರತಾಗಿಯೂ ಪ್ರವಾಸಿಗರು ಸಹ ಆಯಕಟ್ಟಿನ ಮಹತ್ವದ ಪ್ರದೇಶದಲ್ಲಿ ಸ್ವತಂತ್ರವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com