ಗ್ರಾಹಕರಿಗೆ ಹ್ಯುಂಡೈ ದೀಪಾವಳಿ ಗಿಫ್ಟ್: ಸ್ಯಾಂಟ್ರೋ ಆನಿವರ್ಸರಿ ಆವೃತ್ತಿ ಮಾರುಕಟ್ಟೆಗೆ

ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ತನ್ನ ಕ್ಯಾಂಪಾಕ್ಟ್ ಕಾರ್ ಸ್ಯಾಂಟ್ರೊದ ಆನಿವರ್ಸರಿ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಹೊಸ ಮಾದರಿಯ ಕಾರ್ ಬೆಲೆ .5.75 ಲಕ್ಷ ರೂ. (ಎಕ್ಸ್ ಶೋ ರೂಂ) ಇರಲಿದೆ.
ಸ್ಯಾಂಟ್ರೊದ ಆನಿವರ್ಸರಿ ಆವೃತ್ತಿ
ಸ್ಯಾಂಟ್ರೊದ ಆನಿವರ್ಸರಿ ಆವೃತ್ತಿ

ನವದೆಹಲಿ: ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ತನ್ನ ಕ್ಯಾಂಪಾಕ್ಟ್ ಕಾರ್ ಸ್ಯಾಂಟ್ರೊದ ಆನಿವರ್ಸರಿ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಹೊಸ ಮಾದರಿಯ ಕಾರ್ ಬೆಲೆ .5.75  ಲಕ್ಷ ರೂ. (ಎಕ್ಸ್ ಶೋ ರೂಂ) ಇರಲಿದೆ.

ಆನಿವರ್ಸರಿ ಆವೃತ್ತಿಯ ಸೀಮಿತ ಅವಧಿಯ ಎಡಿಷನ್ ಆಗಿರಲಿದ್ದು  Sportz MT ಹಾಗೂ AMT ಎಂಬ ಎರಡು ಮಾದರಿಗಳಲ್ಲಿ ದೊರಕಲಿದೆ.ಈ ಕಾರುಗಳ ಬೆಲೆ ಕ್ರಮವಾಗಿ 5,16,890 ರು. ಹಾಗೂ  5,74,890 ರು. ಆಗಿರಲಿದೆ.

ಈ ಕಾರುಗಳ  ಬಾಗಿಲಿನ ಹಿಡಿಕೆಗಳು  ಕಪ್ಪು ಬಣ್ಣದಿಂದ ಕೂಡಿರಲಿದ್ದು ಕಪ್ಪು ಬಣ್ನದ ರಿವ್ಯೂ ಕನ್ನಡಿಯನ್ನು ಹೊಂದಿರಲಿದೆ.ಅಲ್ಲದೆ ಕಾರಿನ ಒಳಾಂಗಣದಲ್ಲಿ ಹೊಸ ಸೀಟ್ ಫ್ಯಾಬ್ರಿಕ್ ಮತ್ತು ಆಕ್ವಾ ಟೀಲ್ ಇನ್ಸರ್ಟ್ ಗಳನ್ನು ಹೊಂದಿರಲಿದೆ. ಮುಂಭಾಗದ ಸೈಡ್ ಎಸಿ ಡೋರ್ ಗಳನ್ನು ಸಹ ಒಳಗೊಂಡಿರಲಿದೆ.

ಹೊಸ ಕಾರಿನ ಬಿಡುಗಡೆ ಸಂಬಂಧ ಂಆತನಾಡಿದ ಎಚ್‌ಎಂಐಎಲ್ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ವಿಕಾಸ್ ಜೈನ್:"ಆನಿವರ್ಸರಿ ಆವೃತ್ತಿಯು ನಮ್ಮ ಗ್ರಾಹಕರರನ್ನು ಸೆಳೆಯುತ್ತದೆ. ಮತ್ತು ಜಾಗತಿಕ ತಂತ್ರಜ್ಞಾನ, ಸೊಗಸಾದ ವಿನ್ಯಾಸ ಮತ್ತು ವಿಶ್ವ ದರ್ಜೆಯ ವೈಶಿಷ್ಟ್ಯಗಳ ಅನುಭವ ನೀಡಲಿದೆ.ಭಾರತೀಯರ ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಸ್ಯಾಂಟ್ರೊವನ್ನು ಅಭಿವೃದ್ಧಿಪಡಿಸಲಾಗಿದೆ" ಎಂದರು.

ಸಂಸ್ಥೆಯು ತನ್ನ ಹಿಂದಿನ ಆವೃತ್ತಿಯನ್ನು 2014 ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಿದ ನಂತರ ಕಳೆದ ಅಕ್ಟೋಬರ್‌ನಲ್ಲಿ ಇದನ್ನು ಹೊಸ ನಮೂನೆಗಳೊಂಡನೆ ಪುನಃ ಬಿಡುಗಡೆ ಮಾಡಲಾಗಿತ್ತು.ಈ ವರ್ಷದ ಸೆಪ್ಟೆಂಬರ್ ವರೆಗೆ ಎಚ್‌ಎಂಐಎಲ್ ಹೊಸ ಸ್ಯಾಂಟ್ರೊದ 75,944 ಯುನಿಟ್‌ಗಳು ಮಾರಾಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com