ಆಟೋ ಎಕ್ಸ್ ಪೋ 2020: ಎಂಜಿ ಮೋಟಾರ್ಸ್ ನಿಂದ ಮಾರ್ವೆಲ್ ಎಕ್ಸ್‌ ಎಲೆಕ್ಟ್ರಿಕ್‌ ಕಾರು ಅನಾವರಣ

ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ 'ಮಾರ್ವೆಲ್ ಎಕ್ಸ್' ಎಲೆಕ್ಟ್ರಿಕ್‌ ಕಾರನ್ನು ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಬುಧವಾರ ಆಟೋ ಎಕ್ಸ್ ಪೋ 2020ಯಲ್ಲಿ ಅನಾವರಣಗೊಳಿಸಿತು.

Published: 05th February 2020 05:13 PM  |   Last Updated: 05th February 2020 05:13 PM   |  A+A-


marvel-x

ಮಾರ್ವೆಲ್ ಎಕ್ಸ್

Posted By : Lingaraj Badiger
Source : UNI

ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ 'ಮಾರ್ವೆಲ್ ಎಕ್ಸ್' ಎಲೆಕ್ಟ್ರಿಕ್‌ ಕಾರನ್ನು ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಬುಧವಾರ ಆಟೋ ಎಕ್ಸ್ ಪೋ 2020ಯಲ್ಲಿ ಅನಾವರಣಗೊಳಿಸಿತು. ಇದರ ಜೊತೆಗೆ ಸಂಸ್ಥೆಯಿಂದ ಸುಮಾರು 14 ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಮಾರ್ವೆಲ್ಎಕ್ಸ್ ಸಮಗ್ರ ಇಂಟರ್ನೆಟ್, ಎಲೆಕ್ಟ್ರಿಕ್‌ ಮತ್ತು ಸ್ವಾಯತ್ತ ಸಾಮರ್ಥ್ಯಗಳೊಂದಿಗೆ ಅತ್ಯಾಧುನಿಕ ಉತ್ಪನ್ನಗಳನ್ನು ಹೊಂದಿದೆ. ಈ ಉತ್ಪನ್ನಗಳ ವರ್ಧಿತ ರಿಯಾಲಿಟಿ (ಎಆರ್) ನಕ್ಷೆಗಳ ಸಹಾಯದಿಂದ ಸಂಚರಣೆ ಹೆಚ್ಚು ನಿಖರ ಮತ್ತು ದೃಷ್ಟಿ ಗೋಚರವಾಗಿಸುತ್ತದೆ - ವಾಹನವು ಸ್ವಾಯತ್ತವಾಗಿ ಪಾರ್ಕಿಂಗ್‌ ಹುಡುಕಲು ಮತ್ತು ಸ್ವತಃ ನಿಲುಗಡೆ ಮಾಡಲು ಸಹಕಾರಿಯಾಗಿದೆ. ತನ್ನ ಉತ್ಪನ್ನಗಳ ಮೂಲಕ ಸಂಸ್ಥೆಯು ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಎಂಜಿ ಪ್ರಬಲ ತಂತ್ರಜ್ಞಾನದ ನಾಯಕತ್ವ ಎನ್ನುವ ಸಂದೇಶವನ್ನು ಸಾರಿದೆ.

ವಿಷನ್-ಐ ಕಾನ್ಸೆಪ್ಟ್ ಅನ್ನು"ವಿಶ್ವದ ಮೊದಲ 5ಜಿ ಶೂನ್ಯ-ಪರದೆ ಸ್ಮಾರ್ಟ್ ಕಾಕ್‌ಪಿಟ್" ಎಂದು ಕರೆಯಲಾಗುತ್ತದೆ ಮತ್ತು ಇದನ್ನು ವರ್ಗ-ವ್ಯಾಖ್ಯಾನಿಸುವ ವಾಹನವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹೊಸ ತಂತ್ರಜ್ಞಾನ 5 ಜಿ ಪ್ರಯಾಣದ ಸನ್ನಿವೇಶಗಳಿಗೆ ಉತ್ತಮ ವಾಹಕವಾಗಿದೆ. ಫ್ಯೂಚರಿಸ್ಟಿಕ್‌ ಕಾನ್ಸೆಪ್ಟ್‌ ಕಾರು ಇದಾಗಿದ್ದು ಶಿಕ್ಷಣ, ವಿರಾಮ,ಚಾಲನೆ, ನಿದ್ರೆ ಅಥವಾ ಸಭೆಯಂತಹ ಅನೇಕ ಹ್ಯಾಂಡ್ಸ್‌ಫ್ರೀ ಚಾಲನಾ ವಿಧಾನಗಳನ್ನು ಒಳಗೊಂದಿದೆ.

Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp