2019ರ ಡಿಸೆಂಬರ್ ನಲ್ಲಿ ಟಿವಿಎಸ್ ಕಂಪೆನಿಯ 231,57 ವಾಹನ ಮಾರಾಟ

2019ರ ಡಿಸೆಂಬರ್ ನಲ್ಲಿ ಟಿವಿಎಸ್ ಕಂಪೆನಿಯ 231,57 ವಾಹನಗಳು ಮಾರಾಟವಾಗಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

Published: 02nd January 2020 08:47 PM  |   Last Updated: 02nd January 2020 08:47 PM   |  A+A-


TVS Motor

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಹೊಸೂರು: 2019ರ ಡಿಸೆಂಬರ್ ನಲ್ಲಿ ಟಿವಿಎಸ್ ಕಂಪೆನಿಯ 231,57 ವಾಹನಗಳು ಮಾರಾಟವಾಗಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪೆನಿ ಟಿವಿಎಸ್ ಮೋಟಾರ್ ಕಂಪೆನಿ ಕಳೆದ ಡಿಸೆಂಬರ್ ನಲ್ಲಿ 231,571 ವಾಹನ ಮಾರಾಟ ಮಾಡಿದೆ. 2018ರ ಡಿಸೆಂಬರ್ ನಲ್ಲಿ 2,71,395 ವಾಹನಗಳು ಮಾರಾಟವಾಗಿದ್ದವು. ಸಂಸ್ಥೆಯ ಟಿವಿಎಸ್ ಅಪಾಚೆ ಆರ್‍ಟಿಆರ್ ಸೀರೀಸ್, ಟಿವಿಎಸ್ ಜುಪಿಟರ್ ಕ್ಲಾಸಿಕ್ ಮತ್ತು ಟಿವಿಎಸ್ ಎಕ್ಸ್‍ಎಲ್ ಸರಣಿಯ 2020ರ ಬಿಎಸ್-4 ವಾಹನಗಳನ್ನು ಉತ್ಪಾದಿಸಿ, ಮಾರುಕಟ್ಟೆಗೆ ಪೂರೈಸುತ್ತಿದೆ.

ಕಳೆದ ಡಿಸೆಂಬರ್ ನಲ್ಲಿ ಒಟ್ಟು 215,619 ವಾಹನಗಳು ಮಾರಾಟವಾಗಿದ್ದು, 2018ರ ಇದೇ ಅವಧಿಯಲ್ಲಿ 258,709 ವಾಹನಗಳು ಮಾರಾಟವಾಗಿದ್ದವು. ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 157,244 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. 2018ರ ಡಿಸೆಂಬರ್ ನಲ್ಲಿ 209,906 ವಾಹನಗಳು ಮಾರಾಟವಾಗಿದ್ದವು ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.

ಕಳೆದ ಡಿಸೆಂಬರ್‍ನಲ್ಲಿ 93,697 ಮೋಟರ್ ಸೈಕಲ್‍ಗಳು ಮಾರಾಟವಾಗಿದ್ದು, 2018ರ ಡಿಸೆಂಬರ್ ನಲ್ಲಿ 107,189 ವಾಹನಗಳು ಮಾರಾಟವಾಗಿದ್ದವು. ಕಳೆದ ಡಿಸೆಂಬರ್ ನಲ್ಲಿ 74,716 ಸ್ಕೂಟರ್‍ಗಳು ಮಾರಾಟವಾಗಿದ್ದು, 2018ರ ಡಿಸೆಂಬರ್‍ನಲ್ಲಿ 91,480 ವಾಹನಗಳು ಮಾರಾಟವಾಗಿದ್ದವು. 2018ರ ಡಿಸೆಂಬರ್ ಗೆ ಹೋಲಿಸಿದರೆ ರಫ್ತು ಪ್ರಮಾಣ ಶೇ 22ರಷ್ಟು ವೃದ್ಧಿಸಿದ್ದು, ಒಟ್ಟು 60,262 ವಾಹನಗಳು ಮಾರಾಟವಾಗಿವೆ.

Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp