ವಿಶ್ವಪ್ರಸಿದ್ಧ ಹಂಪಿ ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತ

ಪ್ರವಾಸ ಪ್ರಿಯರಿಗೆ ಸಿಹಿಸುದ್ದಿ! ವಿಶ್ವಪ್ರಸಿದ್ಧ ಹಂಪಿಯು ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ. ಕರ್ನಾಟಕ್ ಪ್ರವಾಸಿಗಳಿಗೆ ತೆರೆದುಕೊಂಡಾಗಲೂ ಹಂಪಿ ಮತ್ತಿತರೆ ತಾಣಗಳು ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಿದ್ದು ಇದೀಗ ಅವುಗಳು ಪ್ರವಾಸಿಗರನ್ನು ಕೈಬೀಸಿ ಕರೆಯಲು ಸಿದ್ದವಾಗಿದೆ. 
ಹಂಪಿ
ಹಂಪಿ

ಬೆಂಗಳೂರು: ಪ್ರವಾಸ ಪ್ರಿಯರಿಗೆ ಸಿಹಿಸುದ್ದಿ! ವಿಶ್ವಪ್ರಸಿದ್ಧ ಹಂಪಿಯು ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ. ಕರ್ನಾಟಕ್ ಪ್ರವಾಸಿಗಳಿಗೆ ತೆರೆದುಕೊಂಡಾಗಲೂ ಹಂಪಿ ಮತ್ತಿತರೆ ತಾಣಗಳು ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಿದ್ದು ಇದೀಗ ಅವುಗಳು ಪ್ರವಾಸಿಗರನ್ನು ಕೈಬೀಸಿ ಕರೆಯಲು ಸಿದ್ದವಾಗಿದೆ. 

ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜುಲೈ 6 ರಿಂದ ಪುರಾತತ್ವ ಇಲಾಖೆಗೆ ಸೇರಿದ ಸ್ಥಳಗಳನ್ನು ಪ್ರವಾಸಿಗರಿಗೆ ತೆರೆಯಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ ಶನಿವಾರ ಪ್ರಕಟಿಸಿದೆ. ಗುಂಪುಗೂಡುವಿಕೆ, ಗುಂಪಿನ ಛಾಯಾಗ್ರಹಣ ಸೇರಿದಂತೆ  ಹಲವಾರು ನಿರ್ಬಂಧಗಳು ಜಾರಿಯಾಗಿದ್ದು ಧ್ವನಿ ಬೆಳಕಿನ ಪ್ರದರ್ಶನ ಸಹ ಸ್ಥಗಿತವಾಗಿದೆ.

ಕಂಟೈನ್ಮೆಂಟ್ ವಲಯವಲ್ಲದ ಪ್ರದೇಶದಿಂದ ಬಂದ ಪ್ರವಾಸಿಗಳಿಗಷ್ಟೇ ಹಂಪಿಗೆ ಪ್ರವೇಶವಿರಲಿದೆ.  ಆಹಾರ ಮತ್ತು ಇತರ ತಿನಿಸನ್ನು ತರುವುದು ನಿಷೇಧ. ಪ್ಯಾಕೇಜ್ ಮಾಡಿದ ಕುಡಿಯುವ ನೀರನ್ನು ಮಾತ್ರ ಅನುಮತಿಸಲಾಗುತ್ತದೆ ಮತ್ತು ನಗದು ವಹಿವಾಟುಗಳನ್ನು ನಿಷೇಧಿಸಿದ್ದು ಆರ್ಕಿಯಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್ಐ) ಸ್ಮಾರಕಗಳ ಸೂಕ್ಷ್ಮ ಭಾಗಗಳಿಗೆ ಪ್ರವೇಶವನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಸ್ಮಾರಕಗಳ ಪ್ರವೇಶ ಹಾಗೂ ನಿರ್ಗಮನಕ್ಕೆ ಗೊತ್ತುಪಡಿಸಿದ ಮಾರ್ಗಗಳಿವೆ.

ಸ್ಮಾರಕಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು ಎಂದು ಸಚಿವಾಲಯ ಪ್ರಕಟಿಸಿದೆ. ಪ್ರವಾಸೋದ್ಯಮ ನಿರ್ದೇಶಕ ಕೆ ಎನ್ ರಮೇಶ್ ಮಾತನಾಡಿ, “ಅನ್ಲಾಕ್ 1.0 ರ ನಂತರ ಕರ್ನಾಟಕದ ಕೆಲವು ಪ್ರವಾಸಿ ತಾಣಗಳನ್ನು ತೆರೆಯಲಾಯಿತು, ಆದರೆ ಪ್ರವಾಸಿಗಳ ಸಂಖ್ಯೆ ಕಡಿಮೆ ಇದೆ.  ಈಗ ಎಎಸ್ಐ ತಂಡ ಮತ್ತು ಜಿಲ್ಲಾಡಳಿತ ಎಲ್ಲಾ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ 600 ಎಎಸ್‌ಐ ತಾಣಗಳಿವೆ. ”

ಕರ್ನಾಟಕದ ಎಎಸ್‌ಐನಿಂದ ಸಂರಕ್ಷಿಸಲ್ಪಟ್ಟ ಜನಪ್ರಿಯ ಹಂಪಿ, ಪಟ್ಟದಕಲ್ಲು, ಬಾದಾಮಿ, ಮತ್ತಿತರೆ ತಾಣಗಲು ಲಾಕ್‌ಡೌನ್ ಆಗಿರುವುದರಿಂದ ಮೂರು ತಿಂಗಳ ಕಾಲ ಸಂದರ್ಶಕರಿಗೆ ಮುಚ್ಚಲ್ಪಟ್ಟಿದ್ದವು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com