ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಮಾಡೆಲ್ ಬಿಡುಗಡೆ: ಹೊಸ ಮಾದರಿಯ ವಿವರಗಳು ಹೀಗಿವೆ

ಬಜಾಜ್ ಪಲ್ಸರ್ 125 ಹೊಸ ಮಾದರಿಯ ಬೈಕ್ ಜೂ.18 ರಂದು ಬಿಡುಗಡೆಯಾಗಿದೆ.
ಬಜಾಜ್ ಪಲ್ಸರ್ 125
ಬಜಾಜ್ ಪಲ್ಸರ್ 125

ಬಜಾಜ್ ಪಲ್ಸರ್ 125 ಹೊಸ ಮಾದರಿಯ ಬೈಕ್ ಜೂ.18 ರಂದು ಬಿಡುಗಡೆಯಾಗಿದೆ. 

ಸ್ಪ್ಲಿಟ್ ಸೀಟ್, ಈ ಹಿಂದಿನ ಮಾಡಲ್ ಗಳಲ್ಲಿ ಸಿಂಗಲ್ ಯುನಿಟ್ ನ ಬದಲು ಸ್ಪ್ಲಿಟ್ ಗ್ರಾಬ್ ರೈಲ್ಸ್ ಇರುವುದು ಈ ಮಾದರಿಯ ವಿಶೇಷತೆಯಾಗಿದೆ. ಎಂಟ್ರಿ ಲೆವೆಲ್ ಪಲ್ಸರ್ ನ ಹೊಸ ಮಾದರಿ ಇದಾಗಿದ್ದು, ಎಕ್ಸ್-ಶೋರೂಮ್ ಬೆಲೆಯನ್ನು 79,091 ರೂಪಾಯಿಗಳಿಗೆ ನಿಗದಿ ಮಾಡಲಾಗಿದೆ. 

ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದ್ದು, ಸಿಂಗಲ್ ಸೀಟ್ ಡಿಸ್ಕ್ ಬ್ರೇಕ್ ಪಲ್ಸರ್ 125 ಗಿಂತ 3,597 ರೂಪಾಯಿ ಅಗ್ಗದ ದರಲ್ಲಿ ಲಭ್ಯವಿದ್ದರೆ, ಸಿಂಗಲ್ ಸೀಟ್ ಡ್ರಮ್ ಬ್ರೇಕ್ ಮಾದರಿಗಿಂತ 8,096 ರೂಪಾಯಿ ಹೆಚ್ಚಿನ ಬೆಲೆ ಹೊಂದಿದೆ. 

ಸ್ಪೋರ್ಟಿ ಬೆಲ್ಲಿ ಪ್ಯಾನ್ ಹಾಗೂ ಸ್ಪ್ಲಿಟ್ ಗ್ರ್ಯಾಬ್  

ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಮಾದರಿ, ನಿಯೋನ್ ಗ್ರೀನ್ (ಮ್ಯಾಟ್ಟೆ ಬ್ಲ್ಯಾಕ್) ಬ್ಲ್ಯಾಕ್ ಸಿಲ್ವರ್, ಬ್ಲ್ಯಾಕ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.

ಪಲ್ಸರ್ 125 ಕಳೆದ ವರ್ಷ ಆಗಸ್ಟ್ ನಲ್ಲಿ ಬಿಡುಗಡೆಯಾಗಿತ್ತು. ಶೀಘ್ರವೇ ಪಲ್ಸರ್ ಮಾಡಲ್ ಗಳ ಪೈಕಿ ಅತಿ ಹೆಚ್ಚು ಬೇಡಿಕೆ ಪಡೆದಿತ್ತು. ಬಿಡುಗಡೆಯಾದ 6 ತಿಂಗಳಲ್ಲೇ 1 ಲಕ್ಷ ಬೈಕ್ ಗಳು ಮಾರಾಟವಾಗಿತ್ತು. ಈಗ ಸ್ಪೋರ್ಟಿ ಬೈಕ್ ಹಾಗೂ ಉತ್ತಮ ಪರ್ಫಾರ್ಮೆನ್ಸ್ ನ್ನು ಬಯಸುವವರಿಗಾಗಿ ಪಲ್ಸರ್ ನ ಹೊಸ 125 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ಬಜಾಜ್ ಆಟೋದ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com