ಮಹೇಂದ್ರಾ ಥಾರ್-2020 ರ ಮೊದಲ ವಾಹನ ಮಾರಾಟವಾಗಿದ್ದು ಬರೊಬ್ಬರಿ 1.11 ಕೋಟಿ ರೂ.ಗೆ, ವಿಶೇಷತೆ ಏನು ಗೊತ್ತೇ?

ಮಹೇಂದ್ರಾ ಥಾರ್-2020 ನ ಮೊದಲ ವಾಹನ ಬರೊಬ್ಬರಿ 1.11 ಕೋಟಿಗೆ ಮಾರಾಟಗೊಂಡಿದೆ. 
ಮಹೇಂದ್ರಾ ಥಾರ್-2020 ರ ಮೊದಲ ವಾಹನ ಮಾರಾಟವಾಗಿದ್ದು ಬರೊಬ್ಬರಿ 1.11 ಕೋಟಿ ರೂ.ಗೆ, ವಿಶೇಷತೆ ಏನು ಗೊತ್ತೇ?
ಮಹೇಂದ್ರಾ ಥಾರ್-2020 ರ ಮೊದಲ ವಾಹನ ಮಾರಾಟವಾಗಿದ್ದು ಬರೊಬ್ಬರಿ 1.11 ಕೋಟಿ ರೂ.ಗೆ, ವಿಶೇಷತೆ ಏನು ಗೊತ್ತೇ?

ಮಹೇಂದ್ರಾ ಥಾರ್-2020 ನ ಮೊದಲ ವಾಹನ ಬರೊಬ್ಬರಿ 1.11 ಕೋಟಿಗೆ ಮಾರಾಟಗೊಂಡಿದೆ. 

ಇದೇನು ಈ ವಾಹನದಲ್ಲಿ ಅಂತಹ ವೈಶಿಷ್ಟ್ಯತೆ ಏನಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಮಹೇಂದ್ರ &ಮಹೇಂದ್ರ ಸಂಸ್ಥೆ  ಕೋವಿಡ್-19 ಪರಿಹಾರ ಕಾರ್ಯಕ್ಕಾಗಿ 1.1 ಕೋಟಿ ಥಾರ್ 2020 ಯ ಮೊದಲ ಯುನಿಟ್ ನ್ನು ಆನ್ ಲೈನ್ ಹರಾಜಿಗಿಡಲಾಗಿತ್ತು.  ದೇಶಾದ್ಯಂತ 550 ಲೊಕೇಷನ್ ಗಳಿಂದ 5,500 ಎಂಟ್ರಿಗಳು ಬಂದಿತ್ತು. 

ಮೂಲ ಬೆಲೆ 25 ಲಕ್ಷಕ್ಕಿಂತ 4 ಪಟ್ಟು ಹೆಚ್ಚಿನ ಅಂದರೆ 1.11 ಕೋಟಿ ರೂಪಾಯಿಗಳಿಗೆ ದೆಹಲಿಯ ಆಕಾಶ್ ಮೈಂಡಾ ಎಂಬುವವರು ಬಿಡ್ ಮಾಡಿ ಮೊದಲ ಮಹೇಂದ್ರ ಥಾರ್ ವಾಹನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಡಿ ಬಿಡ್ಡಿಂಗ್ ನ ಆದಾಯವನ್ನು ಕೋವಿಡ್-19 ಪರಿಹಾರ ಕಾರ್ಯಕ್ರಮಗಳಿಗೆ ಬಳಕೆ ಮಾಡಲು ಸ್ವೀಕರಿಸುವುದಕ್ಕೆ ಆಕಾಶ್ ಸ್ವದೇಶ್ ಫೌಂಡೇಷನ್ ನ್ನು ಆಯ್ಕೆ ಮಾಡಿದ್ದಾರೆ ಎಂದು ಮಹೇಂದ್ರ ಸಂಸ್ಥೆ ತಿಳಿಸಿದೆ. 

ಒಟ್ಟಾರೆ ಭಾಗಿಯಾಗಿದ್ದ ಬಿಡ್ಡರ್ ಗಳ ಪೈಕಿ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು 37 ಬಿಡ್ಡರ್ ಗಳು ಬಿಡ್ ಮಾಡಿದ್ದರು. ನಾಲ್ವರು 1 ಕೋಟಿಗೂ ಮೀರಿ ಬಿಡ್ ಮಾಡಿದ್ದರು. ಒಟ್ಟಾರೆ ಅತಿ ಹೆಚ್ಚು ಬಿಡ್ ಮಾಡಿದ ಬಿಡ್ಡರ್ ಗಳ ಒಟ್ಟಾರೆ ಮೊತ್ತ 35.70 ಕೋಟಿ ರೂಪಾಯಿಯಾಗಿದೆ. 

ಸೆ.19 ರಂದು ಆನ್ ಲೈನ್ ನೋಂದಣಿ ಪ್ರಾರಂಭವಾಗಿ ಸೆ.24 ರಂದು ಹರಾಜು ಪ್ರಕ್ರಿಯೆ ಪ್ರಾರಂಭವಾಗಿ ಸೆ.29 ರಂದು ಮುಕ್ತಾಯಗೊಂಡಿತ್ತು. ಬಿಡ್ಡರ್ ಗಳ ಪೈಕಿ ಚಿಕ್ಕಮಗಳೂರಿನ ವಿಶ್ವನಾಥ್ ಎಂಬುವವರೂ ಒಬ್ಬರಾಗಿದ್ದರು ಎಂಬುದು ವಿಶೇಷ. 

ಹರಾಜು ಪ್ರಕ್ರಿಯೆಯ ವಿಜೇತರಿಗೆ ಥಾರ್ ಆವೃತ್ತಿಗೆ ಸಂಬಂಧಿಸಿದಂತೆ ಒಂದಷ್ಟು ವಿಶೇಷ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಹರಾಜುಗೊಂಡಿರುವ ಥಾರ್ ಕಾರನ್ನು ಥಾರ್ #1 ಬ್ಯಾಡ್ಜ್ ನೊಂದಿಗೆ ಅಲಂಕರಿಸಲಾಗುತ್ತದೆ ಈ ಮೂಲಕ ಕಾರಿನ ಮಾಲಿಕರು ಥಾರ್ ನ್ನು ಖರೀದಿಸಿದ ಮೊದಲ ವ್ಯಕ್ತಿ ಎಂಬುದನ್ನು ಸೂಚಿಸಲಾಗುತ್ತದೆ. ಅಷ್ಟೇ ಅಲ್ಲದೇ ಮಾಲಿಕರ ಹೆಸರಿನ ಮೊದಲ ಅಕ್ಷರಗಳನ್ನು ಥಾರ್ #1 ಬ್ಯಾಡ್ಜ್ ನೊಂದಿಗೆ ಹಾಕಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com