ಚಾರಣಿಗರಿಗೆ ಮುಕ್ತವಾದ ದೂದ್ ಸಾಗರ ಜಲಪಾತ: ಹೊರಟು ನಿಂತ ಪ್ರವಾಸಿ ಪ್ರಿಯರು
ದೂದ್ ಸಾಗರ್ ಜಲಪಾತದ ಟ್ರೆಕ್ಕಿಂಗ್ ಗೆ ಸರ್ಕಾರ ಮುಕ್ತ ಮಾಡಿಕೊಟ್ಟ ನಂತರ ಹಲವು ಸಾಹಸಿ ಚಾರಣಿಗರು ವಾರಾಂತ್ಯದ ಟ್ರಕ್ಕಿಂಗ್ ಗೆ ಬುಕ್ ಮಾಡಲು ಆರಂಭಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಜಲಪಾತಕ್ಕೆ ಜೀಪ್ ಸಫಾರಿ ಕೂಡ ಮುಕ್ತವಾಗುವ ನಿರೀಕ್ಷೆಯಿದೆ.
Published: 23rd September 2020 03:34 PM | Last Updated: 23rd September 2020 03:34 PM | A+A A-

ದೂದ್ ಸಾಗರ್ ಜಲಪಾತದಲ್ಲಿ ಟ್ರಕ್ಕಿಂಗ್ ಹೋಗುತ್ತಿರುವ ಚಾರಣಿಗರು
ಹುಬ್ಬಳ್ಳಿ: ದೂದ್ ಸಾಗರ್ ಜಲಪಾತದ ಟ್ರೆಕ್ಕಿಂಗ್ ಗೆ ಸರ್ಕಾರ ಮುಕ್ತ ಮಾಡಿಕೊಟ್ಟ ನಂತರ ಹಲವು ಸಾಹಸಿ ಚಾರಣಿಗರು ವಾರಾಂತ್ಯದ ಟ್ರಕ್ಕಿಂಗ್ ಗೆ ಬುಕ್ ಮಾಡಲು ಆರಂಭಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಜಲಪಾತಕ್ಕೆ ಜೀಪ್ ಸಫಾರಿ ಕೂಡ ಮುಕ್ತವಾಗುವ ನಿರೀಕ್ಷೆಯಿದೆ.
ಗೋವಾದಲ್ಲಿರುವ ದೂದ್ ಸಾಗರ್ ಜಲಪಾತಕ್ಕೆ ರೈಲ್ವೆ ಹಳಿಗಳ ಮೂಲಕ ನಡೆದುಕೊಂಡು ಹೋಗಲು ಮಾತ್ರ ಸಾಧ್ಯವಿದೆ. ಕೊಲ್ಲೆಮ್ ನಲ್ಲಿರುವ ಹೊಟೇಲ್ ಗಳು ಟ್ರಕ್ಕಿಂಗ್ ಪ್ರಿಯರಿಗೆ ಪ್ಯಾಕೇಜ್ ಗಳ ಆಫರ್ ನೀಡಲು ಮುಂದಾಗಿವೆ.
ಈ ವರ್ಷ ನಾವು ದೂದ್ ಸಾಗರ್ ಗೆ ಕೋವಿಡ್-19 ಲಾಕ್ ಡೌನ್ ಕಾರಣದಿಂದ ಟ್ರಕ್ಕಿಂಗ್ ಪ್ರಿಯರನ್ನು ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಇದೀಗ ಲಾಕ್ ಡೌನ್ ಸಡಿಲಿಕೆಯಾದ ನಂತರ ಕೆಲವು ನಿರ್ದಿಷ್ಟ ನಿಯಮಗಳಿಂದ ಟ್ರಕ್ ಪ್ರಿಯರನ್ನು ಕರೆದುಕೊಂಡು ಹೋಗಲು ಅವಕಾಶವಿದೆ. ದೂದ್ ಸಾಗರ್ ಜಲಪಾತಕ್ಕೆ ಮತ್ತು ಟಮ್ಡಿ ಸುರ್ಲ ಜಲಪಾತಕ್ಕೆ ಟ್ರಕ್ಕಿಂಗ್ ನ್ನು ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭಿಸಲಿದ್ದೇವೆ. ಅಕ್ಟೋಬರ್ 2ರಿಂದ ಸರ್ಕಾರದ ನಿಯಮ ಪ್ರಕಾರ ಜೀಪ್ ಸಫಾರಿ ಕೂಡ ಆರಂಭವಾಗಲಿದೆ. ಆಗ ಟ್ರಕ್ಕಿಂಗ್ ಪ್ಯಾಕೇಜ್ ಸ್ಥಗಿತಗೊಳ್ಳಲಿದೆ ಎಂದು ಕೊಲ್ಲೆಮ್ ನ ಪ್ರವಾಸಿ ನಿರ್ವಾಹಕರು ತಿಳಿಸುತ್ತಾರೆ.
ಇದೀಗ ಬೆಂಗಳೂರಿನ ಹಲವು ಸಾಹಸಿ ಚಾರಣಿಗ ಕಂಪೆನಿಗಳು ದೂದ್ ಸಾಗರ್ ಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಮುಂದಾಗಿವೆ. ಪ್ರವಾಸೋದ್ಯಮ ಇಲಾಖೆ ಮತ್ತೆ ಉದ್ಯಮ ಚಟುವಟಿಕೆಯನ್ನು ನಿಧಾನವಾಗಿ ತೆರೆಯಲು ಮುಂದಾಗಿವೆ ಎಂದು ಹೊಟೇಲ್ ಮಾಲೀಕರು ಹೇಳುತ್ತಿದ್ದಾರೆ.
ಕಳೆದ ವರ್ಷ ದೂದ್ ಸಾಗರ್ ಗೆ ಸುಮಾರು 10 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದರಂತೆ. ಅವರಲ್ಲಿ ಬಹುತೇಕ ಮಂದಿ ಬೆಂಗಳೂರು ಮತ್ತು ಮುಂಬೈ ಮೂಲದವರು. ಈ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಟ್ರಕ್ಕಿಂಗ್ ಇರಲಿಲ್ಲ. ಇದೀಗ ನಿಧಾನವಾಗಿ ಆರಂಭವಾಗುತ್ತಿದೆ. ಗೋವಾ ಗಡಿಭಾಗವರೆಗೆ ಹೋದ ಪ್ರವಾಸಿಗರನ್ನು ದೂದ್ ಸಾಗರಕ್ಕೆ ಕರೆದುಕೊಂಡು ಹೋಗುವುದು ಮತ್ತು ತಂದುಬಿಡುವುದನ್ನು ಟೂರ್ ಆಪರೇಟರ್ ಗಳು ಮಾಡುತ್ತಾರೆ ಎಂದು ನೇಚರ್ ಅಡ್ಮೈರ್ ಆರ್ಗನೈಸೇಷನ್ ನ ದೇವ್ ಬಾಲಾಜಿ ಹೇಳುತ್ತಾರೆ.