ಬಿಎಂಡಬ್ಲ್ಯು ಮೋಟಾರ್ರಾಡ್ ಸಫಾರಿ 2021 ಆವೃತ್ತಿ ಭಾರತದಲ್ಲಿ ಪ್ರಾರಂಭ

ಬಿಎಂಡಬ್ಲ್ಯು ಮೋಟಾರ್ರಾಡ್ ಇಂಡಿಯಾ ತನ್ನ ವಿಶಿಷ್ಟ ರೈಡಿಂಗ್ ಎಕ್ಸ್‍ಪೀರಿಯೆನ್ಸ್-ಬಿಎಂಡಬ್ಲ್ಯು ಮೋಟಾರ್ರಾಡ್ ಸಫಾರಿ 2021 ಕ್ಕೆ ಭಾರತದಲ್ಲಿ ಚಾಲನೆ ನೀಡಿದೆ. 

Published: 06th February 2021 05:21 PM  |   Last Updated: 06th February 2021 05:21 PM   |  A+A-


BMW Motorrad Safari 2021 Edition commences in India

ಬಿಎಂಡಬ್ಲ್ಯು ಮೋಟಾರ್ರಾಡ್ ಸಫಾರಿ 2021 ಆವೃತ್ತಿ ಭಾರತದಲ್ಲಿ ಪ್ರಾರಂಭ

Posted By : Srinivas Rao BV
Source : Online Desk

ಬಿಎಂಡಬ್ಲ್ಯು ಮೋಟಾರ್ರಾಡ್ ಇಂಡಿಯಾ ತನ್ನ ವಿಶಿಷ್ಟ ರೈಡಿಂಗ್ ಎಕ್ಸ್‍ಪೀರಿಯೆನ್ಸ್- ಬಿಎಂಡಬ್ಲ್ಯು ಮೋಟಾರ್ರಾಡ್ ಸಫಾರಿ 2021 ಕ್ಕೆ ಭಾರತದಲ್ಲಿ ಚಾಲನೆ ನೀಡಿದೆ. 

ಬಿಎಂಡಬ್ಲ್ಯು ಮೋಟಾರ್ರಾಡ್ ಸಫಾರಿ ಭಾರತದ ಮೋಟಾರ್‍ಸೈಕಲ್ ಮಾಲೀಕರಿಗೆಂದೇ ವಿನ್ಯಾಸಗೊಳಿಸಲಾಗಿದ್ದು ಮತ್ತು ದ್ವಿಚಕ್ರ ವಾಹನಗಳಲ್ಲಿ ಅತ್ಯುನ್ನತ ರೈಡಿಂಗ್ ಅನುಭವ ನೀಡುತ್ತದೆ. 

50+ ಕ್ಯೂರೇಟೆಡ್ ರೈಡಿಂಗ್ ಅನುಭವಗಳನ್ನು ದೇಶಾದ್ಯಂತ ಆಯೋಜಿಸಲಾಗಿದ್ದು ಭಾಗವಹಿಸುವವರಿಗೆ ಸಂಪೂರ್ಣ ಆವಿಷ್ಕಾರ ಮತ್ತು ಸಾಹಸದ ಭಾವನೆ ನೀಡುವ ಮೂಲಕ ಪ್ರತಿ ರೈಡ್ ಅನ್ನು ದೇಶಾದ್ಯಂತ ವಿಭಿನ್ನ ತಾಣಗಳಿಗೆ ಕೊಂಡೊಯ್ಯುತ್ತದೆ.

ಈ ಸೀರೀಸ್ ಜನವರಿ 29-31, 2021 ರ ಮೋಟಾರ್ರಾಡ್ ಡೆಸರ್ಟ್ ಸಫಾರಿಯಿಂದ ಜೈಪುರದಿಂದ ಬಿಕಾನೇರ್‍ನ ಗ್ರೇಟ್ ಇಂಡಿಯನ್ ಥಾರ್ ಡೆಸರ್ಟ್ ಮಾರ್ಗದ ಮೂಲಕ ಪ್ರಾರಂಭವಾಗಿದೆ. ಭಾಗವಹಿಸುವವರು ಈ ಸಫಾರಿಯಿಂದ ಅವರ ರೈಡಿಂಗ್ ಕೌಶಲ್ಯಗಳನ್ನು ಮತ್ತು ಪೂರ್ವಸಿದ್ಧವಾದ ರೈಡರ್ ಸಫಾರಿ ಮಾದರಿಗಳೊಂದಿಗೆ ಬಂದ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ಮೋಟಾರ್ರಾಡ್ ಇಂಟರ್ ನ್ಯಾಷನಲ್ ಬಿಎಂಡಬ್ಲ್ಯು 

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷರಾದ ವಿಕ್ರಮ್ ಪಾವಾಹ್, ಈ ಬಗ್ಗೆ ಮಾತನಾಡಿದ್ದು ಬಿಎಂಡಬ್ಲ್ಯು ಮೋಟಾರ್ರಾಡ್ ಸಫಾರಿ ಮೂಲಕ ನಾವು  ಮೋಟಾರ್ರಾಡ್ ಮಾಲೀಕರಿಗೆ ಜೀವಮಾನದ ವಿಶಿಷ್ಠ  ರೈಡ್ ಅನುಭವ ಒದಗಿಸಲು ಯತ್ನಿಸುತ್ತಿದ್ದೇವೆ. 

ಹೊಸ ಪ್ರದೇಶಗಳ ಆವಿಷ್ಕಾರ ಭಾವನೆಯನ್ನು ಆನಂದಿಸಲು ಅವಕಾಶ ನೀಡುತ್ತದೆ. ನಮ್ಮ ಗುರಿ ಮೋಟಾರ್ರಾಡ್ ಸಮುದಾಯ ಮತ್ತು ಭಾರತದಲ್ಲಿ ರೈಡಿಂಗ್ ಸಂಸ್ಕೃತಿಯನ್ನು ಸತತವಾಗಿ ಬೆಳೆಸುವುದಾಗಿದೆ ಮತ್ತು ಬಿಎಂಡಬ್ಲ್ಯು ಮೋಟಾರ್ರಾಡ್ ಸಫಾರಿ ಅಸಾಧಾರಣ ಕ್ಷಣಗಳು, ಕಥೆಗಳು ಮತ್ತು ಪ್ರಯಾಣಗಳನ್ನು ಸೃಷ್ಟಿಸುವುದಾಗಿದೆ ಹಾಗೂ ಅದರ ಭಾಗವಾಗಿರುವ ಪ್ರತಿಯೊಬ್ಬರೂ ಆನಂದಿಸುವಂತೆ ಮಾಡುವುದಾಗಿದೆ ಎಂದು ಹೇಳಿದ್ದಾರೆ.

ಬಿಎಂಡಬ್ಲ್ಯು ಮೋಟಾರ್ರಾಡ್ ಸಫಾರಿ ಸಾಹಸದ ಉತ್ಸಾಹಿಗಳಿಗೆ ಪ್ರವಾಸ-ಆಧರಿತ ಪರಿಕಲ್ಪನೆಯಾಗಿದೆ. ಇದು ಭಾಗವಹಿಸುವವರಿಗೆ ಹೊಸ ರೈಡಿಂಗ್ ಕೌಶಲ್ಯಗಳನ್ನು ಕಲಿಯಲು ನೆರವಾಗುತ್ತದೆ. 

Stay up to date on all the latest ಪ್ರವಾಸ-ವಾಹನ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp