ಭಾರತದಲ್ಲಿ ಜಾಗ್ವಾರ್ ಐ-ಪೇಸ್ ಬಿಡುಗಡೆಗೆ ಸಜ್ಜು, ವಿದ್ಯುಚ್ಚಾಲಿತ ಎಸ್ ಯುವಿ ವಿವರಗಳು ಹೀಗಿವೆ...
ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಮೊದಲ ಸಂಪೂರ್ಣ-ವಿದ್ಯುಚ್ಚಾಲಿತ ಎಸ್ಯುವಿ, ಜಾಗ್ವಾರ್ ಐ-ಪೇಸ್ ಅನ್ನು 2021 ರ ಮಾರ್ಚ್ 9 ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
Published: 09th February 2021 11:54 AM | Last Updated: 09th February 2021 01:15 PM | A+A A-

ಜಾಗ್ವಾರ್ ಐ-ಪೇಸ್
ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಮೊದಲ ಸಂಪೂರ್ಣ-ವಿದ್ಯುಚ್ಚಾಲಿತ ಎಸ್ಯುವಿ, ಜಾಗ್ವಾರ್ ಐ-ಪೇಸ್ ಅನ್ನು 2021 ರ ಮಾರ್ಚ್ 9 ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರೋಹಿತ್ ಸೂರಿ ಈ ಬಗ್ಗೆ ಮಾತನಾಡಿದ್ದು “ಲ್ಯಾಂಡ್ ರೋವರ್ ಡಿಫೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಅಭೂತಪೂರ್ವ, ಅಸಾಧಾರಣ ಪ್ರತಿಕ್ರಿಯೆ ದೊರೆತಿತ್ತು. ಭಾರತದಲ್ಲಿ ಜಾಗ್ವಾರ್ ಐ-ಪೇಸ್ ಅನ್ನು ಪ್ರಾರಂಭಿಸಲು ಇದೇ ಮಾದರಿಯ ಮತ್ತೊಂದು ಕಾರ್ಯಕ್ರಮ ಮಾಡುವುದಕ್ಕೆ ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.
ಐ-ಪೇಸ್, ಪ್ರಾರಂಭವಾದಾಗಿನಿಂದ, 80 ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದಿದೆ. 2019 ರಲ್ಲಿ ಏಕಕಾಲದಲ್ಲಿ, ವರ್ಷದ ವಿಶ್ವ ಕಾರು, ವರ್ಷದ ವಿಶ್ವ ಹಸಿರು ಕಾರು ಮತ್ತು ವರ್ಷದ ವಿಶ್ವ ಕಾರ್ ವಿನ್ಯಾಸಗಳಂತಹ ವಿಶ್ವ ದರ್ಜೆ ಕಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮೊದಲ ಕಾರು ಇದಾಗಿದೆ. ಭಾರತದಲ್ಲಿ ಹೊಸ ಜಾಗ್ವಾರ್-ಐ ಪೇಸ್ ನ ಬೆಲೆ 1 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಭಾರತದಲ್ಲಿ ಜಾಗ್ವಾರ್ ಐ-ಪೇಸ್ ಗಾಗಿ ಬುಕಿಂಗ್ಗಳನ್ನು ತೆರೆಯಲಾಗಿದೆ.
ಭಾರತದ ಜಾಗ್ವಾರ್ ಶ್ರೇಣಿಯಲ್ಲಿ XE (46.64 ಲಕ್ಷದಿಂದ ಪ್ರಾರಂಭ), XF (55.67 ಲಕ್ಷ ಬೆಲೆ), F-PACE (66.07 ಲಕ್ಷ ಬೆಲೆ) ಮತ್ತು F-TYPE (95.12 ಲಕ್ಷದಿಂದ ಪ್ರಾರಂಭ) ಸೇರಿವೆ. ಮೇಲಿನ ಬೆಲೆಗಳು ಎಕ್ಸ್ ಶೋರೂಮ್ ಬೆಲೆಗಳಾಗಿವೆ. ಜಾಗ್ವಾರ್ ಐ-ಪೇಸ್ ವಿಶ್ವದ ಮೊದಲ ಪ್ರೀಮಿಯಂ ಸಂಪೂರ್ಣ-ವಿದ್ಯುಚ್ಚಾಲಿತ ಕಾರ್ಯಕ್ಷಮತೆಯ ಎಸ್ಯುವಿಯಾಗಿದೆ.