ರ‍್ಯಾಪಿಡೋ ಬೈಕ್ ಟ್ಯಾಕ್ಸಿ ರೆಂಟಲ್ ಸೇವೆಗಳಿಗೆ ಚಾಲನೆ: ದರ, ವಿವರ ಹೀಗಿದೆ...

ಬೈಕ್ ಟ್ಯಾಕ್ಸಿ ಪ್ಲಾಟ್‍ಫಾರಂ ರ‍್ಯಾಪಿಡೊ ಬೆಂಗಳೂರು, ದೆಹಲಿ ಎನ್‍ಸಿಆರ್, ಹೈದರಾಬಾದ್, ಚೆನ್ನೈ, ಕೊಲ್ಕತಾ ಮತ್ತು ಜೈಪುರ ಒಳಗೊಂಡು ಭಾರತದ ಆರು ನಗರಗಳಲ್ಲಿ ಮೊಟ್ಟಮೊದಲ ಬಾರಿಗೆ ರ‍್ಯಾಪಿಡೊ ರೆಂಟಲ್ ಸರ್ವೀಸಸ್ ಪ್ರಾರಂಭವನ್ನು ಪ್ರಕಟಿಸಿದೆ. 

Published: 12th February 2021 05:28 PM  |   Last Updated: 12th February 2021 05:29 PM   |  A+A-


Rapido rental services for bikes launched in 6 cities, fare starts at ₹99

ರ‍್ಯಾಪಿಡೋ ರೆಂಟಲ್ ಸೇವೆಗಳಿಗೆ ಚಾಲನೆ: ದರ, ವಿವರ ಹೀಗಿದೆ...

Posted By : Srinivas Rao BV

ಭಾರತದ ಅತ್ಯಂತ ದೊಡ್ಡ ಬೈಕ್ ಟ್ಯಾಕ್ಸಿ ಪ್ಲಾಟ್‍ಫಾರಂ ರ‍್ಯಾಪಿಡೊ ಬೆಂಗಳೂರು, ದೆಹಲಿ ಎನ್‍ಸಿಆರ್, ಹೈದರಾಬಾದ್, ಚೆನ್ನೈ, ಕೊಲ್ಕತಾ ಮತ್ತು ಜೈಪುರ ಒಳಗೊಂಡು ಭಾರತದ ಆರು ನಗರಗಳಲ್ಲಿ ಮೊಟ್ಟಮೊದಲ ಬಾರಿಗೆ ರ‍್ಯಾಪಿಡೊ ರೆಂಟಲ್ ಸರ್ವೀಸಸ್ ಪ್ರಾರಂಭವನ್ನು ಪ್ರಕಟಿಸಿದೆ. 

ರ‍್ಯಾಪಿಡೊ ರೆಂಟಲ್ ಅನ್ನು 1 ಗಂಟೆ, 2 ಗಂಟೆಗಳು, 3 ಗಂಟೆಗಳು, 4 ಗಂಟೆಗಳು ಮತ್ತು 6 ಗಂಟೆಗಳು ಹೀಗೆ ಆಯ್ದ ಪ್ಯಾಕೇಜ್ ಅವಧಿಗೆ ಬುಕ್ ಮಾಡಬಹುದು ಮತ್ತು ವಿಶೇಷವಾದ ಕ್ಯಾಪ್ಟನ್(ರ್ಯಾಪಿಡೊ ಡ್ರೈವರ್ ಪಾರ್ಟ್‍ನರ್) ಇಡೀ ಟ್ರಿಪ್‍ನಾದ್ಯಂತ ಗ್ರಾಹಕರಿಗೆ ಲಭ್ಯವಿರುತ್ತಾನೆ. ಪ್ರತಿ ಕಾಪ್ಟನ್ ಕೂಡಾ ಈ ಸೇವೆಗೆ ಅರ್ಹರಾಗಿರುತ್ತಾರೆ ಮತ್ತು ಅದು ಪೂರ್ವನಿಯೋಜಿತವಾಗಿ ರೆಂಟಲ್‍ಗೆ ಸನ್ನದ್ಧವಾಗಿರುತ್ತದೆ. ಈ ವಿನೂತನ ಬಗೆಯ ಸೇವೆಯಿಂದ ಕಂಪನಿಯು ಗ್ರಾಹಕರಿಗೆ ಉನ್ನತ ಅನುಭವ ನೀಡುವ ಮತ್ತು ಕ್ಯಾಪ್ಟನ್‍ಗಳಿಗೆ ಉತ್ತಮ ಗಳಿಕೆಯ ಅವಕಾಶ ನೀಡುವ ಗುರಿ ಹೊಂದಿದೆ.

ರೆಂಟಲ್ ಪ್ಯಾಕೇಜ್ ಬೆಲೆ ವಿವರಗಳು

ರ್ಯಾಪಿಡೊ ರೆಂಟಲ್ ಪ್ರಾರಂಭ ಕುರಿತು ರ್ಯಾಪಿಡೊ ಸಹ-ಸಂಸ್ಥಾಪಕ ಅರವಿಂದ್ ಸಂಕಾ, “ಕಳೆದ ತಿಂಗಳುಗಳಲ್ಲಿ ನಾವು ಬಹು-ನಿಲುಗಡೆಗಳ, ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಿರುವ ರೈಡ್‍ಗಳ ಅಗತ್ಯವನ್ನು ಅದರಲ್ಲಿಯೂ ನಮ್ಮ ಹೆಚ್ಚು ಬಳಕೆಯ ಗ್ರಾಹಕರಲ್ಲಿ ಗಮನಿಸಿದೆವು. ರ್ಯಾಪಿಡ್ ರೆಂಟಲ್‍ನೊಂದಿಗೆ ನಾವು ಮಲ್ಟಿ-ಪಾಯಿಂಟ್ ಪ್ರಯಾಣ ಅಗತ್ಯವಿರುವ ಅಂತಹ ಬಳಕೆದಾರರ ಅಗತ್ಯ ಪೂರೈಸುವ ಗುರಿ ಹೊಂದಿದ್ದೇವೆ. ಇದು ಸ್ಥಳೀಯ ಅಂಗಡಿಯಿಂದ ಕೆಲವೇ ವಸ್ತುಗಳನ್ನು ಕೊಳ್ಳುವ ಕಿರಿದಾದ ನಿಲುಗಡೆಯಾಗಿರಬಹುದು/ಕೆಲಸ ಅಥವಾ ವೈಯಕ್ತಿಕ ಬಳಕೆಗಳಿಗೆ ಸಂಬಂಧಿಸಿದ ಶಾಪಿಂಗ್, ಮನೆ ಹುಡುಕಾಟ ಇತ್ಯಾದಿ ಹಲವು ನಿಲುಗಡೆಗಳಾಗಿರಬಹುದು. ನಾವು ಉನ್ನತ ಬಳಕೆದಾರರ ಅನುಭವ ಪೂರೈಸುವ ಹಾಗೂ ನಮ್ಮ ಗ್ರಾಹಕರು ಮತ್ತು ಕ್ಯಾಪ್ಟನ್‍ಗಳಿಗೆ ಪರಸ್ಪರ ಅನುಕೂಲವಾಗುವ ಸಂದರ್ಭವನ್ನು ಪೂರೈಸುವ ಭರವಸೆ ಹೊಂದಿದ್ದೇವೆ” ಎಂದರು.

1 ಗಂಟೆ ಸಮಯ ಹಾಗೂ 10 ಕಿಲೋಮೀಟರ್ ವರೆಗೆ 99 ರೂಪಾಯಿ ಹಾಗೂ 6 ಗಂಟೆಗಳವರೆಗಿನ ಸಮಯ ಹಾಗೂ 60 ಕಿಲೋಮೀಟರ್ ವರೆಗೂ 599 ರೂಪಾಯಿವರೆಗೂ ಶುಲ್ಕ ನಿಗದಿಪಡಿಸಲಾಗಿದೆ. ಗ್ರಾಹಕರು ಆ್ಯಪ್ ಡೌನ್‍ಲೋಡ್ ಮಾಡಿ ಅವರ ಖಾತೆಗೆ ಲಾಗಿನ್ ಆಗಬೇಕು ಮತ್ತು ರ‍್ಯಾಪಿಡೋ ರೆಂಟಲ್ ರೈಡ್ ಅನ್ನು ಅವರ ಐಒಎಸ್/ಆಂಡ್ರಾಯಿಡ್ ಫೋನ್‍ಗಳಲ್ಲಿ ಬುಕ್ ಮಾಡುವ ಮೂಲಕ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. 

Stay up to date on all the latest ಪ್ರವಾಸ-ವಾಹನ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp