
ನ್ಯೂ BMW X3 xDrive30i SportX ಭಾರತದಲ್ಲಿ ಬಿಡುಗಡೆ
ಹೊಸ ಬಿಎಂಡಬ್ಲ್ಯು X3 xDrive30i SportX ಭಾರತದಲ್ಲಿ ಬಿಡುಗಡೆಯಾಗಿದೆ. ಸ್ಥಳೀಯವಾಗಿ ಬಿಎಂಡಬ್ಲ್ಯು ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದಿಸಲಾದ ಹೊಸ ‘SportX’ ಉತ್ಸಾಹಕರ ಪೆಟ್ರೋಲ್ ವೇರಿಯೆಂಟ್ನ BMW X3 ಇಂದಿನಿಂದ ಡೀಲರ್ಶಿಪ್ಗಳಲ್ಲಿ ಲಭ್ಯವಿದೆ.
ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್, “ ಸ್ಪೋಟ್ರ್ಸ್ಆಕ್ಟಿವಿಟಿ ವೆಹಿಕಲ್ (ಎಸ್ಎವಿ) ವಿಶ್ವದಲ್ಲಿ ಬಿಎಂಡಬ್ಲ್ಯು ತನ್ನ ‘X’ ಶ್ರೇಣಿಯಿಂದ ಮುಂಚೂಣಿಯಲ್ಲಿದೆ. ಸುಮಾರು ಎರಡು ದಶಕಗಳಿಂದ ಲಕ್ಷುರಿ ಎಸ್ಎವಿ ಸೆಗ್ಮೆಂಟ್ನಲ್ಲಿ ಬಿಎಂಡಬ್ಲ್ಯು ‘X’ 3 ಅತ್ಯಂತ ಯಶಸ್ವಿಯಾಗಿದೆ ಏಕೆಂದರೆ ಇದು ಆನ್-ರೋಡ್ ಮತ್ತು ಆಫ್-ರೋಡ್ ಸಾಮರ್ಥ್ಯಗಳಲ್ಲಿ ಅತ್ಯುತ್ತಮ ಸಮತೋಲನ ಕಾಪಾಡುತ್ತದೆ" ಎಂದು ಹೇಳಿದ್ದಾರೆ.
ಇಂದು ಹೊಸ ‘SportX’ ವೇರಿಯೆಂಟ್ ತನ್ನ ಬಿಎಂಡಬ್ಲ್ಯು X3 ಶ್ರೇಣಿಯನ್ನು ಕಾರ್ಯತಂತ್ರೀಯವಾಗಿ ವಿಸ್ತರಿಸುತ್ತಿದೆ ಮತ್ತು ನಮ್ಮ ಗ್ರಾಹಕರಿಗೆ `ಪವರ್ ಆಫ್ ಚಾಯ್ಸ್’ ನೀಡುತ್ತಿದೆ. ಶಕ್ತಿಯುತ ಮತ್ತು ಸಾಹಸಮಯ ‘X’ ಯಂತ್ರವು ತಮ್ಮ ಮಿತಿಗಳನ್ನು ದಾಟಲು ಬಯಸುವ ಗ್ರಾಹಕರಿಗೆ ನೈಜ ಸಂಗಾತಿಯಾಗಿದೆ. ನ್ಯೂ BMW X3 xDrive30i SportX ಪ್ರತಿ ವರ್ಗದಲ್ಲೂ ಆವಿಷ್ಕಾರಗೊಳ್ಳುತ್ತಿರುವ ಮತ್ತು ಅತ್ಯುತ್ತಮ ವಾಹನಗಳನ್ನು ಉತ್ಪಾದಿಸುವ ಬದ್ಧತೆಗೆ ಮತ್ತೊಂದು ಪುರಾವೆಯಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಮಾರುಕಟ್ಟೆಯಲ್ಲಿ BMW X3 xDrive30i SportX ನ ಬೆಲೆಯನ್ನು 56.5 ಲಕ್ಷಗಳಿಂದ ನಿಗದಿಪಡಿಸಲಾಗಿದೆ.
BMW ಪ್ರಾರಂಭಿಕ ಆನ್ಲೈನ್ ಬುಕಿಂಗ್ಗಳಿಗೆ ಸರ್ವೀಸ್ ಮತ್ತು ಅಕ್ಸೆಸರೀಸ್ ಪ್ಯಾಕೇಜ್ ಗಳು ಲಭ್ಯವಿದೆ.