ಟಾಟಾ ಮೋಟಾರ್ಸ್ ನ ಹೊಸ ಎಸ್‌ಯುವಿ ಸಫಾರಿ ಬಿಡುಗಡೆ

ಭಾರತದ ಮುಂಚೂಣಿ ಆಟೋಮೋಟಿವ್ ಸಂಸ್ಥೆ ಟಾಟಾ ಮೋಟರ್ಸ್ ಫೆ.22 ರಂದು ಪ್ರೀಮಿಯಮ್ ಎಸ್‌ಯುವಿ-ಹೊಚ್ಚ ಹೊಸ ಸಫಾರಿಯನ್ನು ಬಿಡುಗಡೆ ಮಾಡಿದೆ.

Published: 22nd February 2021 07:28 PM  |   Last Updated: 22nd February 2021 07:28 PM   |  A+A-


Tata Motors launches the all-new Safari

ಟಾಟಾ ಮೋಟಾರ್ಸ್ ನ ಹೊಸ ಎಸ್‌ಯುವಿ ಸಫಾರಿ ಬಿಡುಗಡೆ

Posted By : Srinivas Rao BV
Source : Online Desk

ಮುಂಬೈ:  ಭಾರತದ ಮುಂಚೂಣಿ ಆಟೋಮೋಟಿವ್ ಸಂಸ್ಥೆ ಟಾಟಾ ಮೋಟರ್ಸ್ ಫೆ.22 ರಂದು ಪ್ರೀಮಿಯಮ್ ಎಸ್‌ಯುವಿ-ಹೊಚ್ಚ ಹೊಸ ಸಫಾರಿಯನ್ನು ಬಿಡುಗಡೆ ಮಾಡಿದೆ. 

ಸಫಾರಿಯ ವಿನ್ಯಾಸ, ಸರಿಸಾಟಿಯಿಲ್ಲದ ವೈವಿಧ್ಯತೆ, ಐಶಾರಾಮ, ಆರಾಮದಾಯಕವಾದ ಒಳಾಂಗಣಗಳು, ಮತ್ತು ಶಕ್ತಿಶಾಲಿ ಕಾರ್ಯಕ್ಷಮತೆ ನವಯುಗದ ಎಸ್‌ಯುವಿ ಗ್ರಾಹಕರ ಆಧುನಿಕ ಬಹುಮುಖ ಜೀವನಶೈಲಿಯೆಡೆಗಿನ ಆಶಯಗಳನ್ನು ಪೂರೈಸುವಂತಿದೆ. 6/7 ಸೀಟರ್ ಆವೃತ್ತಿಯ ಹೊಸ ಸಫಾರಿ,  14.69 ಲಕ್ಷಗಳಲ್ಲಿ (ex-showroom Delhi) ಲಭ್ಯವಿದೆ. 

ಇದರ ಜೊತೆಗೆ, ಟಾಟಾ ಮೋಟರ್ಸ್, ಸಫಾರಿಯ ‘ಅಡ್ವೆಂಚರ್ ಪರ್ಸೊನ’ ಆವೃತ್ತಿಯನ್ನೂ ಅನಾವರಣಗೊಳಿಸಿದ್ದು ಟ್ರಾಪಿಕಲ್ ಮಿಸ್ಟ್ ಬಣ್ಣದಲ್ಲಿ ಲಭ್ಯವಿರಲಿದೆ.

ಹೊಚ್ಚ ಹೊಸ ಸಫಾರಿಯ ಬಗ್ಗೆ ಟಾಟಾ ಮೋಟರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗ್ವೆಂಟರ್ ಬ್ಯುಟ್ಶೆಕ್, “ನಮ್ಮ ಹೊಸ ಉತ್ಪನ್ನವಾಗಿ ಸಫಾರಿ, ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಹೊಸ ಸಫಾರಿ, ಶೀಘ್ರವಾಗಿ ಬೆಳೆಯುತ್ತಿರುವ ಮಾರುಕಟ್ಟೆ ವರ್ಗಗಳಲ್ಲಿ ಅಸ್ತಿತ್ವವನ್ನು ವರ್ಧಿಸಲಿದೆ. ಮತ್ತೊಮ್ಮೆ ಸಫಾರಿಯು ಭಾರತೀಯ ರಸ್ತೆಗಳನ್ನು ಆಳುವಂತೆ ನಾವು ಮಾಡುತ್ತೆವೆ.” ಎಂದರು.

ಟಾಟಾ ಮೋಟರ್ಸ್ನ ಪ್ಯಾಸೆಂಜರ್ ವಾಹನಗಳ ವ್ಯಾಪಾರ ಘಟಕದ ಅಧ್ಯಕ್ಷ ಶೈಲೇಶ್ ಚಂದ್ರ ಮಾತನಾಡಿದ್ದು “ಸಫಾರಿಯು ಭಾರತಕ್ಕೆ ಎಸ್‌ಯುವಿ ಜೀವನಶೈಲಿಯನ್ನು ಪರಿಚಯಿಸಿತ್ತು. ಈಗ ತನ್ನ ಹೊಸ ಆವೃತ್ತಿಯಲ್ಲಿ ಪರಿಚಯವಾಗಿರುವ ಸಫಾರಿಯು ಇಂದಿನ ಎಸ್‌ಯುವಿ ಗ್ರಾಹಕರ ಬಹುಮುಖ ಜೀವನಶೈಲಿಗಳಿಗೆ ಅನುಗುಣವಾಗಿದೆ. ತನ್ನ ಐಶಾರಾಮೀ ಒಳಾಂಗಣಗಳು, ಅತ್ಯಾಧುನಿಕ ಸಂಪರ್ಕಶೀಲತೆ, ಮತ್ತು ಪ್ರೀಮಿಯಮ್ ಅಂಶಗಳಿಂದಾಗಿ ಸಫಾರಿಯು ಆಕರ್ಷಣೀಯವಾಗಿದೆ. ಅಡ್ವೆಂಚರ್ ಪರ್ಸೊನದ ಪರಿಚಯದೊಂದಿಗೆ, ಗ್ರಾಹಕರು ತಮಗೆ  ಅತ್ಯಂತ ಪೂರಕವಾಗಿರುವ ಸಫಾರಿಯನ್ನು ಆರಿಸಿಕೊಳ್ಳಲು ಇನ್ನೂ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ.” ಎಂದರು. 
 
ಸಫಾರಿಯು ಅತ್ಯಂತ ವೈವಿಧ್ಯಮಯವಾಗಿದ್ದು, ಆರಾಮದಾಯಕ ಡ್ರೈವ್ ನ ಭರವಸೆಯನ್ನು ನೀಡುತ್ತದೆ. ಶಕ್ತಿಶಾಲಿಯಾದ 2.೦ ಲೀ ಟರ್ಬೋಚಾರ್ಜ್ ಆದ ಕೈರೋಟೆಕ್ ಇಂಜಿನ್ ಮತ್ತು 2741 ವೀಲ್‌ಬೇಸ್‌ನೊಂದಿಗೆ ಸಫಾರಿಯು ವಿಶಿಷ್ಟವಾದ ಬಿಳುಪಿನ ಒಳಾಂಗಣಗಳು, ಆ್ಯಶ್‌ವುಡ್ ಫಿನಿಶ್ ಇರುವ ಡ್ಯಾಶ್‌ಬೋರ್ಡ್, ಭವ್ಯವಾದ ದೃಶ್ಯಾಂತ ಸನ್‌ರೂಫ್, 6 ರಿಂದ 7 ಸೀಟ್‌ವರೆಗಿನ ಆಯ್ಕೆಗಳು, 8.8 ಅಂಗುಲ ಫ್ಲೋಟಿಂಗ್ ಐಲೆಂಡ್ ಇನ್ಫೋಟೇನ್ಮೆಂಟ್ ಸಿಸ್ಟಮ್‌ಅನ್ನು ಹೊಂದಿದೆ.

ಎಲ್ಲಾ ಟಾಟಾ ಮೋಟರ್ಸ್ ಉತ್ಪನ್ನಗಳಲ್ಲಿ ಇರುವಂತೆ ಸಫಾರಿಯು ಕೂಡ ಆಲ್ ಡಿಸ್ಕ್ ಬ್ರೇಕ್‌ಗಳು,  ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 14 ರೀತಿಯ ಕಾರ್ಯಾಚರಣೆಗಳಿರುವ ಆಧುನಿಕ ಇಎಸ್‌ಪಿ ಮುಂತಾದ ಹಲವು ರೀತಿಯ ಸುರಕ್ಷತಾ ಅಂಶಗಳನ್ನು ಹೊಂದಿದೆ. ವರ್ಧಿತ ಚಾಲನಾ ಆರಾಮ ನೀಡುವುದಕ್ಕಾಗಿ ಬಾಸ್ ಮೋಡ್ ಇರುವ ಸಫಾರಿ, ಎಕ್ಸಿಕ್ಯೂಟಿವ್ ಗ್ರಾಹಕರಿಗೆ ಲಿವಿಂಗ್ ರೂಮ್ ಶೈಲಿಯ ಚಾಲನಾ ಅನುಭವವನ್ನು ನೀಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ವಾಹನವು, ವಿಶಿಷ್ಟ ರಾಯಲ್ ಬ್ಲೂ ಬಣ್ಣದ ಜೊತೆಗೆ ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್ ಮತ್ತು ಆರ್ಕಸ್ ವೈಟ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. 

Stay up to date on all the latest ಪ್ರವಾಸ-ವಾಹನ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp