BMW R18 ಕ್ಲಾಸಿಕ್ ಭಾರತದಲ್ಲಿ ಬಿಡುಗಡೆ: ವಿಶೇಷತೆಗಳು ಹೀಗಿವೆ...

BMW ಮೋಟರಾಡ್ ಇಂಡಿಯಾ, ಹೊಸ ಬೈಕ್ BMW R18 ಕ್ಲಾಸಿಕ್ ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. 

Published: 24th February 2021 04:57 PM  |   Last Updated: 24th February 2021 05:07 PM   |  A+A-


New BMW R18 Classic released in India: Here Is All you need to know

BMW R18 ಕ್ಲಾಸಿಕ್ ಭಾರತದಲ್ಲಿ ಬಿಡುಗಡೆ: ವಿಶೇಷತೆಗಳು ಹೀಗಿವೆ...

Posted By : Srinivas Rao BV
Source : Online Desk

BMW ಮೋಟರಾಡ್ ಇಂಡಿಯಾ, ಹೊಸ ಬೈಕ್ BMW R18 ಕ್ಲಾಸಿಕ್ ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. 

ಕಳೆದ ವರ್ಷ BMW R18 ಪ್ರಥಮ ಪ್ರದರ್ಶನದ ನಂತರ, BMWಮೋಟರಾಡ್ ಇಂಡಿಯಾ ಈಗ ತನ್ನ ಕ್ರೂಸರ್ ಸೆಗ್ಮೆಂಟ್‍ನಲ್ಲಿ R 18 ಕ್ಲಾಸಿಕ್ ನ್ನು ಪರಿಚಯಿಸಿದೆ. ಹೊಸ BMW R18 ಕ್ಲಾಸಿಕ್ ಮಹತ್ತರ ಟೂರಿಂಗ್ ಕ್ರೂಸರ್ ಮಾಡೆಲ್‍ಗಳ ಪ್ರಾರಂಭಗಳನ್ನು ಪ್ರತಿನಿಧಿಸುವ ಟೂರಿಂಗ್ ಬೈಕ್ ಆಗಿದೆ.

BMW ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪಾವಾಹ್ ಈ ಬೈಕ್ ನ ಕುರಿತು ಮಾತನಾಡಿದ್ದು “BMW ಮೋಟರಾಡ್ ಕ್ರೂಸರ್ ಸೆಗ್ಮೆಂಟ್‍ಗೆ BMW R18 ಮೂಲಕ ಆಸಕ್ತಿದಾಯಕ ಪ್ರವೇಶ ಪಡೆದಿದೆ. ಭಾರತದಲ್ಲಿ ಮೊದಲ ಕ್ರೂಸರ್‍ನ ಯಶಸ್ಸು ಮತ್ತು ಜನಪ್ರಿಯತೆಯನ್ನು ಗಮನಿಸಿ ಈ ಬೈಕ್ ನ್ನು ತಯಾರಿಸಲಾಗಿದ್ದು, ಈಗ BMW R18 ಕ್ಲಾಸಿಕ್ ಅನ್ನು ಮತ್ತಷ್ಟು ಆಕರ್ಷಣೀಯ ಬದಲಾವಣೆಗಳೊಂದಿಗೆ ಪ್ರಸ್ತುತಪಡಿಸುತ್ತಿದ್ದೇವೆ. ಕಣ್ಸೆಳೆಯುವ BMW R18 ಕ್ಲಾಸಿಕ್‍ನ ಸ್ಟೈಲಿಶ್ ರೈಡಿಂಗ್ ಅನುಭವ ನೀಡುತ್ತದೆ ಹಾಗೂ  ಮರೆಯಲಾಗದ ಕ್ರೂಸಿಂಗ್ ಕ್ಷಣಗಳನ್ನು ಜೀವಿಸುವ ದ್ವಿಚಕ್ರ ವಾಹನ ಪ್ರಿಯರಿಗೆ ಅಪಾರ ಮೆಚ್ಚುಗೆಯಾಗುತ್ತದೆ” ಎಂದಿದ್ದಾರೆ.

100%

R 18 ಕ್ಲಾಸಿಕ್ ದೊಡ್ಡ ವಿಂಡ್‍ಸ್ಕ್ರೀನ್, ಪ್ಯಾಸೆಂಜರ್ ಸೀಟ್, ಸ್ಯಾಡಲ್‍ಬ್ಯಾಗ್ಸ್, ಐಇಆ ಹೆಚ್ಚುವರಿ ಹೆಡ್‍ಲೈಟ್ಸ್ ಮತ್ತು 16- ಇಂಚ್ ಫ್ರಂಟ್ ವ್ಹೀಲ್ ಹೊಂದಿದೆ. BMWನಲ್ಲಿ ಹಿಂದೆಂದೂ ನಿರ್ಮಾಣವಾಗದ ಅತ್ಯಂತ ದೊಡ್ಡ ಡಿಸ್ಪ್ಲೇಸ್‍ಮೆಂಟ್ ಬಾಕ್ಸ್ ಎಂಜಿನ್ ಹೊಂದಿರುವುದು ಈ  ಬೈಕ್ ನ ವೈಶಿಷ್ಟ್ಯವಾಗಿದ್ದು, ಬೈಕ್ ನ ಬೆಲೆ (ಎಕ್ಸ್-ಶೋರೂಂ )24,00,000 ರೂಪಾಯಿಗಳಾಗಿವೆ. 

R18 ಉನ್ನತ ಎರ್ಗೊನಾಮಿಕ್ಸ್‍ನಿಂದ ಉನ್ನತ ಗುಣಮಟ್ಟದ ದೂರ ಪ್ರಯಾಣದ ಅನುಕೂಲ ಮತ್ತು ದೋಷರಹಿತ ಕ್ರೂಸರ್ ಭಾವನೆ ನೀಡುತ್ತದೆ. ಹೊಸದಾಗಿ ಅಭಿವೃದ್ಧಿಪಡಿಸಲಾದ ಏರ್/ಆಯಿಲ್ ಕೂಲ್ಡ್ ಟು-ಸಿಲಿಂಡರ್ ಬಾಕ್ಸರ್ ಎಂಜಿನ್ BMW R18 ಕ್ಲಾಸಿಕ್‍ನ ಕೇಂದ್ರಬಿಂದುವಾಗಿದೆ.  ಬೃಹತ್ 1,802 ಸಿಸಿ ಎಂಜಿನ್ 107.1 mm ಬೋರ್ ಮತ್ತು 100 mm ಸ್ಟ್ರೋಕ್‍ ನೊಂದಿಗೆ ಬೈಕ್ ನ್ನು ತಯಾರಿಸಲಾಗಿದೆ.  

100%

ಸಿಂಗಲ್-ಡಿಸ್ಕ್ ಡ್ರೈ ಕ್ಲಚರ್ ಟಾರ್ಕ್ ಅನ್ನು ಟ್ರಾನ್ಸ್‍ಮಿಷನ್‍ಗೆ ವರ್ಗಾಯಿಸುತ್ತದೆ. ಮೊಟ್ಟಮೊದಲ ಬಾರಿಗೆ ಇದನ್ನು ಸೆಲ್ಫ್-ರೀಇನ್‍ಫೋರ್ಸಿಂಗ್ ಆ್ಯಂಟಿ-ಹಾಪಿಂಗ್ ಕ್ಲಚ್ ಆಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಅನಗತ್ಯವಾಗಿ ಹಿಂಬದಿಯ ಚಕ್ರ ಪುಟಿಯುವುದನ್ನು ತಡೆಯುತ್ತದೆ. ಡ್ಯುಯಲ್-ಸೆಕ್ಷನ್ ಅಲ್ಯುಮಿನಿಯಂ ಹೌಸಿಂಗ್‍ನಲ್ಲಿ ಸತತವಾದ ಮೆಷ್ 6-ಸ್ಪೀಡ್ ಟ್ರಾನ್ಸ್‍ಮಿಷನ್ ಮತ್ತು ಹೆಲಿಕಲ್ ಗೇರ್ ಪೇರ್ಸ್‍ನೊಂದಿಗೆ 4-ಶಾಫ್ಟ್ ಟ್ರಾನ್ಸ್‍ಮಿಷನ್ ಆಗಿ ವಿನ್ಯಾಸಗೊಳಿಸಲಾಗಿದೆ. ಡಬಲ್ ಲೂಪ್ ಸ್ಟೀಲ್ ಟ್ಯೂಬ್‍ಫ್ರೇಮ್ ಸಸ್ಪೆನ್ಷನ್‍ ಹೊಂದಿರುವುದು BMW R18 ಕ್ಲಾಸಿಕ್ ನ ಮತ್ತೊಂದು ವಿಶೇಷವಾಗಿದೆ.  

BMW R18 ನಲ್ಲಿ ಚಾಲಕರ ಆದ್ಯತೆಗಳಿಗೆ ಹೊಂದುವಂತೆ ರೈನ್, ರೋಲ್ ಮತ್ತು ರಾಕ್ ಎಂಬ 3 ರೈಡಿಂಗ್ ಮೋಡ್ ಗಳನ್ನು ಕಲ್ಪಿಸಲಾಗಿದೆ. `ರೈನ್ ಮೋಡ್’ನಲ್ಲಿ ಹೆಚ್ಚು ಜಾರುವ ರಸ್ತೆಗಳ ಮೇಲೆ ಹೆಚ್ಚಿನ ಸುರಕ್ಷತೆ ನೀಡುತ್ತದೆ ಹಾಗೂ ಹಿಲ್ ಸ್ಟಾರ್ಟ್ ಕಂಟ್ರೋಲ್ ಬೆಟ್ಟದ ಮೇಲೆ ಚಾಲಿಸುವುದನ್ನು ಸುಲಭಗೊಳಿಸುತ್ತದೆ. 

Stay up to date on all the latest ಪ್ರವಾಸ-ವಾಹನ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp