ದೇಶದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ಎಂಜಿ ಹೆಕ್ಟರ್ ವಾಹನ ತಯಾರಿಕೆ

ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ 50,000 ಎಂಜಿ ಹೆಕ್ಟೇರ್‌ ವಾಹನಗಳ ಮೈಲಿಗಲ್ಲು ಸಾಧಿಸಿದೆ. ಇದರ ಜೊತೆಗೆ, 50 ಸಾವಿರದ ವಾಹನವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯೇ ತಯಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

Published: 28th February 2021 05:28 PM  |   Last Updated: 28th February 2021 05:28 PM   |  A+A-


MG Hector

ಎಂಜಿ ಹೆಕ್ಟರ್ ವಾಹನ

Posted By : Srinivas Rao BV
Source : UNI

ಬೆಂಗಳೂರು: ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ 50,000 ಎಂಜಿ ಹೆಕ್ಟೇರ್‌ ವಾಹನಗಳ ಮೈಲಿಗಲ್ಲು ಸಾಧಿಸಿದೆ. ಇದರ ಜೊತೆಗೆ, 50 ಸಾವಿರದ ವಾಹನವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯೇ ತಯಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇದು ದೇಶದಲ್ಲೇ ಇದೊಂದು ಪ್ರಥಮ ಪ್ರಯೋಗವಾಗಿದೆ. ಈ ವಾಹನದ ಆರಂಭದಿಂದ ಅಂತ್ಯದವರೆಗಿನ ಎಲ್ಲಾನಿರ್ಮಾಣ ಕಾರ್ಯಗಳಲ್ಲಿ ಶೀಟ್ ಮೆಟಲ್‌ನ ಪ್ಯಾನಲ್-ಪ್ರೆಸ್ಸಿಂಗ್ ಮತ್ತು ಪೇಂಟಿಂಗ್, ವೆಲ್ಡಿಂಗ್ ಜೊತೆಗೆ ಉತ್ಪಾದನೆಯ ನಂತರದ ಪರೀಕ್ಷಾರ್ಥ ಚಾಲನೆ ನಡೆಸುವವರೆಗೆ ಮಹಿಳೆಯರೇ ಕಾರ್ಯನಿರ್ವಹಿಸಿದ್ದಾರೆ. 

ಎಂಜಿ ಮೋಟಾರ್ ಇಂಡಿಯಾ ಗುಜರಾತ್‌ನ ಹಲೋಲ್ (ಪಂಚಮಹಲ್ ಜಿಲ್ಲೆ) ನಲ್ಲಿ ತನ್ನ ಅತ್ಯಾಧುನಿಕ ಉತ್ಪಾದನಾ ಸೌಲಭ್ಯ ಹೊಂದಿದೆ. ಬ್ರಿಟನ್ ಮೂಲದ ಈ ಸಂಸ್ಥೆ ವಾಹನ ಉತ್ಪಾದನಾ ಉದ್ಯಮದಲ್ಲಿ ಶೇ. 33ರಷ್ಟು ಪಾಲನ್ನು ಹೊಂದಿದೆ. ಇದರಲ್ಲಿ ಮಹಿಳಾ ವೃತ್ತಿಪರರು ಎಲ್ಲಾ ವ್ಯವಹಾರ ಕಾರ್ಯಗಳಲ್ಲಿ ತಮ್ಮ ಪುರುಷ ಸಹವರ್ತಿಗಳೊಂದಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಾರೆ.

“ಎಂಜಿ ವೈವಿಧ್ಯತೆ, ಸಮುದಾಯ, ನಾವೀನ್ಯತೆ ಮತ್ತು ಅನುಭವಗಳನ್ನು ಹೊಂದಿರುವ ಪ್ರಗತಿಪರ ಬ್ರಾಂಡ್ ಆಗಿದೆ. ಇದು ನಮ್ಮ ದೃಷ್ಟಿಕೋನವನ್ನು ಬ್ರ್ಯಾಂಡ್ ಆಗಿ ವಿಸ್ತರಿಸಿದೆ. ನಮ್ಮ 50,000 ನೇ ಎಂಜಿ ಹೆಕ್ಟರ್‌ನ ವಾಹನವನ್ನು ಎಲ್ಲ ಮಹಿಳಾ ಸಿಬ್ಬಂದಿಗಳು ತಯಾರಿಸಿದ್ದಾರೆ. ಅವರ ಕೊಡುಗೆ ಮತ್ತು ಕಠಿಣ ಪರಿಶ್ರಮಕ್ಕೆ ಸಂಸ್ಥೆ ಗೌರವ ನೀಡುತ್ತದೆ.

ಆಟೋಮೊಬೈಲ್ ಉತ್ಪಾದನೆಯಂತಹ ಹಿಂದಿನ ಪುರುಷ ಪ್ರಾಬಲ್ಯದ ಉದ್ಯಮದಲ್ಲಿ ಸಹ ಮಹಿಳೆಯರು ಹಿಂದುಳಿದಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಭಾರತ ಮತ್ತು ವಿದೇಶಗಳಲ್ಲಿ ವಾಹನ ಉದ್ಯಮಕ್ಕೆ ಸೇರಲು ಇದು ಹೆಚ್ಚಿನ ಮಹಿಳೆಯರಿಗೆ ಪ್ರೇರಣೆ ನೀಡುತ್ತದೆ ಎಂದು ನಾವು ನಂಬುತ್ತೇವೆ” ಎಂದು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಅಭಿಪ್ರಾಯಪಟ್ಟಿದ್ದಾರೆ.

Stay up to date on all the latest ಪ್ರವಾಸ-ವಾಹನ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp