ಆಡಿ ಎ4 ಸೆಡಾನ್ ಬಿಡುಗಡೆ: ಶೀಘ್ರದಲ್ಲಿ ವಿದ್ಯುತ್ ಚಾಲಿತ ವಾಹನಗಳು ಭಾರತ ಮಾರುಕಟ್ಟೆಗೆ ಲಗ್ಗೆ
ಜರ್ಮನಿಯ ಲಕ್ಸುರಿ ಕಾರು ಉತ್ಪಾದನೆಯ ಆಡಿ ಕಂಪನಿ ಮಂಗಳವಾರ ಭಾರತದಲ್ಲಿ ತನ್ನ ಕ್ರೀಡಾ ಕಾರು ಆಡಿ ಎ4 ಸೆಡನ್ ಅನ್ನು ಬಿಡುಗಡೆಗೊಳಿಸಿದೆ.
Published: 05th January 2021 01:46 PM | Last Updated: 05th January 2021 01:55 PM | A+A A-

ನೂತನ ಎ4 ಸೆಡಾನ್ನೊಂದಿಗೆ ಆಡಿ ಇಂಡಿಯಾ ಸಿಇಒ
ಚೆನ್ನೈ: ಜರ್ಮನಿಯ ಲಕ್ಸುರಿ ಕಾರು ಉತ್ಪಾದನೆಯ ಆಡಿ ಕಂಪನಿ ಮಂಗಳವಾರ ಭಾರತದಲ್ಲಿ ತನ್ನ ಕ್ರೀಡಾ ಕಾರು ಆಡಿ ಎ4 ಸೆಡನ್ ಅನ್ನು ಬಿಡುಗಡೆಗೊಳಿಸಿದೆ.
ಐದನೇ ಪೀಳಿಗೆಯ ಹೊಸ ಆಡಿ, ವಿನೂತನ ವಿನ್ಯಾಸ ಹಾಗೂ ಶಕ್ತಿಶಾಲಿ 2.0 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು, ಇದು 190 ಎಚ್ಪಿ ಶಕ್ತಿ ಮತ್ತು 320 ಎನ್ಎಂ ಟಾರ್ಕ್ ಅನ್ನು ಒಳಗೊಂಡಿದೆ.
ಭಾರತದಲ್ಲಿ ಹೊಸ ಕಾರಿನ ಎಕ್ಸ್ ಶೋರೂಂ ಬೆಲೆ 42,34,000 ರೂ. ಗಳಿಂದ ಆರಂಭವಾಗುತ್ತದೆ.
ನೂತನ ಕಾರು ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಆಡಿ ಇಂಡಿಯಾದ ಮುಖ್ಯಸ್ಥ ಬಲ್ವೀರ್ ಸಿಂಗ್ ಧಿಲ್ಲಾನ್, , "ನಮ್ಮ ಬೆಸ್ಟ್ ಸೆಲ್ಲರ್ಗಳಲ್ಲಿ ಒಂದಾದ ಇತ್ತೀಚಿನ ಆವೃತ್ತಿ ಹೊಸ ಆಡಿ ಎ4 ನೊಂದಿಗೆ ನೂತನ ವರ್ಷವನ್ನು ಪ್ರಾರಂಭಿಸಲು ನಾವು ತುಂಬಾ ಸಂತೋಷಪಡುತ್ತೇವೆ" ಎಂದರು.
ಐದನೇ ಪೀಳಿಗೆಯ ಕಾರುಗಳಲ್ಲಿ , ಹೊಸ ಆಡಿ ಎ4 ಒಂದು ಪರಿಪೂರ್ಣ ವಾಹನವಾಗಿದೆ. ವರ್ಗ, ಸೊಬಗು ಮತ್ತು ಸ್ಪೋರ್ಟಿವ್ ಆಗಿರುವ ಕಾರು ಇತ್ತೀಚಿನ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳೊಂದಿಗೆ ಬಂದಿದೆ. '' ಮಧ್ಯಮ ಗಾತ್ರದ ಐಷಾರಾಮಿ ಸೆಡಾನ್ ವಿಭಾಗವು ಸ್ಪರ್ಧಾತ್ಮಕವಾಗಿದೆ ಮತ್ತು ನಾವು ಹೊಸ ಆಡಿ ಎ4 ಗೇಮ್ ಚೇಂಜರ್ ಆಗಿರುತ್ತದೆ ಎಂಬ ವಿಶ್ವಾಸ ಹೊಂದಿದ್ದೇವೆ." ಧಿಲ್ಲಾನ್ ಹೇಳಿದರು.
ಭವಿಷ್ಯದಲ್ಲಿ ನಾವು ಎಲೆಕ್ಟ್ರಾನಿಕ್ ಕಾರುಗಳನ್ನು ಭಾರತದ ಮಾರುಕಟ್ಟೆಗೆ ತರಲು ಸಜ್ಜಾಗಿದ್ದೇವೆ. ಆಡಿ ಇ-ಟ್ರಾನ್ ಲಾಂಚ್ ಶೀಘ್ರವಾಗಿ ಆಗಲಿದೆ. ಎಂದು ಅವರು ಹೇಳಿದರು.