ಕಲಬುರಗಿ ಮತ್ತು ತಿರುಪತಿ ನಡುವೆ ವಿಮಾನ ಸೇವೆ ಆರಂಭಿಸಲಿರುವ ಸ್ಟಾರ್ ಏರ್
ಕಲಬುರಗಿ ಮತ್ತು ಯಾತ್ರಾ ಸ್ಥಳ ತಿರುಪತಿಯ ನಡುವೆ ವಿಮಾನ ಸೇವೆ ಆರಂಭಿಸಲು ಸ್ಟಾರ್ ಏರ್ ಮುಂದಾಗಿದೆ ಎಂದು ಸಂಜಯ್ ಗೋದಾವತ್ ಸಮೂಹದ ಮಾರುಕಟ್ಟೆ ಮತ್ತು ಸಂವಹನದ ಪ್ರಧಾನ ವ್ಯವಸ್ಥಾಪಕ ರಾಜ್ ಹೆಸಿ ಭಾನುವಾರ ಹೇಳಿದ್ದಾರೆ.
Published: 10th January 2021 11:02 PM | Last Updated: 10th January 2021 11:02 PM | A+A A-

ಕಲಬುರಗಿ: ಕಲಬುರಗಿ ಮತ್ತು ಯಾತ್ರಾ ಸ್ಥಳ ತಿರುಪತಿಯ ನಡುವೆ ವಿಮಾನ ಸೇವೆ ಆರಂಭಿಸಲು ಸ್ಟಾರ್ ಏರ್ ಮುಂದಾಗಿದೆ ಎಂದು ಸಂಜಯ್ ಗೋದಾವತ್ ಸಮೂಹದ ಮಾರುಕಟ್ಟೆ ಮತ್ತು ಸಂವಹನದ ಪ್ರಧಾನ ವ್ಯವಸ್ಥಾಪಕ ರಾಜ್ ಹೆಸಿ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಿದ್ಧ ಆರ್ಸಿಎಸ್-ಉಡಾನ್ ಯೋಜನೆಯಡಿ ತಿರುಪತಿ ಮತ್ತು ಕಲಬುರಗಿ ನಡುವೆ ತಡೆರಹಿತ ವಿಮಾನಸೇವೆ ಆರಂಭಿಸುವುದಾಗಿ ತಿಳಿಸಿದರು.
ಮೂಲ ದರ 999 ರೂ.ಗಳಿರಲಿದ್ದು, ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಕಲಬುರಗಿ ಮತ್ತು ಯಾತ್ರಾ ಕೇಂದ್ರಗಳ ನಡುವೆ ವಿಮಾನಗಳು ಹಾರಾಟ ನಡೆಸಲಿವೆ ಎಂದರು.
ರಾಜ್ಯದ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ಬಾಗಲಕೋಟೆ, ರಾಯಚೂರು ಜಿಲ್ಲೆಗಳ ಜನರು ಈ ವಿಮಾನ ಸೇವೆಯನ್ನು ಬಳಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಮತ್ತು ಯಾತ್ರಿಕರು ಕಲಬುರಗಿಯಿಂದ ತಿರುಪತಿಗೆ ತೆರಳುತ್ತಾರೆ. ಅವರು ಪ್ರಯಾಣ ಸೌಕರ್ಯವಿಲ್ಲದ ಕಾರಣತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈಗ, ಕಲಬುರಗಿ ತಿರುಪತಿ ನಡುವೆ ಜನರು ಕೇವಲ ಒಂದು ಗಂಟೆಯಲ್ಲಿ ತಲುಪಬಹುದು. ರಸ್ತೆ, ರೈಲಿನ ಮೂಲಕ 620 ಕಿ.ಮೀ ದೂರವನ್ನು ತಲುಪಲು 11 ಗಂಟೆಗಳು ಬೇಕಾಗುತ್ತದೆ.
ಸ್ಟಾರ್ ಏರ್ ಪ್ರಸ್ತುತ 11 ಭಾರತೀಯ ನಗರಗಳಿಗೆ ಸೇವೆಗಳನ್ನು ಒದಗಿಸುತ್ತದೆ, ಇದರಲ್ಲಿ ಅಹಮದಾಬಾದ್, ಅಜ್ಮೀರ್ (ಕಿಶನ್ ಘರ್), ಬೆಳಗಾವಿ, ಬೆಂಗಳೂರು, ದೆಹಲಿ (ಹಿಂಡನ್), ಹುಬ್ಬಳ್ಳಿ, ತಿರುಪತಿ, ಇಂದೋರ್, ಕಲಬುರಗಿ, ಮುಂಬೈ ಮತ್ತು ಸೂರತ್ ಸೇರಿವೆ. ಶೀಘ್ರದಲ್ಲೇ ಜೋಧಪುರಕ್ಕೆ ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ರಾಜ್ ಹೆಸಿ ಹೇಳಿದ್ದಾರೆ.