ಟಾಟಾ ಮೋಟರ್ಸ್ ನಿಂದ ಸೀಮಿತ ಆವೃತ್ತಿಯ ಟಿಯಾಗೊ ಬಿಡುಗಡೆ
ಭಾರತದ ಮುಂಚೂಣಿ ಆಟೋಮೋಟಿವ್ ಬ್ರ್ಯಾಂಡ್ ಟಾಟಾ ಸಂಸ್ಥೆಯ ಟಿಯಾಗೋ ರಿಫ್ರೆಶ್ ಶ್ರೇಣಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಟಾಟಾ ಮೋಟಾರ್ಸ್ ಸೀಮಿತ ಆವೃತ್ತಿಯ ಟಿಯಾಗೊವನ್ನು ಬಿಡುಗಡೆ ಮಾಡಲಾಗಿದೆ.
Published: 30th January 2021 04:51 PM | Last Updated: 30th January 2021 05:09 PM | A+A A-

ಸೀಮಿತ ಆವೃತ್ತಿಯ ಟಿಯಾಗೊ ಬಿಡುಗಡೆ
ಬೆಂಗಳೂರು: ಭಾರತದ ಮುಂಚೂಣಿ ಆಟೋಮೋಟಿವ್ ಬ್ರ್ಯಾಂಡ್ ಟಾಟಾ ಸಂಸ್ಥೆಯ ಟಿಯಾಗೋ ರಿಫ್ರೆಶ್ ಶ್ರೇಣಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಟಾಟಾ ಮೋಟಾರ್ಸ್ ಸೀಮಿತ ಆವೃತ್ತಿಯ ಟಿಯಾಗೊವನ್ನು ಬಿಡುಗಡೆ ಮಾಡಲಾಗಿದೆ.
ರೂ. 5.79 ಲಕ್ಷ (ದೆಹಲಿ ಶೋರೂಮ್ ಆಚೆ) ಬೆಲೆಯಲ್ಲಿ ಸೀಮಿತ ಆವೃತ್ತಿಯ ಟಾಟಾ ಟಿಯಾಗೊದ ಪರಿಚಯವನ್ನು ಘೋಷಿಸಿದೆ.
ಟಿಯಾಗೊ ರಿಫ್ರೆಶ್ನ ಮೊದಲನೇ ವಾರ್ಷಿಕೋತ್ಸವ ಮತ್ತು ಹ್ಯಾಚ್ಬ್ಯಾಕ್ ಮಾರುಕಟ್ಟೆಯಲ್ಲಿ ಅದರ ಯಶಸ್ಸಿನ ಸ್ಮರಣೆಯಾಗಿ ಹೊರಬರುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
XT variant ನಲ್ಲಿ ನಿರ್ಮಾಣಗೊಂಡಿರುವ ಟಿಯಾಗೊ ಸೀಮಿತ ಆವೃತ್ತಿಯು ಮ್ಯಾನ್ಯುವಲ್ ಟ್ರಾನ್ಸ್ಮಿಶನ್ನಲ್ಲಿ ಲಭ್ಯವಿದ್ದು, ಮೂರು ಸಿಂಗಲ್ ಟೋನ್ ಬಣ್ಣಗಳಲ್ಲಿ, ಅಂದರೆ, ಫ್ಲೇಮ್ ರೆಡ್, ಪರ್ಲೆಸೆಂಟ್ ವೈಟ್, ಮತ್ತು ಡೇಟೋನ್ ಗ್ರೇ ಬಣ್ಣಗಳಲ್ಲಿ ಲಭ್ಯವಾಗಲಿದೆ.
ಈ ಆವೃತ್ತಿಯ ಮತ್ತಷ್ಟು ವಿಶೇಷತೆಗಳು ಇಂತಿವೆ.
ಹೊಸ 14-ಅಂಗುಲ ಗಾಢ ಕಪ್ಪು ಅಲಾಯ್ ವ್ಹೀಲ್ಗಳು
ಈ ಕೆಳಗಿನವುಗಳನ್ನು ಒಳಗೊಂಡ ಹಾರ್ಮನ್ 5-ಅಂಗುಲ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್:
- ನ್ಯಾವಿಮ್ಯಾಪ್ಸ್ ಮೂಲಕ 3ಡಿ ನ್ಯಾವಿಗೇಶನ್
- ಡಿಸ್ಪ್ಲೇಯೊಂದಿಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್
- ವಾಯ್ಸ್ ಕಮಾಂಡ್ ರೆಕಗ್ನಿಶನ್
- ಇಮೇಜ್ ಮತ್ತು ವೀಡಿಯೋ ಪ್ಲೇಬ್ಯಾಕ್
- ರೇರ್ ಪಾರ್ಸಲ್ ಶೆಲ್ಫ್
ಈ ಹೊಸ ವೈವಿಧ್ಯದ ಬಗ್ಗೆ ಮಾತನಾಡಿರುವ, ಟಾಟಾ ಮೋಟರ್ಸ್ನ ಪ್ಯಾಸೆಂಜರ್ ವಾಹನಗಳ ವ್ಯಾಪಾರ ಘಟಕದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವಾಸ್ತವ “2016ರಲ್ಲಿ ಪರಿಚಯಗೊಂಡಾಗಿನಿಂದಲೂ ಟಿಯಾಗೊ ತನ್ನ ವರ್ಗದಲ್ಲಿ ಅತ್ಯಂತ ಯಶಸ್ವಿಯಾಗಿದ್ದು ಎಲ್ಲರೂ ಅದನ್ನು ಮೆಚ್ಚಿಕೊಂಡಿದ್ದಾರೆ. ಇದನ್ನೇ ಅನುಸರಿಸಿ, ಈ ಉತ್ಪನ್ನದ ಬಿಎಸ್6 ಆವೃತ್ತಿಯನ್ನು 2020ರಲ್ಲಿ ಪರಿಚಯಿಸಲಾಗಿತ್ತು. ಪರಿಚಯದ ಸಮಯದಲ್ಲಿ ಜಿಎನ್ಸಿಎಪಿಯಿಂದ 4 ಸ್ಟಾರ್ ಸುರಕ್ಷತಾ ಶ್ರೇಯಾಂಕವನ್ನು ಕೂಡ ಪಡೆದ ಉತ್ಪನ್ನವು ತನ್ನ ವರ್ಗದಲ್ಲೇ ಅತ್ಯಂತ ಸುರಕ್ಷಿತವಾದದ್ದು ಎಂಬ ಹೆಮ್ಮೆ ಗಳಿಸಿತ್ತು. ರಸ್ತೆಯಲ್ಲಿ 3.25 ಲಕ್ಷಕ್ಕಿಂತ ಹೆಚ್ಚಿನ ಸಂತುಷ್ಟ ಗ್ರಾಹಕರೊಂದಿಗೆ ಟಿಯಾಗೊ, ಸಹಜವಾಗಿಯೇ ಅದ್ಭುತ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಸೀಮಿತ ಅವಧಿಯ ವೈವಿಧ್ಯದ ಪರಿಚಯದ ಮೂಲಕ ಮತ್ತು ‘ಎಂದೆಂದಿಗೂ ಹೊಸತು’ ಎಂಬ ನಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ, ನಾವು ಸದಾ ಹೆಚ್ಚಾಗುತ್ತಿರುವ ನಮ್ಮ ಗ್ರಾಹಕರ ಬೇಡಿಕೆಗಳನ್ನು ಪೂರೈಸುತ್ತಲೇ ಈ ಕ್ಷೇತ್ರದಲ್ಲಿ ಹೆಚ್ಚು ಕೌತುಕಗಳನ್ನು ಸೃಷ್ಟಿಮಾಡುವುದನ್ನು ಮುಂದುವರಿಸುತ್ತೇವೆ ಎಂಬ ವಿಶ್ವಾಸವಿದೆ” ಎಂದರು.