ಯಮಹಾ FZ 25 ಶ್ರೇಣಿಯ ಬೈಕ್ ಗಳ ಬೆಲೆಯಲ್ಲಿ 19,300 ರೂ. ಕಡಿತ

ದೇಶದ ಪ್ರಮುಖ ದ್ವಿಚಕ್ರ ವಾಹನ ಸಂಸ್ಥೆ ಯಮಹಾ ಮೋಟಾರ್ ಇಂಡಿಯಾ ತನ್ನ  FZS 25 ಹಾಗೂ  FZ 25  ಬೈಕ್‌ಗಳ ಎಕ್ಸ್‌ಶೋರೂಂ ಬೆಲೆಯನ್ನು ಕಡಿತಗೊಳಿಸಿದೆ.
ಯಮಹಾ  FZS 25 ಹಾಗೂ  FZ 25  ಬೈಕ್‌
ಯಮಹಾ FZS 25 ಹಾಗೂ FZ 25 ಬೈಕ್‌

ನವದೆಹಲಿ: ದೇಶದ ಪ್ರಮುಖ ದ್ವಿಚಕ್ರ ವಾಹನ ಸಂಸ್ಥೆ ಯಮಹಾ ಮೋಟಾರ್ ಇಂಡಿಯಾ ತನ್ನ  FZS 25 ಹಾಗೂ  FZ 25 ಬೈಕ್‌ಗಳ ಎಕ್ಸ್‌ಶೋರೂಂ ಬೆಲೆಯನ್ನು ಕಡಿತಗೊಳಿಸಿದೆ. ಎರಡು ಮಾದರಿಗಳ ಬೈಕ್ ಗಳ ಇನ್‌ಪುಟ್ ವೆಚ್ಚವನ್ನು ಕಡಿಮೆಗೊಳಿಸಿದ ಕಾರಣ ಇದು ಮಾರುಕಟ್ಟೆಗಳ ಬೆಲೆ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ.

FZS 25 ಮತ್ತು FZ 25 ಬೆಲೆಗಳನ್ನು ಕ್ರಮವಾಗಿ 19,300 ಮತ್ತು 18,800 ರೂ.ಗಳಷ್ಟು ಕಡಿತ ಮಾಡಲಾಗಿದೆ. (ಎಕ್ಸ್ ಶೋರೂಂ ದೆಹಲಿ). ಕಂಪನಿಯು ಈಗ FZS 25 ಮತ್ತು  FZ 25 ಅನ್ನು ಕ್ರಮವಾಗಿ 1,39,300 ರೂ. ಮತ್ತು 1,34,800 ರೂಗಳಿಗೆ (ಎಕ್ಸ್ ಶೋರೂಂ ದೆಹಲಿ) ಮಾರಾಟ ಮಾಡುತ್ತಲಿದೆ ಎಂದು ಯಮಹಾ ಮೋಟಾರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು ಇದೇ ಮಾದರಿಯ ಬೈಕ್ ಗಳ ಬೆಲೆ ಕ್ರಮವಾಗಿ 1,58,600 ಮತ್ತು 1,53,600 ರೂ. ಇತ್ತು.

"ಇತ್ತೀಚಿನ ದಿನಗಳಲ್ಲಿ, ಇನ್‌ಪುಟ್ ವೆಚ್ಚದಲ್ಲಿ ಹೆಚ್ಚಳ ಕಂಡುಬಂದಿತ್ತು, ಇದು ನಮ್ಮ ಉತ್ಪನ್ನಗಳ ಎಕ್ಸ್-ಶೋರೂಮ್ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿತ್ತು. ವಿಶೇಷವಾಗಿ FZ 25 ಸರಣಿಗಳಲ್ಲಿ ಇದು ಸಂಭವಿಸಿದೆ. ನಮ್ಮ ಟೀಂ ಅಂತಿಮವಾಗಿ  FZ 25 ಸರಣಿಗಾಗಿ ಈ ಇನ್‌ಪುಟ್ ವೆಚ್ಚವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಜವಾಬ್ದಾರಿಯುತ ಉತ್ಪಾದಕ ಸಂಸ್ಥೆಯಾಗಿರುವ ಕಾರಣ ನಮ್ಮ ಗ್ರಾಹಕರಿಗೆ ಲಾಭವನ್ನು ನೀಡಲು ನಾವು ಬಯಸುತ್ತೇವೆ "ಎಂದು ಜಪಾನಿನ ದ್ವಿಚಕ್ರ ವಾಹನ ಸಂಸ್ಥೆ ಹೇಳಿದೆ.

ಈ ಮೂಲಕ FZ 25 ಶ್ರೇಣಿಯನ್ನು ಹೆಚ್ಚು ಜನಪ್ರಿಯವಾಗುವಂತೆ ಮಾಡುವ ಮೂಲಕ ಸಂಭಾವ್ಯ ಗ್ರಾಹಕರನ್ನು ತಲುಪುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು ಅದು ಹೇಳಿದೆ. ಬೆಲೆ ಕಡಿತವನ್ನು ಲೆಕ್ಕಿಸದೆ, ಯಮಹಾ  FZ 25ಸರಣಿಯು ತನ್ನ ಗುಣಮಟ್ಟದ ವೈಶಿಷ್ಟ್ಯಗಳು ಮತ್ತು ವಿಶೇಷಗಳನ್ನು ಉಳಿಸಿಕೊಳ್ಳುವಿಕೆಯನ್ನು ಮುಂದುವರಿಸುತ್ತದೆ ಎಂದು ಕಂಪನಿ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com