ಪುರಾಣ ಪ್ರಸಿದ್ಧ ಆವನಿ ಕ್ಷೇತ್ರ; ಇಲ್ಲಿನ ನೋಡಲೇಬೇಕಾದ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ!

ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರವಾಸಿಗರು ಕೋಲಾರದ ಬಳಿಯ ಪುರಾಣ ಪ್ರಸಿದ್ಧ ಆವನಿ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಬಹುದು. ಇಲ್ಲಿ ರಾಮಲಿಂಗೇಶ್ವರ ದೇವಾಲಯ ಸೇರಿದಂತೆ  ನೀವು ನೋಡಲೇಬೇಕಾದ ಹಲವು ಸ್ಥಳಗಳಿವೆ.

Published: 12th March 2021 04:54 PM  |   Last Updated: 12th March 2021 05:01 PM   |  A+A-


Ramalingeshwara_temple11

ರಾಮಲಿಂಗೇಶ್ವರ ದೇವಾಲಯ

Posted By : Nagaraja AB
Source : The New Indian Express

ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರವಾಸಿಗರು ಕೋಲಾರದ ಬಳಿಯ ಪುರಾಣ ಪ್ರಸಿದ್ಧ ಆವನಿ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಬಹುದು. ಇಲ್ಲಿ ರಾಮಲಿಂಗೇಶ್ವರ ದೇವಾಲಯ ಸೇರಿದಂತೆ ನೀವು ನೋಡಲೇಬೇಕಾದ ಹಲವು ಸ್ಥಳಗಳಿವೆ.

ರಾಮಲಿಂಗೇಶ್ವರ ದೇವಾಲಯ ದ್ರಾವಿಡನ್ ವಾಸ್ತುಶಿಲ್ಪ ಶೈಲಿಗೆ ಅತ್ಯುತ್ತಮ ಉದಾಹರಣೆಯಾಗಿದೆ. 10ನೇ ಶತಮಾನದಲ್ಲಿ ನೊಳಂಬ ರಾಜವಂಶಸ್ಥರು ಆವನಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. 

ನೊಳಂಬರು ಶೈವರು, ಅವರು ನಿರ್ಮಿಸಿರುವ  ಮೂರು ಆಕರ್ಷಕ ದೇವಾಲಯ ಇನ್ನೂ ಇವೆ. ಈ ಮೂರು ದೇವಾಲಯಗಳು ಶಿವನಿಗೆ ಅರ್ಪಿತವಾಗಿವೆ ಮತ್ತು ಹಿಂದಿನ ಕಾಲದ ಸುಂದರ ಕಲಾಕೃತಿಗಳ ಶ್ರೀಮಂತಿಕೆ ಕಂಡುಬರುತ್ತದೆ.  ಆ ದೇವಾಲಯಗಳೆಂದರೆ ಅರಲಗುಪ್ಪೆಯ ಕಲ್ಲೇಶ್ವರ ದೇವಸ್ಥಾನ, ನಂದಿ ಗ್ರಾಮದ ಭೋಗ ನಂದೀಶ್ವರ ದೇವಸ್ಥಾನ ಮತ್ತು ಆವನಿಯ ರಾಮಲಿಂಗೇಶ್ವರ ದೇವಸ್ಥಾನಗಳಾಗಿವೆ.

ಆವನಿ ಕಾಂಪೌಂಡ್ ಒಳಗೆ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಎಂಬ ಹೆಸರಿನ ನಾಲ್ಕು ದೇವಾಲಯಗಳಿವೆ. ವಾಲಿ ಮತ್ತು ಸುಗ್ರೀವನಿಗೂ ಪ್ರತ್ಯೇಕವಾದ ದೇವಾಲಯಗಳಿವೆ. ಇಲ್ಲಿಯೇ ಪಾರ್ವತಿ, ಶಿವ ಮತ್ತು ಗಣೇಶನ ದೇವಾಲಯಗಳು ಕೂಡಾ ಇಲ್ಲಿವೆ. ರಾಮಲಿಂಗೇಶ್ವರ ದೇವಾಲಯದಲ್ಲಿ ಕೀರ್ತಿಮುಖ ಗಣೇಶನ ಶಿಲ್ಪಗಳನ್ನು ಸಹ ನೋಡಬಹುದಾಗಿದೆ.

ಲಕ್ಷ್ಮಣಲಿಂಗೇಶ್ವರ ದೇವಾಲಯದಲ್ಲಿ ಚಿಕ್ಕದಾದ ನಂದಿಯೊಂದಿಗೆ ದೊಡ್ಡದಾದ ಲಿಂಗವಿದೆ. ಕಲ್ಲಿನಿಂದ ಕೆತ್ತಲಾದ ಸುಂದರವಾದ ಉಮಾ-ಮಹೇಶ್ವರ ವಿಗ್ರಹಗಳಿವೆ. ಈ ಹಾಲ್ ನಲ್ಲಿನ ಫಿಲ್ಲರ್ ಗಳೆಂದರೆ ಶತ್ರುಘ್ನೇಶ್ವರ ಮತ್ತು ಭರತಲಿಂಗೇಶ್ವರ ದೇವಾಲಯ. ಇಲ್ಲಿ ಯಾವುದೇ ಕಾಲದಲ್ಲೂ ಸವೆಯದಂತಹ ಶಿಲ್ಪಗಳನ್ನು ಕೆತ್ತಲಾಗಿದೆ. 

ಆವನಿಯು ದಕ್ಷಿಣದ ಗಯಾ ಎಂದು ಸಹಾ ಖ್ಯಾತಿ ಪಡೆದಿದೆ. ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಇಲ್ಲಿ ಆಶ್ರಮವನ್ನು ಕಟ್ಟಿಕೊಂಡು ಕೆಲ ಕಾಲ ತಂಗಿದ್ದನೆಂದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ. ಈ ಊರಿನಲ್ಲಿ  ಸೀತಾದೇವಿಯು ಅವನಿ ಗ್ರಾಮದಲ್ಲಿಯೆ ಲವ-ಕುಶರಿಗೆ ಜನ್ಮನೀಡಿದಳಂತೆ, ಆದ್ದರಿಂದ ಇದು ಲವ-ಕುಶ ಬೆಟ್ಟ, ಸೀತಾ ಬೆಟ್ಟ ಮಚ್ಚು ಅವನಿ ಬೆಟ್ಟ ಎಂದು ಖ್ಯಾತಿಯಾಗಿದೆ. ಬೆಟ್ಟದ ತುದಿಯಲ್ಲಿ ಸೀತಾ ಮತ್ತು ಪಾರ್ವತಿ ದೇವಾಲಯಗಳಿವೆ. ಅಶ್ವಮೇಧ ಯಜ್ಞ ಮತ್ತು ರಾಮ ಮತ್ತು ಆತನ ಸಹೋದರರು ನಡೆಸಿದ ಯುದ್ಧದ ಸ್ಥಳ ಕೂಡಾ ಇದೇ ಆಗಿದೆ.

ಆವನಿ ಕ್ಷೇತ್ರವು ಕೋಲಾರದಿಂದ 3ಜ ಕಿ.ಮೀ. ದೂರದಲ್ಲಿದೆ. ಕೆಜಿಎಫ್ ನಂತರ ಸಿಗುತ್ತದೆ. ಆದರೆ, ವಾಹನಗಳಲ್ಲಿ ರಾಮಲಿಂಗೇಶ್ವರ ದೇವಾಲಯಕ್ಕೆ ತೆರಳುವ ಪ್ರವಾಸಿಗರಿಗೆ ನಿಜವಾದ ಚಿನ್ನದ ಹಟ್ಟಿ ಎಲ್ಲಿದೆ ಎಂಬುದು ಸ್ಪಷ್ಟವಾಗಲಿದೆ.

Stay up to date on all the latest ಪ್ರವಾಸ-ವಾಹನ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp