
ಸ್ಕೋಡಾ ಕುಶಾಕ್ ಎಸ್ಯುವಿ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಕೋಡ ಕಂಪನಿ ತನ್ನ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್ಯುವಿ ಕಾರು ಮಾದರಿಯಾದ ಕುಶಾಕ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
11-16 ಲಕ್ಷಗಳ ನಡುವೆ ಕುಶಾಕ್ ಎಸ್ ಯುವಿ ಬೆಲೆ ನಿಗದಿಯಾಗುವ ಸಾಧ್ಯತೆಗಳಿದ್ದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ನಂತಹ ಎಸ್ ಯುವಿಗಳಿಗೆ ಪ್ರಬಲ ಪೈಪೋಟಿ ನೀಡಲಿವೆ.
ಸ್ಕೋಡಾ ಕುಶಾಕ್ ನ ಆರ್ಡರ್ ಬುಕಿಂಗ್ ಜೂನ್ ನಿಂದ ಪ್ರಾರಂಭವಾಗಲಿದ್ದು ಜುಲೈ ನಲ್ಲಿ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ. ಹೊಸ ಆವೃತ್ತಿ 2651 ಎಂಎಂ ವ್ಹೀಲ್ ಬೇಸ್ ನ್ನು ಹೊಂದಿದ್ದು, ಈ ಸೆಗ್ಮೆಂಟ್ ನಲ್ಲಿ ಅತ್ಯಂತ ಉದ್ದದ ವಾಹನ ಇದಾಗಿರಲಿದೆ. ಅಷ್ಟೇ ಅಲ್ಲದೇ ಎರಡು ಟರ್ಬೋಚಾರ್ಜ್ಡ್ ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿ ಎಸ್ ಯುವಿ ಲಭ್ಯವಿರಲಿದೆ.
1.0 ಲೀಟರ್ ಮೂರು ಸಿಲಿಂಡರ್ 115 ಪಿಎಸ್ ಇಂಜಿನ್ ಹಾಗೂ 1.5 ಲೀಟರ್ ನಾಲ್ಕು ಸಿಲಿಂಡರ್, 150ಪಿಎಸ್ ಯುನಿಟ್ ಗಳಲ್ಲಿ ಮನುಷ್ಯ ಚಾಲಿತ ಹಾಗೂ ಸ್ವಯಂ ಚಾಲಿತ ಆಯ್ಕೆಗಳಿವೆ. 5 ಬಣ್ಣಗಳಲ್ಲಿ ಕುಶಾಕ್ ಮಾರುಕಟ್ಟೆಗೆ ಬರಲಿದೆ.