ಜಾಗ್ವಾರ್ ಐ-ಪೇಸ್: ವಿದ್ಯುತ್ ಚಾಲಿತ ಎಸ್ ಯುವಿ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು ಗೊತ್ತೇ?

ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಎಸ್ ಯುವಿ ಜಾಗ್ವಾರ್ ಐ-ಪೇಸ್ ಭಾರತದಲ್ಲಿ  ಬಿಡುಗಡೆಯಾಗಿದೆ. 

Published: 23rd March 2021 06:27 PM  |   Last Updated: 23rd March 2021 06:27 PM   |  A+A-


Jaguar I-Pace Electric SUV Launched In India

ಜಾಗ್ವಾರ್ ಐ-ಪೇಸ್: ವಿದ್ಯುತ್ ಚಾಲಿತ ಎಸ್ ಯುವಿ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು ಗೊತ್ತೇ?

Posted By : Srinivas Rao BV
Source : Online Desk

ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಎಸ್ ಯುವಿ ಜಾಗ್ವಾರ್ ಐ-ಪೇಸ್ ಭಾರತದಲ್ಲಿ  ಬಿಡುಗಡೆಯಾಗಿದೆ. 

90 kWh ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿರುವ ಐ-ಪೇಸ್ ಕೇವಲ 4.8 ಸೆಕೆಂಡುಗಳಲ್ಲಿ ವೇಗವನ್ನು ಗಂಟೆಗೆ 0-1೦೦ ಕಿಮೀ ಗೆ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಹೊಸ ಪಿವಿ ಪ್ರೊ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಪಡೆದ ಭಾರತದ ಮೊದಲ ಜಾಗ್ವಾರ್ ವಾಹನ ಇದಾಗಿದ್ದು, ಭಾರತದ ಮಾರುಕಟ್ಟೆಯಲ್ಲಿ 1.05 ಕೋಟಿ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. 

ಮಾರುಕಟ್ಟೆಗೆ ಪ್ರವೇಶಿಸಿದ ನಂತರ, ಜಾಗ್ವಾರ್ ಐ-ಪೇಸ್ ವರ್ಲ್ಡ್  ಕಾರ್ ಆಫ್ ದಿ ಇಯರ್, ವರ್ಲ್ಡ್  ಕಾರ್ ಡಿಸೈನ್ ಆಫ್ ದಿ ಇಯರ್ ಮತ್ತು 2019ರಲ್ಲಿ ವರ್ಲ್ಡ್ ಗ್ರೀನ್ ಕಾರ್ ಸೇರಿದಂತೆ 8೦ ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. 

ಗರಿಷ್ಠ ಸುರಕ್ಷತೆಯನ್ನು ಒದಗಿಸುವುದರೊಂದಿಗೆ ಚಾಲಕನಿಗೆ ಸಹಾಯ ಮಾಡುವ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ,  3 ಡಿ ಸರೌಂಡ್ ಕ್ಯಾಮೆರಾ ಸುತ್ತಮುತ್ತಲಿನ ಪ್ರದೇಶದ 360 ಡಿಗ್ರಿ ಡಿಜಿಟಲ್ ಪ್ಲಾನ್ ವ್ಯೂ ಸೌಲಭ್ಯಗಳೊಂದಿಗೆ ಐ-ಪೇಸ್ ನ್ನು ವಿನ್ಯಾಸಗೊಳಿಸಲಾಗಿದೆ. 

ಇದಲ್ಲದೆ, ಜಾಗ್ವಾರ್ ಐ-ಪೇಸ್ ಅನ್ನು ಚಾರ್ಜ್ ಮಾಡಲು, ಗ್ರಾಹಕರು ವಾಹನದೊಂದಿಗೆ ಪ್ರಮಾಣಿತವಾಗಿ ಒದಗಿಸಲಾದ ಹೋಮ್ ಚಾರ್ಜಿಂಗ್ ಕೇಬಲ್ ಅನ್ನು ಬಳಸಬಹುದು ಅಥವಾ 7.4 kW ಎಸಿ ವಾಲ್ ಮೌಂಟೆಡ್ ಚಾರ್ಜರ್ ಸಹ ಬಳಸಬಹುದಾಗಿದೆ. ಗ್ರಾಹಕರ ಮನೆಯಲ್ಲಿ ಈ ಚಾರ್ಜರ್‌ನ ಸ್ಥಾಪನೆ ವ್ಯವಸ್ಥೆಯ ಸೇವೆಯನ್ನು ಟಾಟಾ ಪವರ್ ಲಿಮಿಟೆಡ್ ಸಂಸ್ಥೆ ಒದಗಿಸಲಿದೆ.


Stay up to date on all the latest ಪ್ರವಾಸ-ವಾಹನ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp