ಟಾಟಾ ಮೋಟಾರ್ಸ್ ನಿಂದ ಸಿಎನ್ಜಿ ಚಾಲಿತ ಟಿಗೊರ್ ಮತ್ತು ಟಿಯಾಗೊ ಬಿಡುಗಡೆ, ಆರಂಭಿಕ ಬೆಲೆ 6.7 ಲಕ್ಷ ರೂ.
ಭಾರತದ ಪ್ರಮುಖ ವಾಹನ ತಯಾರಿಕಾ ಕಂಪೆನಿ ಟಾಟಾ ಮೋಟಾರ್ಸ್ ಟಿಯಾಗೊ ಮತ್ತು ಟಿಗೊರ್ ಜಿಎನ್ ಜಿ ಮಾದರಿಯ ಕಾರುಗಳನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Published: 19th January 2022 04:17 PM | Last Updated: 19th January 2022 05:03 PM | A+A A-

ಟಿಯಾಗೊ
ನವದೆಹಲಿ: ಭಾರತದ ಪ್ರಮುಖ ವಾಹನ ತಯಾರಿಕಾ ಕಂಪೆನಿ ಟಾಟಾ ಮೋಟಾರ್ಸ್ ಟಿಯಾಗೊ ಮತ್ತು ಟಿಗೊರ್ ಜಿಎನ್ ಜಿ ಮಾದರಿಯ ಕಾರುಗಳನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಟಾಟಾ ಮೋಟಾರ್ಸ್ನ ಈ ಹೊಸ iCNG ಶ್ರೇಣಿಯು ಕಂಪನಿಯ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋ ರೂಂ ಬೆಲೆ 6,09,900 ರೂಪಾಯಿಯಿಂದ ಆರಂಭವಾಗುತ್ತದೆ. Tigor iCNG ಮಾದರಿಯ ಆರಂಭಿಕ ಬೆಲೆ 7,69,900 ರೂಪಾಯಿ ನಿಗದಿಪಡಿಸಲಾಗಿದೆ.
ಟಾಟಾ ಮೋಟಾರ್ಸ್ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿರುವ ಕಾರುಗಳ ಮಾಡೆಲ್ನಲ್ಲೇ ಗ್ಯಾಸ್ (CNG) ಚಾಲಿತ ಕಾರುಗಳನ್ನು ಪರಿಚಯಿಸಿದ್ದು, ಅದರಂತೆ ಟಾಟಾ ಟಿಯೊಗೊ ಹಾಗೂ ಟಿಗೊರ್ ಸಿಎನ್ಜಿ ಮಾಡೆಲ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.

ಸಿಎನ್ಜಿ ಚಾಲಿತ ವಾಹನಗಳ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ನಾವು ನಮ್ಮ ವಿವೇಚನಾಶೀಲ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಅವರು ಹೇಳಿದ್ದಾರೆ.
ಇದನ್ನು ಓದಿ: ಐಪಿಎಲ್ ಪ್ರಾಯೋಜಕತ್ವ ಟಾಟಾ ತೆಕ್ಕೆಗೆ, ಬಿಡ್ ಗೆದ್ದ ಟಾಟಾ ಗ್ರೂಪ್ ಸಂಸ್ಥೆ!!
ನಮ್ಮ iCNG ಶ್ರೇಣಿಯು ಉತ್ತಮ ಕಾರ್ಯಕ್ಷಮತೆ, ವ್ಯಾಪಕ ಶ್ರೇಣಿಯ ಪ್ರೀಮಿಯಂ ವೈಶಿಷ್ಟ್ಯಗಳು, ರಾಜಿಯಾಗದ ಸುರಕ್ಷತೆಯೊಂದಿಗೆ ಸಂತೋಷಕರ ಅನುಭವವನ್ನು ನೀಡುತ್ತದೆ. ವಿನ್ಯಾಸ, ಕಾರ್ಯಕ್ಷಮತೆ, ಸುರಕ್ಷತೆ ಮತ್ತು ತಂತ್ರಜ್ಞಾನ ಎಂಬ 4-ಪಿಲ್ಲರ್ಗಳ ಮೇಲೆ ಈ ಕಾರುಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.