ಉಡುಪಿಯ ಹಚ್ಚಹಸಿರು ಪ್ರಕೃತಿ ನಡುವೆ ದಟ್ಟ ಮ್ಯಾಂಗ್ರೋವ್ ಕಾಡುಗಳ ಮಧ್ಯೆ ಪ್ರವಾಸಿಗರಿಗೆ ಕಾಯಕಿಂಗ್ ಅನುಭವ!
ಕೃಷ್ಣನ ನಾಡು ಉಡುಪಿ ಜಿಲ್ಲೆಗೆ ಪ್ರವಾಸ ಹೋಗಲು ಯೋಜಿಸಿದರೆ ತಕ್ಷಣ ತಲೆಗೆ ಹೊಳೆಯುವುದು ಅಲ್ಲಿನ ಪುರಾತನ ದೇವಾಲಯಗಳು, ಸುಂದರವಾದ ಕಡಲ ತೀರಗಳು ಮತ್ತು ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳು ಮತ್ತು ನೀಲಿ ಅರೇಬಿಯನ್ ಸಮುದ್ರದ ನಡುವೆ ಕಂಗೊಳಿಸುವ ಬೆಟ್ಟಗಳು.
Published: 23rd January 2022 09:01 AM | Last Updated: 24th January 2022 06:55 PM | A+A A-

ಉಡುಪಿಯಲ್ಲಿ ಪ್ರವಾಸಿಗರ ಕಾಯಕಿಂಗ್
ಉಡುಪಿ: ಕೃಷ್ಣನ ನಾಡು ಉಡುಪಿ ಜಿಲ್ಲೆಗೆ ಪ್ರವಾಸ ಹೋಗಲು ಯೋಜಿಸಿದರೆ ತಕ್ಷಣ ತಲೆಗೆ ಹೊಳೆಯುವುದು ಅಲ್ಲಿನ ಪುರಾತನ ದೇವಾಲಯಗಳು, ಸುಂದರವಾದ ಕಡಲ ತೀರಗಳು ಮತ್ತು ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳು ಮತ್ತು ನೀಲಿ ಅರೇಬಿಯನ್ ಸಮುದ್ರದ ನಡುವೆ ಕಂಗೊಳಿಸುವ ಬೆಟ್ಟಗಳು.
ಆದರೆ ಈಗ, ದಟ್ಟವಾದ ಮ್ಯಾಂಗ್ರೋವ್ ಕಾಡುಗಳ ಮಧ್ಯೆ ಕಾಯಕಿಂಗ್ ಉಡುಪಿಗೆ ಭೇಟಿ ನೀಡುವವರ ಇತ್ತೀಚಿನ ಆಕರ್ಷಣೆಯಾಗಿದೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಇಬ್ಬರು ಉತ್ಸಾಹಿ ಯುವಕರಾದ ಮಿಥುನ್ ಮತ್ತು ಲೋಕೇಶ್ ಅವರ ಸಾಹಸದಿಂದ ಇದು ಸಾಧ್ಯವಾಗಿದೆ. ಸೀತಾ ನದಿಯ ಹಿನ್ನೀರಿ ನಲ್ಲಿ ಕಾಯಕಿಂಗ್ ನ್ನು ಈ ಯುವಕರು ಪರಿಚಯಿಸಿದ್ದಾರೆ. ಇದರಿಂದಾಗಿ ಇತ್ತೀಚಿನವರೆಗೂ ಅನ್ವೇಷಿಸದ ಮ್ಯಾಂಗ್ರೋವ್ ಕಾಡುಗಳ ಮೂಲಕ ಪ್ರಕೃತಿ ಪ್ರಿಯರಿಗೆ ಗಾಳಿ ಬೀಸುವಂತೆ ಮಾಡಿದ್ದಾರೆ.
28 ವರ್ಷದ ಮಿಥುನ್ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಏನನ್ನಾದರೂ ಮಾಡುವತ್ತ ಒಲವು ತೋರುತ್ತಿದ್ದ ಅವರು, ತಮ್ಮ ಹುಟ್ಟೂರಾದ ಸಾಲಿಗ್ರಾಮದಲ್ಲಿ ಕಾಯಕಿಂಗ್ ಪರಿಕಲ್ಪನೆಯನ್ನು ಮುಂದಿಟ್ಟರು.ಅವರು ಮತ್ತು ಅವರ ಸ್ನೇಹಿತ ಲೋಕೇಶ್ ,ಈಗ ಅವರ ಉದ್ಯಮ ಪಾಲುದಾರರಾಗಿದ್ದು, 7 ಲಕ್ಷ ರೂಪಾಯಿ ಹೂಡಿಕೆ ಮಾಡಿ ಎಂಟು ಕಯಾಕ್ಸ್ ಅನ್ನು ಕೊಂಡರು. 'ಸೈಲ್ಸ್ ಮತ್ತು ಮೋರ್ ಅಡ್ವೆಂಚರ್ಸ್' ಕೆಲವು ತಿಂಗಳ ಹಿಂದೆ ಪ್ರಾರಂಭವಾಯಿತು.
ಸೀತಾ ನದಿಯ ಉದ್ದಕ್ಕೂ ಎರಡು ಗಂಟೆಗಳ ಕಾಲ 5-ಕಿಲೋ ಮೀಟರ್ ಸವಾರಿಯು ಉಡುಪಿಯ ಸಮೃದ್ಧ ಹಿನ್ನೀರು ಮತ್ತು ಮ್ಯಾಂಗ್ರೋವ್ಗಳನ್ನು ತೋರಿಸುತ್ತದೆ. "ಉಡುಪಿ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶಗಳು ಹೇರಳವಾಗಿದೆ ಎಂದು ನನಗೆ ಯಾವಾಗಲೂ ಅನಿಸುತ್ತದೆ. ಕಾಯಕಿಂಗ್ ಗೆ ಸಾಲಿಗ್ರಾಮದ ಮ್ಯಾಂಗ್ರೋವ್ಗಳಿಗಿಂತ ಉತ್ತಮವಾದ ಸ್ಥಳ ಬೇರೊಂದಿಲ್ಲ, ನೆರೆಯ ಕೇರಳದಲ್ಲಿ ಹಿನ್ನೀರನ್ನು ಆನಂದಿಸುತ್ತೇವೆ ಎಂದು ಹಲವರು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ನಮ್ಮದೇ ಹಿನ್ನೀರು ಉಡುಪಿಯಲ್ಲಿಯೂ ಇದೆಯಲ್ಲ, ಅದು ಕಡಿಮೆಯಿಲ್ಲ, ಅಷ್ಟೇ ಸುಂದರವಾಗಿವೆ ಎಂದು ಮಿಥುನ್ ಹೇಳುತ್ತಾರೆ.
ಇದನ್ನೂ ಓದಿ: ಕನ್ನಡಕ್ಕೊಂದು ಹೊಸ ಯೂನಿಕೋಡ್ ಫಾಂಟ್: ಆನೆಯನ್ನು ಹೋಲುವ ಫಾಂಟ್ ಬಂಡೀಪುರ
ಮೊದಲು ಇಲ್ಲಿಗೆ ಸ್ಥಳೀಯರು ಮತ್ತು ಅಕ್ಕಪಕ್ಕದ ಗ್ರಾಮಗಳ ಪ್ರವಾಸಿಗರು ಮಾತ್ರ ಕಾಯಕಕ್ಕೆ ಬರುತ್ತಿದ್ದರು. ಆದರೆ ಈಗ, ಯಾವುದೇ ದೊಡ್ಡ ಪ್ರಮಾಣದ ಜಾಹೀರಾತುಗಳಿಲ್ಲದೆ ಮತ್ತು ಕೇವಲ ಬಾಯಿಮಾತಿನ ಮೂಲಕ ಆದ ಪ್ರಚಾರದಿಂದ ಮಾಹಿತಿ ಪಡೆದು ಮಂಗಳೂರು, ಮಣಿಪಾಲ ಮತ್ತು ಬೆಂಗಳೂರಿನಂತಹ ದೂರದ ಸ್ಥಳಗಳಿಂದ ಪ್ರವಾಸಿಗರು ಕಯಾಕಿಂಗ್ ಅನ್ನು ಅನುಭವಿಸಲು ಸಾಲಿಗ್ರಾಮಕ್ಕೆ ಬರುತ್ತಿದ್ದಾರೆ.
ಪ್ರವಾಸಿಗರ ಸುರಕ್ಷತೆಗಾಗಿ ಲೈಫ್ ಜಾಕೆಟ್ಗಳನ್ನು ಒದಗಿಸುವ ಮಿಥುನ್ ಅಥವಾ ಲೋಕೇಶ್ ಅಥವಾ ಕೆಲವೊಮ್ಮೆ ಇಬ್ಬರೂ ಜೊತೆಯಾಗುತ್ತಾರೆ. “ಕಾಯಕಿಂಗ್ ಮಾಡದವರೂ ಇಲ್ಲಿಗೆ ಬಂದು ನಮ್ಮ 10 ನಿಮಿಷಗಳ ತರಬೇತಿಯ ಮೂಲಕ ಮೂಲಭೂತ ಅಂಶಗಳನ್ನು ಕಲಿಯಬಹುದು. ಅವರು ತಕ್ಷಣವೇ ಕಾಯಕಿಂಗ್ ಮಾಡಬಹುದು ಎಂದು ಮಿಥುನ್ ಹೇಳುತ್ತಾರೆ.
ಒಂದು ಭಾಗದಲ್ಲಿ, ಮ್ಯಾಂಗ್ರೋವ್ ಕಾಡು ತುಂಬಾ ದಪ್ಪವಾಗಿದ್ದು, ಸೂರ್ಯನ ಬೆಳಕು ಸಹ ಪ್ರವೇಶಿಸುವುದಿಲ್ಲ. ಇಲ್ಲಿ ಕಾಯಕಿಂಗ್ ಸುರಕ್ಷಿತವಾಗಿದೆ. ತುಂಬಾ ಆಳವಾಗಿಲ್ಲ, ಯಾರಾದರೂ ತಮ್ಮ ಕಾಯಕವನ್ನು ಪ್ಯಾಡ್ಲಿಂಗ್ ಮಾಡುವಲ್ಲಿ ದಣಿದಿದ್ದರೆ, ಅವರು ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಬಹುದು. ಹಿನ್ನೀರಿನಲ್ಲಿ ಸಂಪೂರ್ಣ ಪಕ್ಷಿಗಳು ಮತ್ತು ಸಮುದ್ರ ಜೀವಿಗಳು ಅಭಿವೃದ್ಧಿ ಹೊಂದುವಂತೆ ಪ್ರಕೃತಿಯನ್ನು ಅತ್ಯುತ್ತಮವಾಗಿ ವೀಕ್ಷಿಸಬಹುದು. ಕಾಯಕಿಂಗ್ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 7 ರವರೆಗೆ ಇರುತ್ತದೆ.
ಕಡಿಮೆ ಉಬ್ಬರವಿಳಿತವಿದ್ದರೆ, ಕಾಯಕಿಂಗ್ ಮಾಡುವಾಗ ಆಳವಾದ ದಟ್ಟವಾದ ಮ್ಯಾಂಗ್ರೋವ್ ಅರಣ್ಯದೊಳಗೆ ಚಲಿಸಲು ಸಾಧ್ಯವಾಗುವುದಿಲ್ಲ. ಕಾಯಾಕಿಂಗ್ಗಾಗಿ ಇಲ್ಲಿಗೆ ಬಂದಿರುವ ಮಂಗಳೂರಿನ ಕುದುರೆಮುಖ ಕಲ್ಲಿದ್ದಲು ಕಂಪನಿ ಲಿಮಿಟೆಡ್ನ ಮ್ಯಾನೇಜರ್ ಗುರುದತ್, ಸಾಲಿಗ್ರಾಮದಲ್ಲಿನ ಮ್ಯಾಂಗ್ರೋವ್ ಕಾಡುಗಳ ವಿಸ್ತಾರವು ದಟ್ಟ ಮತ್ತು ಹಲವು ವಿಧಗಳಲ್ಲಿ ವಿಶಿಷ್ಟವಾಗಿದೆ ಎನ್ನುತ್ತಾರೆ.
ಬೆಂಗಳೂರಿನ ವೆಲ್ಲ್ ನೆಸ್ ತರಬೇತುದಾರೆ ಪ್ರಿಯಾಂಕಾ, ಸಾಲಿಗ್ರಾಮದಲ್ಲಿ ಕಾಯಕಿಂಗ್ ಮಾಡಿದ ಅನುಭವ ಅದ್ಭುತವಾಗಿದ್ದು ಮತ್ತೊಮ್ಮೆ ಶೀಘ್ರದಲ್ಲಿಯೇ ಭೇಟಿ ನೀಡಬೇಕೆಂದಿದ್ದೇನೆ ಎಂದರು. ಎರಡು ಗಂಟೆಗಳ ಸವಾರಿಗೆ, ವಯಸ್ಕರಿಗೆ 300 ರೂಪಾಯಿ ದರವಿರುತ್ತದೆ. ಪ್ರತಿ ಕಾಯಕಿಂಗ್ ನಲ್ಲಿ ಇಬ್ಬರಿಗೆ ಅವಕಾಶವಿರುತ್ತದೆ.