ವಿಡಿಯೋ ಕುರಿತು : ತೀವ್ರ ಕುತೂಹಲ ಕೆರಳಿಸಿದ್ದ ಟಿ20 ವಿಶ್ವಕಪ್ ನ ಭಾರತ-ಪಾಕಿಸ್ತಾನ ತಂಡಗಳು ನಡುವಿನ ಪಂದ್ಯಕ್ಕೂ ಮುನ್ನ ಬಾಲಿವುಡ್ ನಟ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಪಾಕಿಸ್ತಾನದ ಖ್ಯಾತ ಗಾಯಕ ಶಫ್ಖತ್ ಅಮಾನಂತ್ ಅಲಿ ತಮ್ಮ ತಮ್ಮ ರಾಷ್ಟ್ರದ ರಾಷ್ಟ್ರಗೀತೆ ಹಾಡಿದರು. ಅಲಿ ಅವರು ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿ ಮುಗಿಸುತ್ತಿದ್ದಂತೆಯೇ ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡಲು ಶುರುಮಾಡಿದರು. ಅಮಿತಾಬ್ ಅವರಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಭಾರತೀಯ ಅಭಿಮಾನಿಗಳು ಸಾಥ್ ನೀಡಿದರು.
Posted on: 20 Mar 2016 12:16 PM IST