ಸ್ತ್ರೀ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದ ಯೋಜನೆಗಳಿವು...

ಸ್ವಾತಂತ್ರ್ಯಾ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆ, ಸುರಕ್ಷತೆಗೆ, ಸ್ವಾಲವಂಬಿ ಜೀವನಕ್ಕೆ ಸಬಲೀಕರಣಕ್ಕೆ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸಂವಿಧಾನಾತ್ಮಕವಾಗಿಯೂ ಮಹಿಳೆ ಸಮಾನ ಸ್ಥಾನಮಾನ ಪಡೆದಿದ್ದಾಳೆ. ಅದಾಗ್ಯೂ ಭಾರತದಲ್ಲಿ ಮಹಿಳಾ ಸಮಾನತೆ ಎಂಬುದು ಇನ್ನೂ ಮರೀಚೆಕೆ ಎಂದರೆ ತಪ್ಪಾಗಲಾರದು...

Published: 09th March 2020 11:39 AM  |   Last Updated: 09th March 2020 12:16 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಸ್ವಾತಂತ್ರ್ಯಾ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆ, ಸುರಕ್ಷತೆಗೆ, ಸ್ವಾಲವಂಬಿ ಜೀವನಕ್ಕೆ ಸಬಲೀಕರಣಕ್ಕೆ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸಂವಿಧಾನಾತ್ಮಕವಾಗಿಯೂ ಮಹಿಳೆ ಸಮಾನ ಸ್ಥಾನಮಾನ ಪಡೆದಿದ್ದಾಳೆ. ಅದಾಗ್ಯೂ ಭಾರತದಲ್ಲಿ ಮಹಿಳಾ ಸಮಾನತೆ ಎಂಬುದು ಇನ್ನೂ ಮರೀಚೆಕೆ ಎಂದರೆ ತಪ್ಪಾಗಲಾರದು. 

ನಿತ್ಯ ಕಿವಿಗೆ ಅಪ್ಪಳಿಸುವ ಕೌಟುಂಬಿಕ ಹಿಂಸೆ, ತಾರತಮ್ಯ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಸ್ರೀಸಶಕ್ತೀಕರಣಕ್ಕೆ, ಸಬಲೀಕರಣಕ್ಕೆ ಭಾರತ ಮತ್ತಷ್ಟು ಕ್ರಮ ಕೈಗೊಳ್ಳಬೇಕೆಂಬುದನ್ನು ಸಾರಿ ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಮಹಿಳಾ ಸಬಲೀಕರಣಕ್ಕೆ ಈಗಾಗಲೇ ಜಾರಿಗ ತಂದಿರುವ ಕೆಲ ಯೋಜನಗಳ ಪಟ್ಟಿ ಇಲ್ಲಿವೆ...

ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯು ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಪ್ರಾರಂಭಿಸಲಾದ ಯೋಜನೆಯಾಗಿದೆ. ಬಡ ಕುಟುಂಬದಲ್ಲಿ ಜನಿಸುವ ಹೆಣ್ಣು ಮಗುವಿಗೆ ಒಂದು ಸಣ್ಣ ಉಳಿತಾಯ ಠೇವಣಿ ಇಡುವ ಯೋಜನೆಯಾಗಿದೆ. ಹೆಣ್ಣು ಮಗು ಜನಿಸಿದ ನಂತರ 10 ವರ್ಷದ ಒಳಗಾಗಿ ಯಾವುದೇ ಪೋಸ್ಟ್ ಆಫೀಸ್ ಅಥವಾ ಕಮರ್ಷಿಯಲ್ ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದು. ಇದಕ್ಕೆ ತಂದೆ, ತಾಯಿ ಅಥವಾ ಪೋಷಕರು ವರ್ಷಕ್ಕೆ ಎಷ್ಟಾದರೂ ಹಣ ಡೆಪಾಸಿಟ್ ಮಾಡಬಹುದು. ಈ ಹಣಕ್ಕೆ ಶೇ.8.6ರಷ್ಟು ಬಡ್ಡಿ ಬರುತ್ತದೆ. ಮತ್ತು ಬಡ್ಡಿ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಹೆಣ್ಣು ಮಗುವಿನ 10 ವರ್ಷ ತುಂಬಿದ ಬಳಿಕ ಉಳಿತಾಯ ಮಾಡಿದ ಹಣದಲ್ಲಿ ಶೇ.50ರಷ್ಟು ಹಣವನ್ನು ಶೈಕ್ಷಣಿಕ ಖರ್ಚಿಗೆ ಬಳಸಿಕೊಳ್ಳಬಹುದು. ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳವರೆಗ ಖಾತೆ ಚಾಲನೆಯಲ್ಲಿರುತ್ತದೆ. ನಂತರ ಖಾತೆಯನ್ನು ಮುಕ್ತಾಯಗೊಳಿಸಿ, ಖಾತೆ ಹೊಂದಿರುವ ಹೆಣ್ಣು ಮಗುವಿನಗೆ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ. 

ನಾರಿ ಶಕ್ತಿ ಪುರಸ್ಕಾರ
1999ರಲ್ಲಿ ಜಾರಿಗೆ ತಂಡ ಯೋಜನೆ ಇದಾಗಿದ್ದು, ಮಹಿಳಾ ಸಬಲೀಕರಣಕ್ಕಾಗಿ ಶಾಶ್ವತ ಕೊಡುಗೆ ನೀಡುವ, ದುಡಿಯುವ ಹೆಣ್ಣು ಮಕ್ಕಳನ್ನು ಗುರುತಿಸಿ ನೀಡುವ ಪುರಸ್ಕಾರವಾಗಿದೆ. ಇದು ಭಾರತದಲ್ಲಿ ನೀಡಲಾಗುವು ಅತ್ಯುನ್ನತ ನಾಗರೀಕ ಗೌರವಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಮಾರ್ಚ್ 8 ರಂದು ಅರ್ಹ ಸಾಧಕಿಯರಿಗೆ ದೇಶದ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿ ಪತ್ರ ಮತ್ತು ರೂ.1,00,000 ನಗದನ್ನು ಒಳಗೊಂಡಿರುತ್ತದೆ. 

ಸ್ಟೆಪ್ (ಎಸ್ಟಿಇಪಿ)
ಮಹಿಳೆಯರಿಗಾಗಿ ವೃತ್ತಿ ತರಬೇತಿ ಮತ್ತು ಉದ್ಯೋಗ ಬೆಂಬಲಿತ ಯೋಜನೆಯನ್ನು ಭಾರತ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ 1986ರಲ್ಲಿ ಪ್ರಾರಂಭಿಸಿದೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. 

ಪ್ರಧಾನಮಂತ್ರಿ ಉಜ್ವಲಾ ಯೋಜನೆ
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಹೊಗೆಯುಕ್ತ ಅಡುಗೆಮನೆಯಿಂದ ಮುಕ್ತಿ ನೀಡಿ, ಶುದ್ಧ ಇಂಧನವನ್ನು ಒದಗಿಸುವ ಮಹತ್ತರ ಉದ್ದೇಶದಿಂದ 2016ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪಳೆಯುಳಿಕೆ ಇಂಧನಗಳು ಮತ್ತು ಇತರೆ ಇಂಧನಗಳನ್ನು ಅಡುಗೆಗಾಗಿ ಬಳಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಲನ್ನು ನಿಗ್ರಹಿಸುವುದು. ಅಡುಗೆಗ ಬಳಸುವ ಅಶುದ್ಧ ಇಂಧನಗಳ ಪರಿಣಾವಾಗಿ ಸಂಭವಿಸುವ ಸಾವುನೋವುಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಸವಾಗಿದೆ. 

ಶಿ-ಬಾಕ್ಸ್ ಪೋರ್ಟಲ್
ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಎದುರಿಸುವ ಮಹಿಳೆಯರಿಗೆ ಸೂಕ್ತ ಪರಿಹಾರ ಅಥವಾ ಸುರಕ್ಷಿತ ವಾತಾವರಣ ನಿರ್ಮಿಸುವ ಉದ್ದೇಶದಿಂದ 2018ರಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದರಡಿಯಲ್ಲಿ ಉದ್ಯೋಗಸ್ಥ ಮಹಿಳೆಯರು ಉದ್ಯೋಗ ಮಾಡುವ ಸ್ಥಳದಲ್ಲಿನ ಯಾವುದೇ ರೀತಿಯ ದೌರ್ಜನ್ಯದ ಬಗ್ಗೆ ದೂರು ನೀಡಬಹುದಾಗಿದೆ. ಈ ದೂರು ನೇರವಾಗಿ ಕೇಂದ್ರ ಮತ್ತು ರಾಜ್ಯದ ಸಂಬಂಧಿತ ಅಧಿಕಾರಿಗಳ ಬಳಿ ಹೋಗುವುದರಿಂದ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ. 

ಸ್ವಾಧಾರ್ ಗ್ರೇ ಸ್ಕೀಮ್
ಕೌಟುಂಬಿಕ ಸಮಸ್ಯೆ, ಅಪರಾಧ, ಹಿಂಸೆ, ಮಾನಸಿಕ ಒತ್ತಡ, ಸಾಮಾಜಿಕ ಬಹಿಷ್ಕಾರ ಮುಂತಾದ ಸಂದರ್ಭಗಳಲ್ಲಿ ಮಹಿಳೆಯರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಇದೇ ರೀತಿ ಉದ್ದೇಶವನ್ನು ಹೊಂದಿರುವ ಇನ್ನೊಂದು ಯೋಜನೆ ಶಾರ್ಟ್ ಸ್ಟೇ ಹೋಂ ನಿರ್ಗತಿಕರಾದ ಮಹಿಳೆಯರಿಗೆ ಪ್ರಾಥಮಿಕವಾಗಿ ಆಹಾರ, ವಸತಿ, ಬಟ್ಟೆ, ಮೆಡಿಕಲ್ ಟ್ರೀಟ್ ಮೆಂಟ್ ಒದಗಿಸಲಾಗುತ್ತದೆ. ಕುಟುಂಬ ಅಥವಾ ಸಮಾಜದಲ್ಲಿ ಅವರ ಮರು ಹೊಂದಾಣಿಕೆಗೆ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಕಾನೂನು ನೆರವು ಮತ್ತು ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ಅಪರಾಧ ಮುಕ್ತವಾಗಿ ಘನತೆಯಿಂದ ಬಾಳಲು ಈ ಯೋಜನೆ ಅನುವು ಮಾಡಿಕೊಡುತ್ತದೆ. 

ಒನ್ ಸ್ಟಾಪ್ ಸೆಂಟರ್ ಯೋಜನೆ
ಖಾಸಗಿ ಅಥವಾ ಸಾರ್ವಜನಿಕ ವಲಯಗಳಲ್ಲಿ ದೌರ್ಜನ್ಯ ಎದುರಿಸುವ ಮಹಿಳೆಯರಿಗೆ ಒಂದೇ ಸೂರಿನಡಿ ಬೆಂಬಲ ಮತ್ತು ನೆರವು ನೀಡುವ ಯೋಜನೆ ಇದು. ಮಹಿಳೆಯರ ಮೇಲಿನ ಯಾವುದೇ ರೀತಿಯ ಹಿಂಸಾಚಾರದ ವಿರುದ್ಧ ಹೋರಾಡಲು ನೊಂದ ಹೆಣ್ಣುಮಕ್ಕಳಿಗೆ ವೈದ್ಯಕೀಯ, ಕಾನೂನು ಬೆಂಬಲ ಮತ್ತು ಸಮಾಲೋಚನೆಯಂಥ ತುರ್ತು ನೆರವನ್ನು ನೀಡಲಾಗುತ್ತದೆ. ನಿರ್ಭಯಾ ಫಂಡ್ ಮೂಲಕ ಈ ಯೋಜನೆಗೆ ಹಣ ಒದಗಿಸಲಾಗುತ್ತಿದೆ. 

ವರ್ಕಿಂಗ್ ವುಮನ್ ಹಾಸ್ಟೆಲ್
ಉದ್ಯೋಗಸ್ಥ ಮಹಿಳಾ ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತರಲಾದ ಯೋಜನೆ ಇದಾಗಿದೆ. ಮಕ್ಕಳಿಗೆ ಡೇ ಕೇರ್ ವ್ಯವಸ್ಥೆಯನ್ನುೂ ಒಳಗೊಂಡಿದ್ದು, ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲೂ ಈ ಸೌಲಭ್ಯವಿದೆ. ಮೆಟ್ರೋ ನಗರಗಳಲ್ಲಿ ತಿಂಗಳಿಗೆ ರೂ.50,000ಕ್ಕಿಂತ ಕಡಿಮೆ ಆದಾಯ ಇರುವ ಹಾಗೂ ಉಳಿದ ಸ್ಥಳಗಳಲ್ಲಿ ತಿಂಗಳಿಗೆ ರೂ.35,000 ಕಡಿಮೆ ಆದಾಯ ಇರುವ ಯಾವುದೇ ಮಹಿಳೆ ಈ ಸೌಲಭ್ಯ ಪಡೆಯಬಹುದು. ಈ ಯೋಜನೆಯಡಿ 890 ಹಾಸ್ಟೆಲ್ ಗಳು ಮಂಜೂರಾಗಿದ್ದು, 66,000 ಉದ್ಯೋಗಸ್ಥ ಮಹಿಳೆಯರು ಯೋಜನೆಯ ಫಲಾನುಭವಿಗಳಾಗಿದ್ದಾರೆ. 

ಮಹಿಳಾ ಇ ಹಟ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2016ರಲ್ಲಿ ಈ ಯೋಜನೆಯನ್ನು ಜಾರಿ ಮಾಡಿತ್ತು. ಮಹಿಳಾ ಉದ್ಯಮಿಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಲು ಉತ್ಪಾದಿಸುವ ಉತ್ಪನ್ನಗಳಿಗೆ ಆನ್ ಲೈನ್ ನಲ್ಲಿ ಮಾರುಕಟ್ಟೆ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. 18 ವರ್ಷ ತುಂಬಿದ ಪ್ರತಿಯೊಬ್ಬ ಮಹಿಳಾ ಉದ್ಯಮಿಯೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮಧ್ಯವರ್ತಿಗಳ ಸಹಾಯ ಇಲ್ಲದೆ ಮೊಬೈಲ್ ಮೂಲಕವೇ ಈ ಯೋಜನೆ ಲಾಭ ಪಡೆಯಬಹುದು. ಈ ಯೋಜನೆ ಜಾರಿಯಾದಾಗಿನಿಂದ 17 ಲಕ್ಷ ಜನರು ಈ ಪೋರ್ಟಲ್ ಗೆ ಭೇಟಿ ನೀಡಿದ್ದಾರೆ. ಇದರಲ್ಲಿ 2000 ಉತ್ಪನ್ನಗಳಿದ್ದು 24 ರಾಜ್ಯಗಳಲ್ಲಿ ಇದರ ಸೇವೆ ಲಭ್ಯವಿದೆ. 

ಬೇಟಿ ಬಚಾವೋ, ಬೇಟಿ ಪಢಾವೋ
ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ಮಹತ್ತರ ಉದ್ದೇಶದಿಂದ ಜನವರಿ 22, 2015ರಂದು ಹರಿಯಾಣದ ಪಾಣಿಪತ್ ತನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆಯ ಮೊದಮೊದಲಿಗ ಪುರುಷ-ಸ್ತ್ರೀ ಅನುಪಾತದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ. ಆ ನಂತರದಲ್ಲಿ ಹೆಣ್ಣು ಭ್ರೂಣ ಹತ್ಯೆ, ತಾರತಮ್ಯ ಆಧಾರಿತ ಶಿಕ್ಷಣದ ವಿರುದ್ಧ ಜಾಗೃತ ಮೂಡಿಸುತ್ತಿದೆ. ಈ ಯೋಜನೆಯಿಂದ ಅಲ್ಪಮಟ್ಟಿಗೆ ಮಹಿಳಾ ಸಾಕ್ಷರತೆ ಮತ್ತು ಸ್ತ್ರೀ-ಪುರುಷರ ಅನುಪಾತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. 

ಮಹಿಳಾ ಶಕ್ತಿ ಕೇಂದ್ರ
ಗ್ರಾಮೀಣ ಮಹಿಳೆಯರ ಸಬಲೀಕರಣ ಉದ್ದೇಶದಿಂದ 2017ರಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದ. 155 ಹಿಂದುಳಿದ ಜಿಲ್ಲೆಗಳ ಸ್ವಯಂ ಸೇವಕ ವಿದ್ಯಾರ್ಥಿಗಳ ಮೂಲಕ ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಡಿಜಿಟಲ್ ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಟಿಕತೆ ಕುರಿತಂತೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಪ್ರತೀ ರಾಜ್ಯ, ಜಿಲ್ಲಾ, ಬ್ಲಾಕ್ ಮಟ್ಟದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. 

Stay up to date on all the latest ವಿಶ್ವ ಮಹಿಳಾ ದಿನ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp