ಮೇಕಪ್, ಫ್ಯಾಶನ್ ನಲ್ಲಿ ವೃತ್ತಿ ಕಂಡುಕೊಂಡಿರುವ ಚಂದ್ರರೇಖಾ  

ಮೇಕಪ್, ಫ್ಯಾಶನ್ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಬಹುಶಃ ಮೇಕಪ್ ನ್ನು ಇಷ್ಟಪಡದ ಯುವತಿಯರು, ಮಹಿಳೆಯರು ಬೆರಳೆಣಿಕೆಯಷ್ಟು ಇರಬಹುದೇನೋ.
ಚಂದ್ರರೇಖಾ
ಚಂದ್ರರೇಖಾ

ಮೇಕಪ್, ಫ್ಯಾಶನ್ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಬಹುಶಃ ಮೇಕಪ್ ನ್ನು ಇಷ್ಟಪಡದ ಯುವತಿಯರು, ಮಹಿಳೆಯರು ಬೆರಳೆಣಿಕೆಯಷ್ಟು ಇರಬಹುದೇನೋ. ಹೀಗೆ ಮನೆಯಲ್ಲಿ ತನ್ನಷ್ಟಕ್ಕೆ ಮಾಡುತ್ತಿದ್ದ ಮೇಕಪ್ ನಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಅದಕ್ಕೆ ಮಾರುಕಟ್ಟೆ ಗಿಟ್ಟಿಸಿಕೊಂಡು ಹಣ ಸಂಪಾದನೆ, ಜನಪ್ರಿಯತೆ ಪಡೆದುಕೊಂಡ ಮಹಿಳೆ ಬೆಂಗಳೂರಿನಲ್ಲಿದ್ದಾರೆ. ಅವರೇ ಚಂದ್ರರೇಖಾ.


ಸಣ್ಣ ಮಟ್ಟದಿಂದ ಆರಂಭವಾದ ಅವರ ಈ ಕಲೆ ಇಂದು ಸೆಲೆಬ್ರಿಟಿಗಳು, ಸಿನೆಮಾ ಕಲಾವಿದರು, ಫ್ಯಾಶನ್ ಶೋ, ಕಾರ್ಪೊರೇಟ್ ಕಂಪೆನಿಗಳ ಈವೆಂಟ್ ಗಳಲ್ಲಿ ಮಹಿಳೆಯರಿಗೆ, ಯುವತಿಯರಿಗೆ ಮೇಕಪ್ ಮಾಡುವವರೆಗೆ ಬೆಳೆದಿದ್ದು, ವಿರಾಮವಿಲ್ಲದಷ್ಟು ಕೆಲಸ ಅವರಿಗೆ ಸಿಗುತ್ತಿದೆ.


ಮೇಕಪ್ ಕಲಾವಿದೆಯಾಗಿ ತಾವು ಬೆಳೆದ ರೀತಿಯನ್ನು ಚಂದ್ರರೇಖಾ ವಿವರಿಸಿದ್ದು ಹೀಗೆ: ನನಗೆ ಮೇಕಪ್, ಫ್ಯಾಶನ್ ಬಗ್ಗೆ ಮೊದಲಿನಿಂದಲೂ ಆಸಕ್ತಿಯಿತ್ತು, ಮನೆಯಲ್ಲಿಯೇ ನನ್ನ ಪಾಡಿಗೆ, ನನ್ನ ಮಕ್ಕಳು, ತಂಗಿಗೆ ಮಾಡುತ್ತಿದ್ದೆ, ನಂತರ ಪಾರ್ಲರ್ ನಲ್ಲಿ ಸ್ವಲ್ಪ ತರಬೇತಿ ಪಡೆದುಕೊಂಡೆ. ಏಕೆ ಇದನ್ನು ಒಂದು ವೃತ್ತಿಯಾಗಿ ಮಾಡಿಕೊಳ್ಳಬಾರದು ಎಂದು ನನಗೆ ಆನಿಸತೊಡಗಿತು. ಹೀಗೆ ಫ್ಯಾಶನ್ ಇಂಡಸ್ಟ್ರಿಗೆ ಕಾಲಿಟ್ಟು 10 ವರ್ಷವಾಗಿದ್ದು, ಕಳೆದ ಮೂರು ವರ್ಷಗಳಿಂದ ಒಂದು ಉದ್ಯಮವಾಗಿ ಬೆಳೆದಿದೆ. 


ಜನರಿಂದ ಬಾಯಿಂದ ಬಾಯಿಗೆ ಪ್ರಚಾರವಾಗಿ, ಸೋಷಿಯಲ್ ಮೀಡಿಯಾಗಳಿಂದ ನನ್ನ ಮೇಕಪ್ ಬಗ್ಗೆ ಜನರು ತಿಳಿದುಕೊಂಡು ಪ್ರಚಾರವಾಗಿ ನನಗೆ ಅವಕಾಶ ಸಿಗುವುದು ಹೆಚ್ಚುತ್ತಾ ಹೋಯಿತು.ಫ್ಯಾಶನ್ ಶೋಗಳಲ್ಲಿ, ಸಿನೆಮಾಗಳಲ್ಲಿ, ಜಾಹಿರಾತುಗಳಲ್ಲಿ ಅವಕಾಶಗಳು ಸಿಗುತ್ತಿವೆ. ಬರ್ತ್ ಡೇ ಪಾರ್ಟಿಗಳು, ಮದುವೆ ಸಮಾರಂಭಗಳಲ್ಲಿ, ಮದುಮಗಳ ಮೇಕಪ್ ಹೀಗೆ ಬಿಡುವಿಲ್ಲದ ಕೆಲಸಗಳು ಸಿಗುತ್ತಿವೆ. 


ಮೇಕಪ್ ಎಂಬ ಪರಿಕಲ್ಪನೆಯನ್ನು ಒಂದು ಉತ್ತಮ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬುದು ನನ್ನ ಆಸೆ. 3 ಸಾವಿರದಿಂದ 30 ಸಾವಿರದವರೆಗೆ ನನಗೆ ಒಂದೊಂದು ಕಾರ್ಯಕ್ರಮದಿಂದ ಆದಾಯ ಬರುತ್ತಿದೆ.ಸೋಷಿಯಲ್ ಮೀಡಿಯಾದಿಂದ ನನಗೆ ಹೆಚ್ಚು ಅವಕಾಶಗಳು ಸಿಗುತ್ತಿದೆ ಎನ್ನುತ್ತಾರೆ. 

ಚಂದ್ರರೇಖಾ ಅವರ ಮೊಬೈಲ್ ಸಂಖ್ಯೆ:9844440645

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com