ಲಂಡನ್ ನಲ್ಲಿ ಜಗಜ್ಯೋತಿ ಬಸವಣ್ಣನ ಪ್ರತಿಮೆ ಅನಾವರಣ

ಲಂಡನ್ ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವಣ್ಣನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು...

Published: 14th November 2015 02:00 AM  |   Last Updated: 14th November 2015 07:15 AM   |  A+A-


Nerendra Modi

ನರೇಂದ್ರ ಮೋದಿ

Posted By : VS
Source : Online Desk
ಲಂಡನ್: ಲಂಡನ್ ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವಣ್ಣನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು. 

ಮಹಾಮಾನವತವಾದಿ, ಕ್ರಾಂತಿಕಾರಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣ ಮಾಡಿ ಮಾತನಾಡಿದ ಮೋದಿ ಅವರು, ಜಗಜ್ಯೋತಿ ಬಸವೇಶ್ವರರ ಕರ್ಮಯೋಗದ ಕುರಿತು ಮಾತನಾಡಿದರು. ಲಂಡನ್ ನಲ್ಲಿ ಪ್ರತಿಮೆಗೆ ಜಾಗ ಸಿಕ್ಕಿದ್ದು, ಬಸವೇಶ್ವರರ ಪ್ರತಿಮೆಯನ್ನು ನಾನು ಅನಾವರಣಗೊಳಿಸಿದ್ದು ನನ್ನ ಸೌಭಾಗ್ಯ. ಇದು ನನ್ನ ಜೀವನದ ಅಪೂರ್ವ ಕ್ಷಣ ಎಂದು ಬರ್ಣಿಸಿದರು. 

ಅಬ್ರಾಹಂ ಲಿಂಕನ್ ಅವರಿಗೂ ಮುಂಚಿತವಾಗಿಯೇ ಬಸವಣ್ಣನವರು ಪ್ರಜಾಪ್ರಭುತ್ವದ ಕಲ್ಪನೆ ನೀಡಿದ್ದರು. ಬಸವಣ್ಣನವರು 12ನೇ ಶತಮಾನದಲ್ಲೇ ಸಮಾಜ ಸುಧಾರಕರಾಗಿದ್ದರು. ಅಸ್ಪೃಶ್ಯತೆ ನಿವಾರಣೆ, ಜಾತಿ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದರು ಎಂದು ಮೋದಿ ಹೇಳಿದ್ದಾರೆ.

ಲ್ಯಾಂಬೆತ್‌ನ ಮಾಜಿ ಮೇಯರ್‌ ಡಾ. ನೀರಜ್‌ ಪಾಟೀಲ್‌ ಸೇರಿದಂತೆ ಹಲವು ಮಂದಿ ಭಾರತೀಯರು ಹಾಗೂ ಕನ್ನಡಿಗರು ಈ ಕ್ಷಣಕ್ಕೆ ಸಾಕ್ಷಿಯಾದರು.
Stay up to date on all the latest ಅಂತಾರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp