ಢಾಕಾ ದಾಳಿ ನಡೆಸಿದ್ದು ಇಸಿಸ್ ಅಲ್ಲ "ಐಎಸ್ಐ"!

ಸುಮಾರು 20 ಜನರ ಧಾರುಣ ಸಾವಿಗೆ ಕಾರಣವಾದ ಢಾಕಾ ಉಗ್ರದಾಳಿ ನಡೆಸಿದ್ದು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯಲ್ಲ ಬದಲಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಎಂಬ ಶಂಕೆ ವ್ಯಕ್ತವಾಗುತ್ತಿದೆ..

Published: 04th July 2016 02:00 AM  |   Last Updated: 04th July 2016 10:11 AM   |  A+A-


It's ISIS minus S, says Dhaka pointing to Pakistan

ಢಾಕಾ ದಾಳಿ (ಸಂಗ್ರಹ ಚಿತ್ರ)

Posted By : SVN
Source : TNIE
ಢಾಕಾ: ಸುಮಾರು 20 ಜನರ ಧಾರುಣ ಸಾವಿಗೆ ಕಾರಣವಾದ ಢಾಕಾ ಉಗ್ರದಾಳಿ ನಡೆಸಿದ್ದು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯಲ್ಲ ಬದಲಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಢಾಕಾದ ರೆಸ್ಟೋರೆಂಟ್ ನಲ್ಲಿ ನಡೆದ ಉಗ್ರ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಉಗ್ರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲ ನೀಡಿರುವ ಕುರಿತು ಬಾಂಗ್ಲಾದೇಶ ಪ್ರಧಾನಿ ಶೇಖ್  ಹಸೀನಾ ಅವರ ರಾಜಕೀಯ ಸಲಹೆಗಾರ ಹುಸೇನ್ ತೌಫೀಕ್  ಇಮಾಮ್ ಆರೋಪಿಸಿದ್ದಾರೆ. ಢಾಕಾ ದಾಳಿ ಕುರಿತಂತೆ ಮಾಧ್ಯಮವೊಂದರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ  ತೌಫಿಕ್ ಇಮಾಮ್, "ಹಿಂದಿನಿಂದಲೂ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಹಿಂದೆ ಪಾಕಿಸ್ತಾನ ನಿರಂತರ ಪ್ರೋತ್ಸಾಹ ಹಾಗೂ ನೆರವು ನೀಡುತ್ತಿದೆ" ಎಂದು  ಆರೋಪಿಸಿದ್ದಾರೆ.

ಅಲ್ಲದೆ "ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಉಗ್ರರಿಗೆ ತರಬೇತಿ ಮತ್ತು ನೆರವು ನೀಡುವ ಮೂಲಕ ಬಾಂಗ್ಲಾದೇಶದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಐಎಸ್ಐ ಮತ್ತು  ಬಾಂಗ್ಲಾದೇಶದ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ನೊಂದಿಗೆ ಕೈ ಜೋಡಿಸಿರುವ ಕುರಿತು ಶಂಕೆ ಇದ್ದು, ದಾಳಿಯಲ್ಲಿ ಇಸಿಸ್ ಹೆಸರು ಬಳಕೆಯಾಗಿದೆ ಅಷ್ಟೇ. ಆದರೆ ದಾಳಿ ಹಿಂದೆ  ಐಎಸ್ಐನ ಕೈವಾಡವಿದೆ. ಬಾಂಗ್ಲಾದೇಶದಲ್ಲಿ ಇಸಿಸ್ ಉಗ್ರಗಾಮಿ ಸಂಘಟನೆಯ ಆಸ್ತಿತ್ವವೇ ಇಲ್ಲ ಎಂದಾಗ ದಾಳಿ ಮಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಅಂತೆಯೇ  ಕಾರ್ಯಾಚರಣೆ ವೇಳೆ ಓರ್ವ ಉಗ್ರನನ್ನು ಜೀವ೦ತವಾಗಿ ಸೆರೆ ಹಿಡಿಯಲಾಗಿದ್ದು, ತನಿಖೆಗೆ ಇದು ಸಹಕಾರಿಯಾಗಲಿದೆ. ಈತನ ವಿಚಾರಣೆ ಪೂರ್ಣಗೊ೦ಡ ಬಳಿಕ ಸತ್ಯ ಬೆಳಕಿಗೆ ಬರಲಿದೆ ಎ೦ದು ಇಮಾಮ್ ತಿಳಿಸಿದ್ದಾರೆ.

ಇದೇ ರೀತಿಯ ಅಭಿಪ್ರಾಯವನ್ನು ಬಾಂಗ್ಲಾದೇಶದ ಗೃಹ ಸಚಿವ ಅಸಾದುಜ್ಜಾಮನ್ ಖಾನ್ ಅವರು ವ್ಯಕ್ತಪಡಿಸಿದ್ದು, ಉಗ್ರ ದಾಳಿ ಯಾವುದೇ ಒಂದು ನಿರ್ಧಿಷ್ಟ ಧರ್ಮ ಅಥವಾ ಜಾತಿ ವಿರುದ್ಧ  ನಡೆದ್ದಲ್ಲ. ಬದಲಿಗೆ ಇದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ನೇತೃತ್ವದ ಸರ್ಕಾರದ ವಿರುದ್ಧದ ಪಿತೂರಿ ಎಂದು ಖಾನ್ ಹೇಳಿದರು. ಭಯೋತ್ಪಾದನೆ ಎಂಬುದು ಇತ್ತೀಚೆಗೆ  ಬಾಂಗ್ಲಾದೇಶದಲ್ಲಿ ಫ್ಯಾಷನ್ ಆಗಿಹೋಗಿದ್ದು, ಸಣ್ಣ ಪುಟ್ಟ ಅಪರಾಧಗಳನ್ನು ಮಾಡಿಕೊಂಡು ತಿರುಗುತ್ತಿದ್ದ ಅಪರಾಧಿಗಳೆಲ್ಲಾ ಇದೀಗ ಬಂದೂಕುಗಳನ್ನು ಹಿಡಿದು ಉಗ್ರವಾದಿಗಳಾಗುತ್ತಿದ್ದಾರೆ, ಅಲ್  ಖೈದಾ ಮತ್ತು ಇಸಿಸ್ ಸಂಘಟನೆಯ ಸದಸ್ಯರು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಅವರು ಟೀಕಿಸಿದರು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp