ನೈಋತ್ಯ ಇರಾನ್ ನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯ ಆರ್ಭಟಕ್ಕೆ 70 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಾರು ಹಳ್ಳಿಗಳು ಹಾಗೂ ಪಟ್ಟಣಗಳು ಪ್ರವಾಹಪೀಡಿತವಾಗಿವೆ. ಮೂಲಗಳ ಪ್ರಕಾರ ಸುಮಾರು 50 ಸಾವಿರ ಜನಸಂಖ್ಯೆಯಿರುವ ಈ ನಗರದ ಬಹುತೇಕ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಪ್ರಮುಖ ನದಿಗಳ ಅಣೆಕಟ್ಟುಗಳು ತುಂಬಿದ್ದು, ಅವುಗಳ ನೀರನ್ನು ಅಧಿಕಾರಿಗಳು ಹೊರಬಿಡುತ್ತಿದ್ದು, ತೈಲ ಸಮೃದ್ಧ ಪ್ರಾಂತ್ಯವಾದ ಖುಜೆಸ್ತಾನ್‌ನ ಸುಸೆನ್ ಜಾನ್ ನಗರ ಸಂಪೂರ್ಣ ಜಲಾವೃತಗೊಂಡಿದೆ.