ಅಮೆರಿಕಾ ಭರ್ತಿಯಾಗಿದೆ, ಇನ್ನು ಯಾವ ವಲಸಿಗರಿಗೂ ಇಲ್ಲಿ ಜಾಗವಿಲ್ಲ: ಡೊನಾಲ್ಡ್ ಟ್ರಂಪ್

ಅಮೆರಿಕಾದ ದಕ್ಷಿಣ ಗಡಿಭಾಗ ಮೆಕ್ಸಿಕೊದಲ್ಲಿ ನಿರ್ಮಿಸಲಾದ ಹೊಸ ಗೋಡೆಯ ಭಾಗವೊಂದನ್ನು ...

Published: 07th April 2019 12:00 PM  |   Last Updated: 07th April 2019 09:06 AM   |  A+A-


Donald Trump

ಡೊನಾಲ್ಡ್ ಟ್ರಂಪ್

Posted By : SUD SUD
Source : ANI
ವಾಷಿಂಗ್ಟನ್: ಅಮೆರಿಕಾದ ದಕ್ಷಿಣ ಗಡಿಭಾಗ ಮೆಕ್ಸಿಕೊದಲ್ಲಿ ನಿರ್ಮಿಸಲಾದ ಹೊಸ ಗೋಡೆಯ ಭಾಗವೊಂದನ್ನು ತಪಾಸಣೆ ಮಾಡಲು ದಕ್ಷಿಣ ಕ್ಯಾಲಿಫೋರ್ನಿಯಾದ ಕ್ಯಾಲೆಕ್ಸಿಕೊಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಿದ್ದರು.

ಗಡಿಭಾಗದ ಸಮೀಪವಿರುವ ವಲಸೆ ಇಲಾಖೆಯ ಅಧಿಕಾರಿಗಳು ಮತ್ತು ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜೊತೆ ಡೊನಾಲ್ಡ್ ಟ್ರಂಪ್ ಭೇಟಿ ನೀಡಿದ್ದು ಗಡಿ ಭದ್ರತಾ ಪಡೆಯ ಡೊತೆ ದುಂಡುಮೇಜಿನ ಸಭೆ ನಡೆಸಿದರು.

ತಮ್ಮ ದೇಶದಲ್ಲಿ ವಲಸೆ ವ್ಯವಸ್ಥೆ ಭರ್ತಿಯಾಗಿದ್ದು ಅಮೆರಿಕಾಕ್ಕೆ ವಲಸಿಗರ ಪ್ರವೇಶ ಮತ್ತು ಆಶ್ರಯಕ್ಕೆ ಜಾಗವಿಲ್ಲ, ಇನ್ನೂ ಹೆಚ್ಚಿನ ಜನರಿಗೆ ಆಶ್ರಯ ನೀಡಲು ಸಾಧ್ಯವಿಲ್ಲ. ಇದಕ್ಕೂ ಹೆಚ್ಚಿಗೆ ಯಾರಾದರೂ ಬಂದು ಇಲ್ಲಿ ಆಶ್ರಯ ಪಡೆದರೆ ಅದು ಅಕ್ರಮ ವಲಸೆಯಾಗುತ್ತದೆ ಎಂದು ಹೇಳಿದರು.

ಕ್ಷಮಿಸಿ, ಇಲ್ಲಿಗೆ ಯಾರನ್ನೂ ಇನ್ನು ಮುಂದೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಶ ಈಗಾಗಲೇ ಭರ್ತಿಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 400 ಮೈಲುಗಳವರೆಗೆ ಗಡಿಯ ಗೋಡೆ ನಿರ್ಮಾಣ ಪೂರ್ಣವಾಗುತ್ತದೆ. ಗಡಿ ಸಮಸ್ಯೆಯನ್ನು ಬಗೆಹರಿಸಲು ತಮ್ಮ ಸರ್ಕಾರ ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತದೆ ಎಂದರು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp