ಈ ಒಂದು ಫೋಟೋ ಸಾವಿರ ಪದಗಳನ್ನು ಹಿಡಿದಿಟ್ಟಿದೆ, ಮನಕಲಕುವ ಫೋಟೋಗೆ ಜಾಗತಿಕ ಮನ್ನಣೆ!

ಕೆಲವೊಮ್ಮೆ ಪದಗಳಲ್ಲಿ ಹೇಳಲು ಆಗದನ್ನು ಒಂದು ಫೋಟೋ ವಿವರಿಸುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಈ ಒಂದು ಫೋಟೋ ಜಗತ್ತಿನಾದ್ಯಂತ ಗಮನ ಸೆಳೆದಿತ್ತು. ಈ ಫೋಟೋದಲ್ಲಿ ಕಾಣದ ನೋವಿದೆ.

Published: 12th April 2019 12:00 PM  |   Last Updated: 12th April 2019 01:31 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಆ್ಯಮ್‌ಸ್ಟರ್‌ಡ್ಯಾಮ್‌: ಕೆಲವೊಮ್ಮೆ ಪದಗಳಲ್ಲಿ ಹೇಳಲು ಆಗದನ್ನು ಒಂದು ಫೋಟೋ ವಿವರಿಸುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಈ ಒಂದು ಫೋಟೋ ಜಗತ್ತಿನಾದ್ಯಂತ ಗಮನ ಸೆಳೆದಿತ್ತು. ಈ ಫೋಟೋದಲ್ಲಿ ಕಾಣದ ನೋವಿದೆ. ಈ ಮನಕಲಕುವ ದೃಶ್ಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನಮುಟ್ಟಿತೆ ಗೊತ್ತಿಲ್ಲ.

ಜಾನ್ ಮೂರೆ ಎನ್ನುವ ಹಿರಿಯ ಛಾಯಾಚಿತ್ರಗಾರ ತಾಯಿ ಸಾಂಡ್ರಾ ಸ್ಯಾಂಚೆಜ್ ರಿಂದ ಮಗು ಯನೇಲಾಳನ್ನು ಭದ್ರತಾ ಅಧಿಕಾರಿಗಳು ಬೇರ್ಪಡಿಸುವ ಸಂದರ್ಭದಲ್ಲಿ ಈ ಫೋಟೋವನ್ನು ಕ್ಲಿಕ್ಕಿಸಿದ್ದರು. ಈ ಮನಕಲುಕುವ ಫೋಟೋ ಇದೀಗ ಈ ವರ್ಷದ ವರ್ಲ್ಡ್ ಪ್ರೆಸ್ ಫೋಟೋ ಪ್ರಶಸ್ತಿ ಗೆದ್ದಿದೆ. 

ತಾಯಿಯ ಕಾಲ ಬಳಿ ಅಸಾಯಕವಾಗಿ ನಿಂತಿರುವ ಮಗುವಿನ ಮುಖದಲ್ಲಿ ನೋವು, ಭಯ, ಹತಾಶೆ ಎಲ್ಲವೂ ಮಿಳಿತವಾಗಿದೆ. ಅಮ್ಮನನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರೆ ಮಗು ಅಳುತ್ತಾ ದಿಕ್ಕೆ ತೋಚದೆ ನಿಂತಿರುವ ಈ ದೃಶ್ಯ ಕಲ್ಲು ಹೃದಯದ ಮನಸ್ಸಿನವರೂ ಮರುಗುವಂತಿದೆ. 

ಮೆಕ್ಸಿಕೋ-ಅಮೆರಿಕ ಗಡಿಯ ಮೂಲಕವಾಗಿ ಪ್ರತಿವರ್ಷ ಹಲವಾರು ಮಂದಿ ಅನಧಿಕೃತವಾಗಿ ಅಮೆರಿಕವನ್ನು ಪ್ರವೇಶಿಸುತ್ತಾರೆ. ಈ ವೇಳೆ ಸಿಕ್ಕಿಬಿದ್ದವರನ್ನು ಜೈಲಿಗಟ್ಟಲಾಗುತ್ತದೆ. ಅನಧಿಕೃತವಾಗಿ ಗಡಿ ದಾಟಿ ಬಂದವರಲ್ಲಿ ಮಗು ಹಾಗೂ ತಾಯಿ ಇದ್ದರೆ ಇಬ್ಬರನ್ನೂ ಪ್ರತ್ಯೇಕಿಸಿ ಬೇರೆ ಬೇರೆಯಾಗಿ ಜೈಲು ಶಿಕ್ಷೆ ನೀಡಲಾಗುತ್ತದೆ. ಈ ನಿಮಯ ವಿಶ್ವಮಟ್ಟದಲ್ಲಿ ಸಾಕಷ್ಟು ಪ್ರತಿರೋಧಕ್ಕೂ ಕಾರಣವಾಗಿತ್ತು. 

1955ರಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಛಾಯಾಚಿತ್ರವನ್ನು ತೆಗೆಯುವ ಫೋಟೋಗ್ರಾಫರ್ ಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ. ವಿಶ್ವದ ಅತಿದೊಡ್ಡ ಛಾಯಾಚಿತ್ರ ಪ್ರಶಸ್ತಿಯಲ್ಲಿ ದೃಶ್ಯದ ಸೃಜನಶೀಲತೆ, ಛಾಯಾಚಿತ್ರಗಾರನ ಕೌಶಲ್ಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp