ರೂಂನಲ್ಲಿದ್ದ ಕಂಪ್ಯೂಟರ್ ಕ್ಯಾಮೆರಾ ಆಫ್ ಮಾಡದ ಪತಿ, ಪತ್ನಿಯ ರಾಸಲೀಲೆ ದೃಶ್ಯ ರೆಕಾರ್ಡ್, ವಿಡಿಯೋ ವೈರಲ್!

ಕೆಟ್ಟು ಹೋಗಿದೆ ಅಂತಾ ಪತಿರಾಯ ತನ್ನ ರೂಂನಲ್ಲಿದ್ದ ಕಂಪ್ಯೂಟರ್ ಮೇಲಿನ ಕ್ಯಾಮೆರಾವನ್ನು ಆಫ್ ಮಾಡದೆ ಹಾಗೆ ಕೆಲಸಕ್ಕೆ ಹೋಗಿದ್ದ ಆದರೆ ರಾತ್ರಿ ಮನೆಗೆ ಬಂದು ನೋಡಿದಾಗ ಪತ್ನಿಯ ರಾಸಲೀಲೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಕೆಟ್ಟು ಹೋಗಿದೆ ಅಂತಾ ಪತಿರಾಯ ತನ್ನ ರೂಂನಲ್ಲಿದ್ದ ಕಂಪ್ಯೂಟರ್ ಮೇಲಿನ ಕ್ಯಾಮೆರಾವನ್ನು ಆಫ್ ಮಾಡದೆ ಹಾಗೆ ಕೆಲಸಕ್ಕೆ ಹೋಗಿದ್ದ ಆದರೆ ರಾತ್ರಿ ಮನೆಗೆ ಬಂದು ನೋಡಿದಾಗ ಪತ್ನಿಯ ರಾಸಲೀಲೆ ಕಂಡು ಬೆಚ್ಚಿಬಿದ್ದಿದ್ದಾನೆ. 
ಈ ವಿಡಿಯೋವನ್ನೇ ಸಾಕ್ಷಿಯಾಗಿ ಮುಂದಿಟ್ಟುಕೊಂಡು ಪತಿ ಯಂಗ್ ಎಂಬಾತ ವಿಚ್ಛೇದನ ಪಡೆದುಕೊಂಡಿದ್ದಾನೆ. ಆ ದಿನ ನನ್ನ ಕಂಪ್ಯೂಟರ್ ಕ್ಯಾಮೆರಾ ಕೆಟ್ಟು ಹೋಗಿತ್ತು. ಹಾಗಾಗಿ ನಾನು ಅದನ್ನು ಆಫ್ ಮಾಡಿರಲಿಲ್ಲ. ಆದರೆ ಆ ಕ್ಯಾಮೆರಾ ವರ್ಕ್ ಆಗುತ್ತಿತ್ತು. ನನ್ನ ಪತ್ನಿ ಹಾಗೂ ನನ್ನ ಆತ್ಮೀಯ ಗೆಳೆಯ ಅಶ್ಲೀಲವಾಗಿ ವರ್ತಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಇಬ್ಬರು ಸೆಕ್ಸ್ ಮಾಡಿದ್ದಾರೆ ಎಂದು ಯಂಗ್ ಹೇಳಿದ್ದಾನೆ. 
ನಮ್ಮಿಬ್ಬರ ಮದುವೆಯಾಗಿ 20 ವರ್ಷವಾಗಿತ್ತು. ಈ ವಿಡಿಯೋದಿಂದ ನನ್ನ ಜೀವನ ಹಾಳಾಗಿ ಹೋಗಿದೆ ಎಂದು ಯಂಗ್ ಆರೋಪಿಸಿದ್ದಾನೆ. ಅಲ್ಲದೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com