ಸಂಪೂರ್ಣ ನಗ್ನವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರನ್ನು ಚೇಸ್ ಮಾಡಿ ಹಿಡಿದ ಪೊಲೀಸರು!

ಸಂಪೂರ್ಣವಾಗಿ ಬೆತ್ತಲಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವತಿಯರನ್ನು ಪೊಲೀಸರು ಸುಮಾರು ಒಂದು ಗಂಟೆ ಕಾಲ ಚೇಸ್ ಮಾಡಿ ಬಂಧಿಸಿದ್ದಾರೆ.

Published: 14th April 2019 12:00 PM  |   Last Updated: 14th April 2019 07:18 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ವಾಷಿಂಗ್ಟನ್: ಸಂಪೂರ್ಣವಾಗಿ ಬೆತ್ತಲಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವತಿಯರನ್ನು ಪೊಲೀಸರು ಸುಮಾರು ಒಂದು ಗಂಟೆ ಕಾಲ ಚೇಸ್ ಮಾಡಿ ಬಂಧಿಸಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿ ಮೂವರು ಯುವತಿಯರು ಬೆತ್ತಲಾಗಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೊಲೀಸರು ಇಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಇದಕ್ಕೆ ಕೊಕ್ಕೆ ಹಾಕದ ಯುವತಿಯರು ಕಾರನ್ನು ಪೊಲೀಸರ ಮೇಲೆ ಹರಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿಂದ ಪಾರಾದ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗುವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಯುವತಿಯರನ್ನು ಕಾರು ನಿಲ್ಲಿಸುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಹೆದ್ದಾರಿಯಲ್ಲಿ ವೇಗವಾಗಿ ಕಾರಿನಲ್ಲಿ ಹೋಗುತ್ತಿದ್ದರಿಂದ ಸುಮಾರು 33 ಕಿ.ಮೀ ದೂರದವರೆಗೂ ಚೇಸ್ ಮಾಡಿ ಕೊನೆಗೆ ಅವರನ್ನು ಅಡ್ಡಗಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು 18 ವರ್ಷದ ಓಯಸಿಸ್, 19 ವರ್ಷದ ಜೆನಿಯಾ ಮತ್ತು ಸೆಸಿಲಿಯಾ ಎಂದು ಗುರುತಿಸಲಾಗಿದೆ. ಇನ್ನು ಇವರ ವಿರುದ್ಧ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ, ಬಂಧನ ತಡೆಗಟ್ಟುವುದು, ತಪ್ಪಿಸಿಕೊಳ್ಳಲು ಯತ್ನ, ಅಸಭ್ಯ ಪ್ರದರ್ಶನ ಮುಂತಾದ ಕಾನೂನುಗಳಡಿ ಕೇಸ್ ದಾಖಲಿಸಲಾಗಿದೆ.
Stay up to date on all the latest ಅಂತಾರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp