ಗ್ರಾಹಕರ ವೆಬ್ ತಾಣಗಳ ಹ್ಯಾಕ್: ದುಬೈನಲ್ಲಿ ಭಾರತೀಯನಿಗೆ ಜೈಲು

ತಾನು ಕೆಲಸಕ್ಕಿದ್ದ ಸಂಸ್ಥೆಯ 15 ಗ್ರಾಹಕರ ವೆಬ್ ಸೈಟ್ ಗಳ ಹ್ಯಾಕ್ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿಗೆ ದುಬೈ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಗಡಿಪಾರಿನ ಶಿಕ್ಷೆ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದುಬೈ: ತಾನು ಕೆಲಸಕ್ಕಿದ್ದ ಸಂಸ್ಥೆಯ 15  ಗ್ರಾಹಕರ ವೆಬ್ ಸೈಟ್ ಗಳ ಹ್ಯಾಕ್ ಮಾಡಿದ್ದ  ಭಾರತೀಯ ಮೂಲದ ವ್ಯಕ್ತಿಗೆ ದುಬೈ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಗಡಿಪಾರಿನ ಶಿಕ್ಷೆ ವಿಧಿಸಿದೆ.
ಸೋಮವಾರ ದುಬೈ ಕೋರ್ಟ್ ಆಫ್ ಫಸ್ಟ್ ಇನ್ಸ್ಟನ್ಸ್ ಭಾರತೀಯ ಮೂಲದ ಐಟಿ ಪ್ರೋಗ್ರಾಮರ್ ಗೆ ಶಿಕ್ಷೆ ವಿಧಿಸಿದೆ ಎಂದು ಲ್ಫ್ ನ್ಯೂಸ್ ವರದಿ ಮಾಡಿದೆ. ಅಧಿಕೃತ ದಾಖಲೆಗಳ ಪ್ರಕಾರ, ಮಾಧ್ಯಮ ಕಂಪೆನಿಯೊಂದಿಗೆ ಕಂಪ್ಯೂಟರ್ ಪ್ರೊಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದ. ಇದಕ್ಕೂ ಮುನ್ನ ಸಂಸ್ಥೆ ಈ ಉದ್ಯೋಗಿಯ ವೇತನದಿಂದ 1,080 ಡಾಲರ್ ಮೊತ್ತವನ್ನು ಕಡಿತ ಮಾಡಿತ್ತು. ಆಗ ಉದ್ಯೋಗಿ ಸಂಸ್ಥೆಗೆ ರಾಜೀನಾಮೆ ಸಲ್ಲಿಸಿದ್ದಲ್ಲದೆ ಅವರ ಗ್ರಾಹಕರ ವೆಬ್ ಸೈಟ್ಗಳನ್ನು ಹ್ಯಾಕ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಆರೊಪಿಯು ಸಹೋದ್ಯೋಗಿ ಒಬ್ಬನ ವಾಟ್ಸ್ ಅಪ್ ನಂಬರ್ ಗೆ ಸಂದೇಶ  ಕಳಿಸಿದ್ದು ಒಂದು ವೇಳೆ ಸಂಸ್ಥೆ ನನ್ನ ವೇತನದಿಂದ ಕಡಿತ ಮಾಡಿಕೊಂಡ ಹಣ ಹಿಂತಿರುಗಿಸದಿದ್ದಲ್ಲಿ ತಾನು ಅವರ ಗ್ರಾಹಕರ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತೇನೆ ಎಂದಿದ್ದನು.
ಇನ್ನು ಆರೋಪಿಯ ಗುರುತನ್ನು ನ್ಯಾಯಾಲಯ, ಮಾದ್ಯಮವಾಗಲಿ ಬಹಿರಂಗಪಡಿಸಿಲ್ಲ. ಸದ್ಯ ಸೆರೆವಾಸ ಅನುಭವಿಸುವ ಆರೋಪಿ ಬಿಡುಗಡೆಯಾದ ತಕ್ಷಣ ಗಡಿಪಾರು ಶಿಕ್ಷೆಗೆ ಒಳಗಾಗಲಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com