ಶ್ರೀಲಂಕಾ ಬಾಂಬ್ ದಾಳಿ ಹಿಂದೆ ಪಾಕಿಸ್ತಾನದ ಐಎಸ್ ಐ ಕೈವಾಡ ? ಎಂಕ್ಯೂಎಂ ಮುಖ್ಯಸ್ಥ ಅಲ್ತಾಫ್ ಹುಸೇನ್

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ಸಂಭವಿಸಿರುವ ಬಾಂಬ್ ಸ್ಟೋಟದ ಹಿಂದೆ ಪಾಕಿಸ್ತಾನದ ಮಿಲಿಟರಿ ಮತ್ತು ಅದರ ಗುಪ್ತಚರ ಇಲಾಖೆ ಐಎಸ್ ಐ ಕೈವಾಡವಿರುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಉಚ್ಚಾಟಿತ ರಾಜಕಾರಣಿ, ಎಂಕ್ಯೂಎಂ ಮುಖ್ಯಸ್ಥ ಅಲ್ತಾಫ್ ಹುಸೇನ್ ಹೇಳಿದ್ದಾರೆ.
ಅಲ್ತಾಫ್ ಹುಸೇನ್
ಅಲ್ತಾಫ್ ಹುಸೇನ್

ಲಂಡನ್ : ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು  ಸಂಭವಿಸಿರುವ ಬಾಂಬ್ ಸ್ಟೋಟದ ಹಿಂದೆ ಪಾಕಿಸ್ತಾನದ ಮಿಲಿಟರಿ ಮತ್ತು ಅದರ ಗುಪ್ತಚರ ಇಲಾಖೆ ಐಎಸ್ ಐ ಕೈವಾಡವಿರುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಉಚ್ಚಾಟಿತ ರಾಜಕಾರಣಿ, ಎಂಕ್ಯೂಎಂ ಮುಖ್ಯಸ್ಥ ಅಲ್ತಾಫ್ ಹುಸೇನ್ ಹೇಳಿದ್ದಾರೆ.

ಶ್ರೀಲಂಕಾದಲ್ಲಿನ ಅಮಾನುಷ ದಾಳಿಯ ಹಿಂದೆ ಪಾಕಿಸ್ತಾನ ಮಿಲಿಟರಿ ಮತ್ತು ಐಎಸ್ ಐ ಕೈವಾಡದ ಶಂಕೆಯನ್ನು ಅಲ್ಲಗಳೆಯಬೇಡಿ ಎಂದು ಎಲ್ಲಾ ಪ್ರಜಾಸತತ್ಮಕ ರಾಷ್ಟ್ರಗಳು ಹಾಗೂ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಳಿ  ಅಲ್ತಾಪ್ ಮನವಿ ಮಾಡಿಕೊಂಡಿದ್ದಾರೆ.

ಶ್ರೀಲಂಕಾದ ಕೊಲಂಬೊ, ನೆಗೊಂಬೊ, ಕೊಚ್ಚಿಕಾಡೆ, ಬಟ್ಟಿಕಾಲೋಹಾ ಮತ್ತಿತರ ಕಡೆಗಳಲ್ಲಿ ಸಂಭವಿಸಿರುವ ಬಾಂಬ್ ಸ್ಪೋಟವನ್ನು ಅವರು ತೀವ್ರವಾಗಿ ಖಂಡಿಸಿದ್ದು, ಮೃತರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಂದು ಸಿದ್ಧಾಂತದಡಿಯಲ್ಲಿ ನಾವೆಲ್ಲರೂ ಸಂಘಟಿತರಾಗುವ ಮೂಲಕ ಜಗತ್ತಿನಾದ್ಯಂತ ಉಗ್ರಗಾಮಿತ್ವವನ್ನು ಬೇರು ಸಮೇತ ಕಿತ್ತೊಗೆಯಬಹುದು ಎಂದು ಅಲ್ತಾಫ್ ಹುಸೇನ್ ಪ್ರತಿಪಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com