'ಪೈಶಾಚಿಕ ಕೃತ್ಯ; ಶ್ರೀಲಂಕಾ ಸರಣಿ ಸ್ಫೋಟ ಕುರಿತು ವಿದೇಶಾಂಗ ಇಲಾಖೆ ಟೀಕೆ, ಭಾರತೀಯರಿಗಾಗಿ ಸಹಾಯವಾಣಿ ಆರಂಭ

ಉಗ್ರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ. ಅಲ್ಲದೆ ಶ್ರೀಲಂಕಾದಲ್ಲಿರುವ ಭಾರತೀಯರ ನೆರವಿಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸಹಾಯವಾಣಿ ತೆರೆದಿರುವುದಾಗಿ ಘೋಷಣೆ ಮಾಡಿದೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ಕೊಲೊಂಬೊ: ಶ್ರೀಲಂಕಾದಲ್ಲಿ ಇಂದು ಬೆಳಗ್ಗೆ ನಡೆದ ಭೀಕರ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಉಗ್ರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು  ಹೇಳಿದೆ. ಅಲ್ಲದೆ ಶ್ರೀಲಂಕಾದಲ್ಲಿರುವ ಭಾರತೀಯರ ನೆರವಿಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸಹಾಯವಾಣಿ ತೆರೆದಿರುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್​​ ಜೊತೆ ಸಂಪರ್ಕದಲ್ಲಿದ್ದೇವೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಶ್ರೀಲಂಕಾದ ಕೊಲೊಂಬೊ ಮತ್ತು ಬಟ್ಟಿಕಲೈನಲ್ಲಿ ಸ್ಫೋಟ ಸಂಭವಿಸಿರುವ ವರದಿಯಾಗಿದ್ದು, ನಾವು ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ನೆರವಿನ ಅಗತ್ಯ ಇರುವ ಎಲ್ಲಾ ಭಾರತೀಯರು ನಮ್ಮನ್ನ ಸಂಪರ್ಕಿಸಬಹುದು ಎಂದು +94777903082 +94112422788 +94112422789 ನಂಬರ್​​ಗಳನ್ನು ನೀಡಿದ್ದಾರೆ. ಭಾರತೀಯರು ಸಹಾಯಕ್ಕಾಗಿ ಈ ನಂಬರ್ ಗಳನ್ನ ಸಂಪರ್ಕಿಸಬಹುದು ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಅಂತೆಯೇ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಶ್ರೀಲಂಕಾದಲ್ಲಿರುವ ಭಾರತೀಯರು ಈ ಟ್ವೀಟ್ ಅನ್ನು ಷೇರ್ ಮಾಡುತ್ತಿದ್ದಾರೆ. 
ಇನ್ನು ಶ್ರೀಲಂಕಾದ ಒಟ್ಟು ಎಂಟು ಕಡೆ ಸರಣಿ ಸ್ಫೋಟ ನಡೆದಿದ್ದು, ಈ ಪೈಶಾಚಿಕ ಕೃತ್ಯವನ್ನುಐಸಿಸ್​ ಉಗ್ರರು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಸಾವು, ನೋವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ವರದಿಗಳ ಪ್ರಕಾರ 137ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com