ಶ್ರೀಲಂಕಾ ಚರ್ಚ್ ಮೇಲೆ ಭೀಕರ ಸರಣಿ ಬಾಂಬ್ ದಾಳಿ: 10 ದಿನಗಳ ಮೊದಲೇ ದಾಳಿ ಕುರಿತು ಎಚ್ಚರಿಕೆ ನೀಡಿದ್ದ ಪೊಲೀಸ್ ಮುಖ್ಯಸ್ಥ!

ಈಸ್ಟರ್ ಸಂಡೇ ದಿನ ಶ್ರೀಲಂಕಾದ ಮೂರು ಚರ್ಚ್ ಗಳಲ್ಲಿ ಬಾಂಬ್ ದಾಳಿಗಳಾಗಿದ್ದು 137 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಸ್ಪೋಟಕ ಮಾಹಿತಿಯೊಂದು ಹೊರಬಂದಿದ್ದು ಹತ್ತು ದಿನಗಳ ಹಿಂದೆಯೇ ....
ಶ್ರೀಲಂಕಾ ಚರ್ಚ್ ಮೇಲೆ ಭೀಕರ ಸರಣಿ ಬಾಂಬ್ ದಾಳಿ
ಶ್ರೀಲಂಕಾ ಚರ್ಚ್ ಮೇಲೆ ಭೀಕರ ಸರಣಿ ಬಾಂಬ್ ದಾಳಿ
ಕೊಲಂಬೋ: ಈಸ್ಟರ್ ಸಂಡೇ ದಿನ ಶ್ರೀಲಂಕಾದ ಮೂರು ಚರ್ಚ್ ಗಳಲ್ಲಿ ಬಾಂಬ್ ದಾಳಿಗಳಾಗಿದ್ದು 137 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಸ್ಪೋಟಕ ಮಾಹಿತಿಯೊಂದು ಹೊರಬಂದಿದ್ದು ಹತ್ತು ದಿನಗಳ ಹಿಂದೆಯೇ ಶ್ರೀಲಂಕಾದ ಪಾರಂಪರಿಕ ಚರ್ಚ್ ಗಳ ಮೇಲೆ ಬಾಂಬ್ ದಾಳಿ ನಡೆಯಲಿದೆ ಎಂದು ಶ್ರೀಲಂಕಾದ ಪೊಲೀಸ್ ಮುಖ್ಯಸ್ಥ ಎಚ್ಚರಿಕೆ ನೀಡಿದ್ದರು.
ಪೊಲೀಸ್ ಮುಖ್ಯಸ್ಥ ಪೂಜೂತ್ ಜಯಸುಂದರ  ಅವರು ಏಪ್ರಿಲ್ 11ರಂದು ಶ್ರೀಲಂಕಾದ  ಉನ್ನತ ತನಿಖಾಧಿಕಾರಿಗಳಿಗೆ ಈ ಕುರಿತು ಎಚ್ಚರಿಕೆ ನೀಡಿದ್ದರು ಎಂದು ಎ.ಎಫ್.ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
"ಪ್ರಮುಖ ಚರ್ಚುಗಳು ಮತ್ತು ಕೊಲಂಬೋದಲ್ಲಿನ ಭಾರತೀಯ  ಹೈಕಮಿಷನರ್ ಕಛೇರಿಯನ್ನು ಗುರಿಯಾಗಿಟ್ಟು  ಆತ್ಮಹತ್ಯೆ ದಾಳಿಯನ್ನು ನಡೆಸಲು ಎನ್.ಟಿ.ಜೆ (ನ್ಯಾಷನಲ್ ಥೌಹೀತ್ ಜಮಾಥ್) ಸಂಘಟನೆ ಯೋಜಿಸುತ್ತಿದೆ ಎಂದು ಒಂದು ವಿದೇಶಿ ಗುಪ್ತಚರ ಸಂಸ್ಥೆ ವರದಿ ಮಾಡಿದೆ" ಎಂದು ಜಯಸುಂದರ ಎಚ್ಚರಿಕೆ ನೀಡಿದ್ದರು.
ಎನ್ ಟಿಜೆ ಶ್ರೀಲಂಕಾದಲ್ಲಿನ ಒಂದು ಮೂಲಭೂತವಾದಿ ಮುಸ್ಲಿಂ ಸಂಘಟನೆಯಾಗಿದ್ದು ಅದು ಬೌದ್ಧ ಪ್ರತಿಮೆಗಳ ನಾಶದ ಘಟನೆ ನಡೆದಾಗ ಜಗತ್ತಿನ ಗಮನ ಸೆಳೆದಿತ್ತು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com