
ಸ್ಫೋಟಗೊಂಡ ಸ್ಥಳ
Source : Online Desk
ಕೊಲಂಬಾ: ಶ್ರೀಲಂಕಾದ ಕೊಲಂಬಾದಲ್ಲಿ ಈಸ್ಟರ್ ಹಬ್ಬದ ದಿನವಾದ ಭಾನುವಾರ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಐವರು ಕನ್ನಡಿಗರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.
ಬೆಂಗಳೂರಿನಿಂದ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದ ಏಳು ಜೆಡಿಎಸ್ ಮುಖಂಡರ ಪೈಕಿ ಐವರು ಮೃತಪಟ್ಟಿದ್ದು, ಇನ್ನು ಇಬ್ಬರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟವರನ್ನು ಎಂ. ರಂಗಪ್ಪ, ಬೆಂಗಳೂರಿನ ಕೆಜಿ ಹನುಮಂತರಾಯಪ್ಪ, ಲಕ್ಷ್ಮಿನಾರಾಯಣ, ತುಮಕೂರಿನ ರಮೇಶ್ ಹಾಗೂ ಶಿವಣ್ಣ ಎಂದು ಗುರುತಿಸಲಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರ ಮತ ಪ್ರಚಾರ ಮುಗಿಸಿದ ಬಳಿಕ ಇವರೆಲ್ಲ ಶ್ರೀಲಂಕಾಗೆ ಪ್ರವಾಸ ಕೈಗೊಂಡಿದ್ದು, ಅಲ್ಲಿಯ ಶಾಂಗ್ರಿಲ್ಲಾ ಹೋಟೆಲ್‌ನಲ್ಲಿ ತಂಗಿದ್ದರು.
ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ ಹಲವು ಭಾರತೀಯರು ಸೇರಿ 290 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಸುಮಾರು 500 ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ತಿಳಿಸಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news